ಪುತ್ತೂರು:ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಆರೋಗ್ಯ ಆಯೋಗ ಹಾಗೂ ಕಥೋಲಿಕ್ ಸಭಾ ಉಪ್ಪಿನಂಗಡಿ ಘಟಕ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ, ಡಾ.ಅಂಬೇಡ್ಕರ್ ವೃತ್ತ ಮಂಗಳೂರು, ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಹಾಗೂ ಮಣಿಪಾಲ್ ಕಾಲೇಜು ಆಫ್ ಡೆಂಟಲ್ ಸೈನ್ಸಸ್ ಮಂಗಳೂರು ಇದರ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ಶಿಬಿರ, ಹೃದಯ ಹಾಗೂ ದಂತ ತಪಾಸಣೆ ಕಾರ್ಯಕ್ರಮ ಡಿ.17 ರಂದು ಉಪ್ಪಿನಂಗಡಿ ಸೈಂಟ್ ಮೇರೀಸ್ ಶಾಲಾ ಸಭಾಂಗಣದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಜರಗಲಿದೆ.
ಶಿಬಿರದಲ್ಲಿ ಹೃದಯ ರೋಗ, ಸಾಮಾನ್ಯ ರೋಗ, ಕಿವಿ, ಮೂಗು ಮತ್ತು ಗಂಟಲು, ಎಲುಬು ಮತ್ತು ಕೀಲು, ಕಣ್ಣಿನ ತಪಾಸಣೆ, ಚಿಕಿತ್ಸೆ, ದಂತ ಚಿಕಿತ್ಸೆ, ಮಕ್ಕಳ ವಿಭಾಗಗಳಿದ್ದು, ಶಿಬಿರದಲ್ಲಿ ಉಚಿತ ಬಿ.ಪಿ ಹಾಗೂ ಮಧುಮೇಹ ತಪಾಸಣೆ, ಉಚಿತ ಔಷಧಿ ವಿತರಣೆ (ಲಭ್ಯವಿರುವ ಔಷಧಿಗಳು ಮಾತ್ರ), ಅಗತ್ಯವಿರುವವರಿಗೆ ಉಚಿತ ಇಸಿಜಿ ಪರೀಕ್ಷೆ, ಉಚಿತ ಓದುವ ಕನ್ನಡಕ ವಿತರಣೆ ಲಭ್ಯವಿರುತ್ತದೆ.
*ಶಿಬಿರದಲ್ಲಿ ತಪಾಸಣೆ ಮತ್ತು ಲಭ್ಯ ಔಷಧಿಗಳು ಸಂಪೂರ್ಣ ಉಚಿತ.
*ಶಿಬಿರಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಕೆಎಂಸಿ ಆಸ್ಪತ್ರೆಯ ಹಸಿರು ಕಾರ್ಡ್ ನೀಡಲಾಗುವುದು. ಈ ಹಸಿರು ಕಾರ್ಡು ಮೂಲಕ ಶಸ್ತ್ರಚಿಕಿತ್ಸೆಗೆ ಗರಿಷ್ಠ ರೂ.10 ಸಾವಿರ ಮತ್ತು ಇತರ ಚಿಕಿತ್ಸೆಗೆ ಗರಿಷ್ಠ ರೂ.5 ಸಾವಿರದ ವರೆಗೆ ಆಸ್ಪತ್ರೆಯ ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಕಾರ್ಡು ಸಿಕ್ಕಿದ ಒಂದು ತಿಂಗಳೊಳಗೆ ಆಸ್ಪತ್ರೆಗೆ ಹೋಗಬೇಕು.