ಪುತ್ತೂರು: ಆರ್.ಪಿ. ಕಲಾ ಸೇವಾ ಟ್ರಸ್ಟ್ ಪಾಂಬಾರು ಇದರ ಆಶ್ರಯದಲ್ಲಿ ಗಾನ ಶಾರದೇ ಗಾಯನ ಸ್ಪರ್ಧೆ ಸೀಸನ್ 2 ಗ್ರಾಂಡ್ ಫಿನಾಲೆ ಪ್ರಶಸ್ತಿ ಪ್ರದಾನ ಸಮಾರಂಭ ಸಾಧಕರಿಗೆ ಸನ್ಮಾನ 2023 ದ.10 ಪೆರ್ಲಂಪಾಡಿ ಅಂಬೇಡ್ಕರ್ ಭವನದಲ್ಲಿ ಜರಗಿತು. ಆರ್.ಪಿ ಕಲಾ ಸೇವಾ ಟ್ರಸ್ಟ್ ಆಯೋಜಿಸಿದ್ದ ಗಾನ ಶಾರದೇ ಗಾಯನ ಸ್ಪರ್ಧೆ ಸೀಸನ್ 2 ಆನ್ಲೈನ್ ಮೂಲಕ ನಡೆಸಿದ್ದ ಆಡಿಷನ್‌ನಲ್ಲಿ ಇನ್ನೂರು ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಆಯ್ಕೆಯಾದ ನೂರ ಇಪ್ಪತ್ತು ಸ್ಪರ್ಧಿಗಳಿಗೆ ಮೂರು ಸುತ್ತುಗಳ ಸ್ಪರ್ದೆಯನ್ನು ನೀಡಲಾಗಿತ್ತು. ಮೂರನೇ ಸುತ್ತಿನಲ್ಲಿ ಭಾಗವಹಿಸಿ ಗ್ರಾಂಡ್ ಫಿನಾಲೆಗೆ ಹದಿನಾರು ಮಂದಿಗಳು ಆಯ್ಕೆಗೊಂಡಿದ್ದರು.
ಕಾರ್ಯಕ್ರಮವನ್ನು ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಶುಭಹಾರೈಸಿದರು. ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ, ಗ್ರಾಪಂ ಕಾರ್ಯದರ್ಶಿ ಜಯ ಶೇಡಿಗುರಿ, ಗ್ರಾಪಂ ಸದಸ್ಯ ಯತೀಂದ್ರ ಕೊಚ್ಚಿ, ಪೆರ್ಲಂಪಾಡಿ ಷಣ್ಮುಖದೇವ ಭಜನಾ ಮಂಡಳಿ ಅಧ್ಯಕ್ಷ ಮಂಜುನಾಥ್ ದುಗ್ಗಲ, ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಸತೀಶ್ ಪಾಂಬಾರು , ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲಾ ಸಂಚಾಲಕ ಶಿವರಾಮ್ ಭಟ್ ಬಿರ್ನಕಜೆ, ಧರ್ಮಪಾಲ ಶ್ರೇಣಿ, ಅಣ್ಣು ಕಲಾಯಿ ಉಪಸ್ಥಿತರಿದ್ದರು. ಟ್ರಸ್ಟ್‌ನ ಮಹಾ ಪೋಷಕ ಶ್ರೀಧರ್ ಎಕಡ್ಕ ಟ್ರಸ್ಟಿನ ಧ್ಯೇಯದ ಬಗ್ಗೆ ವಿವರಿಸಿದರು.
