ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ವತಿಯಿಂದ ಪರ್ಪುಂಜದ ಕುಟುಂಬವೊಂದಕ್ಕೆ ಮನೆ ಹಸ್ತಾಂತರ
ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಇದರ ಅಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ ಅವರ ನೇತೃತ್ವದಲ್ಲಿ ಪರ್ಪುಂಜದಲ್ಲಿ ಬಡ ಕುಟುಂಬವೊಂದಕ್ಕೆ ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದು, ಆ ಮೂಲಕ ಮಹಮ್ಮದ್ ಕುಕ್ಕುವಳ್ಳಿ ನೇತೃತ್ವದಲ್ಲಿ 72 ಕುಟುಂಬಕ್ಕೆ ಮನೆ ನಿರ್ಮಿಸಿ ಕೊಟ್ಟಂತಾಗಿದೆ.
ಮಹಮ್ಮದ್ ಕುಕ್ಕುವಳ್ಳಿ ನೇತೃತ್ವದಲ್ಲಿ `ಸೂರಿಲ್ಲದವರಿಗೊಂದು ಆಸರೆ’ ಮೂಲಕ 71 ಕುಟುಂಬಗಳಿಗೆ ಮನೆಯ ಛಾವಣಿ ದುರಸ್ತಿ, ಮನೆ ರಿಪೇರಿ ಹಾಗೂ ಹೊಸ ಮನೆ ನಿರ್ಮಿಸಿ ಕೊಡಲಾಗಿದ್ದು, ಇದೀಗ ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಮುಖಾಂತರ ಅಂದಾಜು 3.5 ಲಕ್ಷ ರೂ ವೆಚ್ಚದಲ್ಲಿ ಪರ್ಪುಂಜದಲ್ಲಿ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಲಾಗಿದ್ದು ಅದರ ಹಸ್ತಾಂತರ ಕಾರ್ಯಕ್ರಮ ಡಿ.21ರಂದು ನಡೆಯಿತು.
ಲಯನ್ಸ್ 317ಡಿ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿಸೋಜಾ (ಪಿಎಂಜೆಎಫ್) ಅವರು ನೂತನ ಮನೆಯನ್ನು ಹಸ್ತಾಂತರಿಸಿದರು. ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಅಧ್ಯಕ್ಷ ಲ| ಮಹಮ್ಮದ್ ಕುಕ್ಕುವಳ್ಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ಲಯನ್ಸ್ 317ಡಿ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿಸೋಜಾ (ಪಿಎಂಜೆಎಫ್) ಅವರನ್ನು ಇದೇ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಲಯನ್ಸ್ ಕ್ಲಬ್ಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.