*ಅಳಿಲ ಸೇವೆಯನ್ನು ಕೊಡಲು ನಾನು ನಿಮ್ಮೊಂದಿಗಿದ್ದೇನೆ – ಭಾಗೀರಥಿ ಮುರುಳ್ಯ
*ಆರ್ಥಿಕ ವ್ಯವಹಾರ ಮಾತ್ರವಲ್ಲ ಸಮಾಜಸೇವೆಯಲ್ಲೂ ಮುಂದಿರುವ ಸಂಘ – ನಳಿನ್
*ಕಾಣಿಯೂರಿನಲ್ಲಿ ಉತ್ತಮ ಸಹಕಾರಿ ಸಂಸ್ಥೆಯಾಗಿ ಮೂಡಿ ಬರಲಿ – ಶಶಿಕುಮಾರ್ ರೈ ಬಾಲ್ಯೊಟ್ಟು
*ಮಹಿಳೆಯರು ಸ್ವಾಭಿಮಾನಿಯಾಗಲು ಸಹಕಾರಿ ರಂಗ ತೋರಿಸಿದೆ – ಸಂಜೀವ ಮಠಂದೂರು
*ಸಹಕಾರಿ ಸಂಘಕ್ಕೆ ಅತ್ಯುತ್ತಮ ಉದಾಹರಣೆ ಗೌರಿ – ಉಷಾ ಅಂಚನ್
*ಮಹಿಳೆ ಅಬಳೆಯಲ್ಲ ಸಬಳೆ – ತ್ರಿವೇಣಿ
*ಅಷ್ಟಮಠಗಳ ಮೂಲಸ್ಥಾನದ ಅನುಗ್ರಹವಿರಲಿ – ಚಿದಾನಂದ ಬೈಲಾಡಿ
*ಮಾದರಿ ಸಂಘವಾಗಿ ಮೂಡಿ ಬರಲಿ-ವಿಶ್ವನಾಥ ಕೊಪ್ಪ
*ಪಂಚಮಮ್ ಕಾರ್ಯ ಸಿದ್ದಿ – ಗೌರಿ ಹೆಚ್
ಪುತ್ತೂರು: ಕರ್ನಾಟಕ ರಾಜ್ಯ ಸರಕಾರದ ಅತ್ಯುತ್ತಮ ಮಹಿಳಾ ಸಹಕಾರಿ ಸಂಘವೆಂಬ ರಾಜ್ಯ ಪ್ರಶಸ್ತಿ ಮತ್ತು ಸಹಕಾರ ಮಂಡಲದಿಂದ ಉತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ಪುರಸ್ಕೃತಗೊಂಡು ಕಳೆದ ಸತತ ನಾಲ್ಕು ವರ್ಷಗಳಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸಾಧನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಪುತ್ತೂರು ಶ್ರೀ ರಾಧಾಕೃಷ್ಣ ಮಂದಿರ ರಸ್ತೆಯಲ್ಲಿನ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ 5ನೇ ಶಾಖೆ ಡಿ.23ರಂದು ಕಡಬ ತಾಲೂಕಿನ ಕಾಣಿಯೂರು ಸಮೃದ್ಧಿ ಕಾಂಪ್ಲೆಕ್ಸ್‌ನ ಮೇಲಂತಸ್ತಿನಲ್ಲಿ ಉದ್ಘಾಟನೆಗೊಂಡಿತ್ತು.
ನನ್ನಿಂದಾದ ಸಹಕಾರ ಕೊಡಲು ನಾನು ನಿಮ್ಮೊಂದಿಗಿದ್ದೇನೆ:
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ನೂತನ ಕಾಣಿಯೂರು ಶಾಖೆಯ ಉದ್ಘಾಟಿಸಿ, ಮಾತನಾಡಿ ಮಹಿಳಾ ಸಬಳೆಯಾದಾಗ ಯಾವ ಕ್ಷೇತ್ರದಲ್ಲೂ ಅಭಿವೃದ್ದಿ ಆಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ಈ ಸಂಘ ಮೂಡಿ ಬಂದಿದೆ. ಎಲ್ಲರು ಸಹಕಾರ ನೀಡಿದಾಗ ಸಂಸ್ಥೆ ಅಭಿವೃದ್ದಿಯಾಗುತ್ತದೆ. ಮಹಿಳಾ ಸಂಸ್ಥೆ ಉತ್ತರೋತ್ತರ ಅಭಿವೃದ್ದಿಯಾಗಲಿ. ಇವತ್ತು ಮಹಿಳೆಯರಿಗೆ ಪುರುಷರು ಸಹಕಾರ ನೀಡಿದ್ದರಿಂದ ದೇವಸ್ಥಾನ, ಬ್ರಹ್ಮಕಲಶ, ಶಾಲೆಗಳು ಮಹಿಳಾ ಕ್ಷೇತ್ರವಾಗಿ ಕಾಣುತ್ತಿದೆ ಎಂದ ಅವರು ಈ ಸಂಘಕ್ಕೆ ನನ್ನಿಂದಾಗುವ ಸಣ್ಣ ಸಹಕಾರ ನೀಡುತ್ತೇನೆ. ಅಳಿಲ ಸೇವೆಯನ್ನು ಕೊಡಲು ನಾನು ನಿಮ್ಮೊಂದಿಗಿದ್ದೇನೆ ಎಂದರು.
