ಗುಣಮಟ್ಟದಲ್ಲಿ ರಾಜಿಯಿಲ್ಲದೇ ವ್ಯಾಪಾರ ಮಾಡಿದಾಗ ಯಶಸ್ಸು ಖಚಿತ-ಶ್ರೀನಿವಾಸ್ ಎಚ್.ಬಿ
ಪುತ್ತೂರು: ಪುತ್ತೂರು ದರ್ಬೆಯಲ್ಲಿ ಕಾರ್ಯಾಚರಿಸುತ್ತಿರುವ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಮಳಿಗೆಗೆ ಭೇಟಿ ನೀಡಿದವರಿಗೆ ಕೂಪನ್ ನೀಡಿ ಚಿನ್ನದ ನಾಣ್ಯ ಗೆಲ್ಲುವ ಅವಕಾಶ ನೀಡಲಾಗಿತ್ತು. ಅದರಂತೆ ಮೂವರು ಅದೃಷ್ಟಶಾಲಿಗಳು ಚಿನ್ನದ ನಾಣ್ಯ ವಿಜೇತರಾಗಿದ್ದು ಅವರಿಗೆ ಚಿನ್ನದ ನಾಣ್ಯ ಹಸ್ತಾಂತರ ಕಾರ್ಯಕ್ರಮ ಡಿ.19ರಂದು ದರ್ಬೆ ಡಿ.ಜಿ ಫರ್ನಿಚರ್ ಮಳಿಗೆಯಲ್ಲಿ ನಡೆಯಿತು.
ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಮುಖ್ಯಗುರು ಶ್ರೀನಿವಾಸ್ ಎಚ್.ಬಿ ಮಾತನಾಡಿ ಪುತ್ತೂರಿನ ಹೃದಯ ಭಾಗದಲ್ಲಿ ಪೀಠೋಪಕರಣಗಳ ಮಳಿಗೆಯನ್ನು ಪ್ರಾರಂಭಿಸಿ ಗ್ರಾಹಕರಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿರುವ ಸಂಸ್ಥೆಯವರ ಕಾರ್ಯ ಶ್ಲಾಘನೀಯ ಎಂದರು.
ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೇ ವ್ಯಾಪಾರ ಮಾಡಿದಾಗ ಅದು ಯಶಸ್ಸನ್ನು ಕಾಣುತ್ತದೆ, ಆನ್ಲೈನ್ಗಿಂತಲೂ ಇಂತಹ ಮಳಿಗೆಗಳಿಂದ ಖರೀದಿಸುವುದರಿಂದ ಅದಕ್ಕೆ ಜವಾಬ್ದಾರಿಯಾಗಿ ಈ ಮಳಿಗೆಯವರೇ ಇರುತ್ತಾರೆ ಹಾಗಾಗಿ ಇಂತಹ ಮಳಿಗೆಗಳಿಗೆ ನಾವು ಸಹಕಾರ ಕೊಡಬೇಕು ಎಂದ ಅವರು ದೀಪಾವಳಿ ಪ್ರಯುಕ್ತ ಆಫರ್ ಪ್ರಕಟಿಸಿ ವಿಜೇತ ಅದೃಷ್ಟ ಶಾಲಿಗಳಿಗೆ ಗೋಲ್ಡ್ ಕಾಯಿನ್ ನೀಡಿರುವುದು ಖುಷಿಯಾಗಿದೆ, ಈ ಮಳಿಗೆ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.
ಗೋಲ್ಡ್ ಕಾಯಿನ್ ವಿತರಣೆ:
ನಂತರ ಪ್ರಥಮ ಅದೃಷ್ಟ ವಿಜೇತರಾದ ಶ್ವೇತಾ ಪುರುಷರಕಟ್ಟೆಯವರಿಗೆ ಶ್ರೀನಿವಾಸ್ ಎಚ್.ಬಿ ಅವರು ಗೋಲ್ಡ್ ಕಾಯಿನ್ ಹಸ್ತಾಂತರಿಸಿ ಶುಭ ಹಾರೈಸಿದರು. ಅದೃಷ್ಟಶಾಲಿಗಳಾದ ಫಾತಿಮತ್ ಶಮ್ನಾ ತಿಂಗಳಾಡಿ ಮತ್ತು ಹಸೀನಾ ಪುರುಷರಕಟ್ಟೆಯವರಿಗೆ ಡಿ.ಜಿ ಫರ್ನಿಚರ್ ಮಳಿಗೆಯ ಮಾಲಕರಾದ ಅಬ್ದುಲ್ ಖಾದರ್ ಹಾಗೂ ಅಬ್ದುಲ್ ಸಲೀಂ ಅವರು ಗೋಲ್ಡ್ ಕಾಯಿನ್ ವಿತರಿಸಿದರು.
ಬಹಳ ಖುಷಿಯಾಗಿದೆ:
ಗೋಲ್ಡ್ ಕಾಯಿನ್ ವಿಜೇತೆ ಶ್ವೇತಾ ಪುರುಷರಕಟ್ಟೆ ಮಾತನಾಡಿ ಗೋಲ್ಡ್ ಕಾಯಿನ್ ವಿಜೇತಗೊಂಡಿರುವುದು ನನಗೆ ಬಹಳ ಖುಷಿಯಾಗಿದೆ, ಡಿ.ಜಿ ಫರ್ನಿಚರ್ ಮಳಿಗೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿ.ಜಿ ಫರ್ನಿಚರ್ ಮಳಿಗೆಯ ಜಮಾಲ್ ಬೀಟಿಗೆ, ಶಿಯಾಬ್ ಬಿಟಿಗೆ, ಸಿನಾನ್ ಹಾಗೂ ಫಾರೂಕ್ ಆನಾಜೆ ಉಪಸ್ಥಿತರಿದ್ದರು. ಪತ್ರಕರ್ತ ಯೂಸುಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು. ಶಿಯಾಬ್ ಬೀಟಿಗೆ ವಂದಿಸಿದರು.