ಡಿ.23:ಮಂಗಳೂರಿನಲ್ಲಿ ಉನ್ನತ ಶಿಕ್ಷಣ ಮೇಳ 2023-ಉನ್ನತ ಶಿಕ್ಷಣದ ಅವಕಾಶಗಳ ಮಾಹಿತಿ | ಪ್ರವೇಶ ಶುಲ್ಕವಿಲ್ಲ

0

ಪುತ್ತೂರು: ಮಂಗಳೂರಿನ ಪ್ರತಿಷ್ಠಿತ ವಿಸ್ಡಮ್ ಇನ್ಸ್ಟಿಟ್ಯೂಷನ್ ನೆಟ್ ವರ್ಕ್ ಸಂಸ್ಥೆಯ ಆಯೋಜನೆಯಲ್ಲಿ ಡಿ. 23 ರಂದು “ಉನ್ನತ ಶಿಕ್ಷಣ ಮೇಳ-2023” ಕಾರ್ಯಕ್ರಮವು ಮಂಗಳೂರಿನ ನವಭಾರತ ವೃತ್ತದ ಓಷನ್ ಪರ್ಲ್ ಹೋಟೆಲ್ ನಲ್ಲಿ, ಬೆಳಗ್ಗೆಯಿಂದ ಅಪರಾಹ್ನದವರೆಗೆ ನಡೆಯಲಿದೆ. ಈ ಸಮಾರಂಭದಲ್ಲಿ ಅಂತರ್ರಾಷ್ಟ್ರೀಯ ವಿಶ್ವವಿದ್ಯಾನಿಲಯಗಳು ಮತ್ತು ಭಾರತೀಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಶೈಕ್ಷಣಿಕ ಸಾಲ ಸೌಲಭ್ಯ ಕೊಡುವ ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು ಮತ್ತು ವಿದ್ಯಾರ್ಥಿ ವೇತನ ನೀಡುವ ಸಂಸ್ಥೆಗಳು ಪಾಲ್ಗೊಳ್ಳಲಿದ್ದು, ಶೈಕ್ಷಣಿಕ ಸಾಲ ಸೌಲಭ್ಯ ಮತ್ತು ವಿದ್ಯಾರ್ಥಿ ವೇತನ ಕೊಡುಗೆಗಳು ಮತ್ತು ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಲಿದೆ.


ಈ ಕಾರ್ಯಕ್ರಮದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ದೇಶ ವಿದೇಶಗಳ ಶೈಕ್ಷಣಿಕ ತಜ್ಞರನ್ನು ಭೇಟಿಯಾಗುವ ಸುವರ್ಣಾವಕಾಶ, ಉನ್ನತ ಶಿಕ್ಷಣಕ್ಕೆ ಸ್ಥಳದಲ್ಲೇ ಪ್ರವೇಶಾತಿ ಪಡೆಯುವ ಸೌಲಭ್ಯ, ಆಕರ್ಷಕ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವ ಸದವಕಾಶವಿದ್ದು ಇವುಗಳನ್ನು ಸಾರ್ವಜನಿಕರು ಉಪಯೋಗಪಡಿಸಿಕೊಳ್ಳಬೇಕೆಂದು ಮತ್ತು ಹೆಚ್ಚಿನ ಮಾಹಿತಿಗೆ ಅಕ್ಷಯ ಕಾಲೇಜು ಹಾಗೂ ವಿಸ್ಡಮ್ ಮಂಗಳೂರು 9686328881, 7892246339, 9448451016 ನಂಬರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here