ಭಕ್ತರಿಗೆ ಸೇವಾ ರಶೀದಿ ಮಾಡಲು ಅವಕಾಶ – ಕೇಶವಪ್ರಸಾದ್ ಮುಳಿಯ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಡಿ.27ರಂದು ಜರುಗಲಿರುವ ಶ್ರೀ ಅಯ್ಯಪ್ಪ ದೀಪೋತ್ಸವದ ಅಂಗವಾಗಿ ಶ್ರೀ ಅಯ್ಯಪ್ಪ ಸನ್ನಿಧಿಯ ಬಳಿ ಸೇವಾ ಕೇಂದ್ರವನ್ನು ಉದ್ಘಾಟಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಸೇವಾ ಕೇಂದ್ರವನ್ನು ಉದ್ಘಾಟಿಸಿದರು.
ಭಕ್ತರಿಗೆ ಸೇವಾ ರಶೀದಿ ಮಾಡಲು ಅವಕಾಶ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ದೇವಳದ ಅಯ್ಯಪ್ಪ ಗುಡಿಯಲ್ಲಿ ದೇವತಾ ಕಾರ್ಯಗಳು ಎಂದಿನಂತೆ ನಡೆಯುತ್ತಿದ್ದು, ಅದಕ್ಕೆ ವಿಶೇಷ ಉತ್ಸವ ರೂಪವನ್ನು ಅಯ್ಯಪ್ಪ ಭಕ್ತವೃಂದ ಸಹಕಾರದೊಂದಿಗೆ ಮತ್ತೊಮ್ಮೆ ಚಾಲನೆ ನೀಡಲಾಗುತ್ತಿದೆ. ಸೇವಾ ಕೌಂಟರ್ ಮೂಲಕ ಹೆಚ್ಚಿನ ಸೇವೆ ಶ್ರೀ ಅಯ್ಯಪ್ಪ ದೇವರಿಗೆ ಸಲ್ಲುವಂತಾಗಲಿ ಎಂದರು. ಶಿಕ್ಷಣ ತಜ್ಞ ಕೆ.ಪಿ ಪುತ್ತೂರಾಯ ಅವರು ಶುಭ ಹಾರೈಸಿದರು.
ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ಗುರು ಸ್ವಾಮಿಗಳಾದ ದೇವಾನಂದ, ರಾಮಣ್ಣ, ಅಯ್ಯಪ್ಪ ಭಕ್ತವೃಂದವರಾದ ಸುಧಾಕರ್, ರಾಧಾಕೃಷ್ಣ ನಂದಿಲ, ರಂಜಿತ್ ಬಂಗೇರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.