ಸಂಜೆ ನಡೆದ ಸಮಾರೋಪದಲ್ಲಿ ಮುಖ್ಯ ಅಥಿತಿಗಳಾಗಿದ್ದ ಮಾಜಿ ಸಚಿವ ಎಸ್. ಅಂಗಾರರವರು ಆರ್.ಪಿ ಕಲಾ ಸೇವಾ ಟ್ರಸ್ಟ್ ಇದರ ಪ್ರಾಯೋಜಕತ್ವದಲ್ಲಿ ಪ್ರಸಾರಗೊಳ್ಳಲಿರುವ “ಆರ್ ಪಿ ಬೆಳಕು ” ಎಂಬ ಖಾಸಗಿ ನ್ಯೂಸ್ ಪೇಪರನ್ನು ಲೋಕಾರ್ಪಣೆ ಮಾಡಿ ಆರ್.ಪಿ ಕಲಾ ಸೇವಾ ಟ್ರಸ್ಟ್ ಇದರ ಹೊಸ ಲೋಗೋವನ್ನು ಬಿಡುಗಡೆಗೊಳಿಸಿದರು ಅಲ್ಲದೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಒಬ್ಬ ಸಾಮಾನ್ಯ ವ್ಯಕ್ತಿಯ ಒಳಗಿನ ಕಲೆಗಾರಿಕೆ ಹೊರ ಪ್ರಪಂಚಕ್ಕೆ ಪ್ರಕಟವಾಗಳು ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ| ರಾಜಾರಾಮ್ ಕೆ.ಬಿ, ನಿವೃತ್ತ ಶಿಕ್ಷಕ, ಸಾಹಿತಿ ನಾರಾಯಣ ಕುಕ್ಕುವಳ್ಳಿಯವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸಿ ಬಿರುದನ್ನು ನೀಡಿ ಗೌರವಿಸಲಾಯಿತು. ಸಭಾಧ್ಯಕ್ಷತೆ ವಹಿಸಿದ್ದ ರವಿ ಪಾಂಬಾರು. ಆರ್.ಪಿ ಕಲಾ ಸೇವಾ ಟ್ರಸ್ಟ್ ಇದರ ಕಾರ್ಯವೈಖರಿಗಳ ತಿಳಿಸಿ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಕಾರಣರಾದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿ ಸಹಕಾರ ಕೋರಿದರು. ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್ ಶುಭ ಹಾರೈಸಿದರು.
ವೇದಿಕೆಯಲ್ಲಿ ರೈತ ಮಿತ್ರಕೂಟದ ಅಧ್ಯಕ್ಷ ಎಸ್ ಮುರಳೀಧರ್ ಕೆಮ್ಮಾರ, ಕೊಳ್ತಿಗೆ ಗ್ರಾಪಂ ಸದಸ್ಯ ವಸಂತ ಕುಮಾರ್ ರೈ ದುಗ್ಗಲ, ಎಎಸ್‌ಐಡಿಎಆರ್ ಅಧಿಕಾರಿ ಸುಬ್ರಾಯ ಕಲ್ಪನೆ, ಹಿನ್ನೆಲೆ ಗಾಯಕಿ, ನಟಿ ಕವಿತಾದಿನಕರ್, ಸುಳ್ಯ ಎಪಿಎಂಸಿ ಮಾಜಿ ಉಪಾಧ್ಯಕ್ಷ ನವೀನ್ ಸಾರಕೆರೆ, ಗಾಯಕ ಪದ್ಮರಾಜ್ ಚಾರ್ವಕ, ಸಾಹಿತಿ ನಾರಾಯಣ ಕುಕ್ಕುವಳ್ಳಿ, ತಾಪಂ ಮಾಜಿ ಸದಸ್ಯ ಪಿ. ರಾಮ ಉಪಸ್ಥಿತರಿದ್ದರು.
ಗಾನ ಶಾರದೇ ಸೀಸನ್ 2 ವಿನ್ನರ್ ಪ್ರಥಮ ಸ್ಥಾನವನ್ನು ರಾಜೇಶ್ ಪ್ರಭು ಹೆಬ್ರಿ, ದ್ವಿತಿಯ ಸ್ಥಾನವನ್ನು ಅನನ್ಯ ನಾರಾಯಣ್, ತೃತಿಯ ಸ್ಥಾನವನ್ನು ಹರಿಪ್ರಸಾದ್ ಸಾನಿಧ್ಯ ಸುರತ್ಕಲ್ ಪಡೆದುಕೊಂಡರು. ವಸಂತಿ ಎಣ್ಮೂರು ಪ್ರಾರ್ಥಿಸಿದರು. ಆರ್.ಪಿ ಕಲಾ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ವಿನಯ ಕುಮಾರ್ ಕುಮಾರ್ ಅಡ್ಯನಡ್ಕ ವಂದಿಸಿದರು. ಉಪಾಧ್ಯಕ್ಷ ಕುಶಾಲಪ್ಪ ಎಣ್ಮುರು ,ಕೋಶಾಧಿಕಾರಿ ಸುರೇಶ್ ಪೆರುವಾಜೆ ಸಹಕರಿಸಿದರು. ರೋಹಿತ್ ಕುರಿಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ನವ್ಯ ಕೆ. ನಿಕ್ಷಿತಾ ಆಮ್ಚಿನಡ್ಕ. ಶ್ರೇಯ ಯಸ್ ಕಡಬ ಸಹಕರಿಸಿದ್ದರು.