ಮಂಗಳೂರಿನ ವೆಸ್ಟ್‌ಕೋಸ್ಟ್ ಶೋರೂಂನಲ್ಲಿ ಕರೀಷ್ಮ ಎಕ್ಸ್‌ಎಂಆರ್ ದ್ವಿಚಕ್ರ ವಾಹನ ಬಿಡುಗಡೆ

0

ವಿಟ್ಲ: ಸದಾ ಹೊಸತನದೊಂದಿಗೆ ಹೊಸ ಹೊಸ ಮಾದರಿಯ ದ್ವಿಚಕ್ರವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವ ಪ್ರತಿಷ್ಠಿತ ವೆಸ್ಟ್ ಕೋಸ್ಟ್ ಮೋಟಾರ್ಸ್ ಇದೀಗ ಕರೀಷ್ಮ ಎಕ್ಸ್‌ಎಂಆರ್ ದ್ವಿಚಕ್ರ ವಾಹನವನ್ನು ಮಂಗಳೂರಿನ ಕಂಕನಾಡಿಯ ವೆಸ್ಟ್ ಕೋಸ್ಟ್ ಶೋರೂಂನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.ಕರೀಷ್ಮಾ 210ಸಿಸಿಯ ದ್ವಿಚಕ್ರ ವಾಹನವನ್ನು ನಟರಾದ ಅರ್ಜುನ್ ಕಾಪಿಕಾಡ್ ಮತ್ತು ಅನೂಪ್ ಸಾಗರ್‌ರವರು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ನಟ ಅರ್ಜುನ್ ಕಾಪಿಕಾಡ್ ರವರು ಮಾತನಾಡಿ, ಈ ಬೈಕ್ ನೋಡಿ ನನ್ನ ಕಾಲೇಜ್ ಡೇಸ್ ನೆನಪಾಗುತ್ತಿದೆ. ನಾವೆಲ್ಲರೂ ಬೈಕ್‌ನಲ್ಲೇ ಕಾಲೇಜ್ ಬಂಕ್ ಮಾಡಿ ಸುತ್ತಾಡುತ್ತಿದ್ದೇವು ಎಂದು ತಮ್ಮ ಹಳೆಯ ನೆನಪನ್ನು ಹಂಚಿಕೊಂಡರು. ಸಂಸ್ಥೆ ಸದಾ ಗ್ರಾಹಕ ಸ್ನೇಹಿಯಾಗಿ ವ್ಯವಹಾರ ನಡೆಸುತ್ತಿದ್ದು, ಇದು ಸಂಸ್ಥೆಯ‌ ಯಶಸ್ಸಿನ ಗುಟ್ಟು ಎಂದರು.
ನಟ ಅನೂಪ್ ಸಾಗರ್ ಅವರು ಮಾತನಾಡಿ, ವೆಸ್ಟ್‌ಕೋಸ್ಟ್ ಟೀಮ್‌ಗೆ ಶುಭಾಶಯ ತಿಳಿಸಿದ ಅವರು, ಬೈಕ್ ನನಗೆ ತುಂಬಾ ಇಷ್ಟವಾಯಿತು. ಯಾಕೆಂದರೆ ನನ್ನ ಫೇವರೆಟ್ ಬಣ್ಣವು ಕೆಂಪು. ಗ್ರಾಹಕರಿಗೆ ಸದಾ ಕೊಡುಗೆಗಳ‌ನ್ನು ನೀಡುತ್ತಿರುವ ವೆಸ್ಟ್ ಕೋಸ್ಟ್ ಮೋಟರ್ಸ್ ಗೆ ಎಲ್ಲರು ಸಹಕಾರ ನೀಡಿ‌ ಎಂದರು.

ವೆಸ್ಟ್‌ಕೋಸ್ಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಇಸ್ಮಾಯಿಲ್‌ರವರು ಮಾತನಾಡಿ, ಒಂದು ಶೋರೂಂ ಅನ್ನು ರಿನೊವೇಶನ್ ಮಾಡದಿದ್ದರೆ ಜನ ಬರುವುದಿಲ್ಲ. ಅದಕ್ಕಾಗಿ ನಾವು ಶೋರೂಂ ಅನ್ನು ರಿನೊವೇಶನ್ ಮಾಡಿದ್ದೇವೆ. ಹೀರೋ ವೆಸ್ಟ್ ಕೋಸ್ಟ್ ಮೋಟರ್‌ನಲ್ಲಿ ಸರ್ವಿಸ್, ಸ್ಪೇ‌ರ್ ಪಾರ್ಟ್ಸ್ ಒಂದೆ ಕಡೆ ಸಿಗುವುದರಿಂದ ಬೇರೆ ಕಡೆ ಹೋಗುವ ಅವಶ್ಯಕತೆ ಇರುವುದಿಲ್ಲ ಎಂದರು.

ವೆಸ್ಟ್‌ಕೋಸ್ಟನ ಮ್ಯಾನೇಜಿಂಗ್ ಡೈರೆಕ್ಟರ್ ಮಹಮ್ಮದ್‌ ರಫೀಕ್‌ರವರು ಮಾತನಾಡಿ, ವೆಸ್ಟ್‌ಕೋಸ್ಟ್‌ನಲ್ಲಿ ಆತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ. ಇದೀಗ ಕರೀಷ್ಮ ಎಕ್ಸ್‌ಎಂಆ‌ರ್ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ನೋಡಲು ಅತ್ಯಾಕರ್ಷಕವಾಗಿದ್ದು, ನಿಮ್ಮಿಷ್ಟದ ಬೈಕ್‌ನ್ನು ಖರೀದಿಸಬಹುದು ಎಂದರು.

ಇದೇ ಸಂದರ್ಭದಲ್ಲಿ ಗ್ರಾಹಕರಾದ ಸುಜಿತ್, ಕಿರಣ್ ಅವರಿಗೆ ಕರೀಷ್ಮಾ ಬೈಕ್‌ನ ಕೀಯನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂದೀಪ್ ಶೆಟ್ಟಿ, ಸಂತೋಷ್ ಆಚಾರ್ಯ ಹಾಗೂ ರಾಪಟ ಚಿತ್ರತಂಡ ಕಲಾವಿದರು, ಹಾಗೂ ವೆಸ್ಟ್ಕೋಸ್ಟ್ ಶೋರೂಂನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ವೆಸ್ಟ್ ಕೋಸ್ಟ್ ಮೋಟಾರ್ಸ್ ನ ವಿಟ್ಲ, ಮುಡಿಪು, ಕೈಕಂಬ, ಬಿಸಿ ರೋಡ್ ಶಾಖೆಗಳನ್ನು ಅಥವಾ ಮೋಬೈಲ್ ಸಂಖ್ಯೆ 8951420707 ಯನ್ನು‌ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here