ಆರ್ಥಿಕ ವ್ಯವಹಾರ ಮಾತ್ರವಲ್ಲ ಸಮಾಜಸೇವೆಯಲ್ಲೂ ಮುಂದಿರುವ ಸಂಘ:
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕ್ಯಾಶ್ ಕೌಂಟರ್ ಅನ್ನು ಮತ್ತು ಗಣಕೀಕೃತ ಬ್ಯಾಂಕಿಂಗ್‌ಗೆ ಚಾಲನೆ ನೀಡಿ, ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸಹಕಾರ ವ್ಯವಸ್ಥೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ವಿಶಿಷ್ಟವಾಗಿ ಅದ್ಭುತವಾದ ಸಾಧನೆ ಮಾಡಿದೆ. ಬಹಳಷ್ಟು ಹಿರಿಯರ ಕೊಡುಗೆ ಸಹಕಾರಿ ರಂಗಕ್ಕಿದೆ. ಈ ಸಂಘ ಕೇವಲ ಆರ್ಥಿಕ ವ್ಯವಹಾರ ನೋಡದೆ 5 ಸಾವಿರ ಮಂದಿಗೆ ಪಡಿತರ ನೀಡಿ ಬಿಪಿಎಲ್ ಕುಟುಂಬಗಳಿಗೆ ಬೆಳಕು ನೀಡುತ್ತಿದೆ. ಅ ಮೂಲಕ ಕೇವಲ ಆರ್ಥಿಕ ವ್ಯವಹಾರ ಮಾತ್ರವಲ್ಲ ಸಮಾಜ ಸೇವೆಯಲ್ಲೂ ಮುಂದಿರುವ ಸಂಘವಾಗಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಮೂಡಿ ಬಂದಿದೆ. ಸಹಕಾರ ಸಂಘಗಳ ಕಾರ್ಯಯೋಜನೆಗೆ ಸಂಬಂಧಿಸಿ ಸಹಕಾರದಿಂದ ಸಮೃದ್ಧಿ ದೃಷ್ಟಿಕೋನದ ಸಾಕಾರಕ್ಕಾಗಿ ಐತಿಹಾಸಿಕ ಹೆಜ್ಜೆಯಿಟ್ಟಿರುವ ಮೋದಿ ಸರ್ಕಾರ ’ಸಹಕಾರ ಸಚಿವಾಲಯ’ವನ್ನೇ ರೂಪಿಸಿದೆ. ಈ ಸಚಿವಾಲಯವು ದೇಶದಲ್ಲಿ ಸಹಕಾರಿ ಆಂದೋಲನವನ್ನು ಬಲಪಡಿಸಲು ಪ್ರತ್ಯೇಕ ಆಡಳಿತಾತ್ಮಕ, ಕಾನೂನು ಮತ್ತು ನೀತಿ ಚೌಕಟ್ಟುಗಳನ್ನು ಒದಗಿಸುತ್ತದೆ. ಸಮುದಾಯ ಆಧಾರಿತ ಅಭಿವೃದ್ಧಿ ಸಹಯೋಗಕ್ಕೆ ಕೇಂದ್ರ ಸರ್ಕಾರ ತನ್ನ ಆಳವಾದ ಬದ್ಧತೆಯನ್ನು ಸೂಚಿಸಿದೆ. ಇವತ್ತು ಸಹಕಾರಿ ರಂಗವು ಸಾಮಾನ್ಯರಿಗೂ ಉದ್ಯೋಗ ಸಿಗುವ ಪರಿಕಲ್ಪಣೆಯಾಗಿ ಮೂಡಿದೆ ಎಂದರು.
ಕಾಣಿಯೂರಿನಲ್ಲಿ ಉತ್ತಮ ಸಹಕಾರಿ ಸಂಸ್ಥೆಯಾಗಿ ಮೂಡಿ ಬರಲಿ:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಸಹಕಾರ ಧ್ವಜಾರೋಹಣ ಮಾಡಿ, ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿ ಗೌರಿಯಕ್ಕ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮಹಿಳಾ ವಿವಿಧೋದ್ಧೇಶ ಸಹಕಾರಿ ಸಂಘ ಉತ್ತಮ ಕೆಲಸ ಮಾಡುತ್ತಿದೆ. ರಾಜ್ಯಮಟ್ಟದಲ್ಲಿ ಉತ್ತಮ ಸಂಘ ಎಂಬ ಪ್ರಶಸ್ತಿಯ ಹೆಗ್ಗಳಿಕೆಯೊಂದಿಗೆ ಸಂಘ ಎಲ್ಲರ ಬದುಕಿಗೆ ಸಹಕಾರ ನೀಡುತ್ತಿದೆ. ಊರಿನ ಅಶಕ್ತ ಮಹಿಳೆಯರಿಗೆ ನೆರವು ನೀಡುವ ಸಂಘ ಕೇವಲ ಲಾಭದ ದೃಷ್ಟಿಯನ್ನು ಇಟ್ಟುಕೊಂಡಿಲ್ಲ ಎಂದರು.
ಮಹಿಳೆಯರು ಸ್ವಾಭಿಮಾನಿಯಾಗಲು ಸಹಕಾರಿ ರಂಗ ತೋರಿಸಿದೆ:
ರಾಜ್ಯ ಸಹಕಾರಿ ಪ್ರಕೋಷ್ಠದ ಸಂಚಾಲಕ ನಿಕಟಪೂರ್ವ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಮಹಿಳೆಯರು ಕೂಡಾ ಸ್ಚಾಭಿಮಾನಿಯಾಗಿ ಸಮಾಜವನ್ನು ಮುನ್ನಡೆಸಬಲ್ಲರು ಎಂದು ಸಹಕಾರಿ ರಂಗ ತೋರಿಸಿದೆ. ಕರ್ನಾಟಕ್ಕೆ ಸಹಕಾರಿ ಕ್ಷೇತ್ರ ಪುತ್ತೂರು ಆಗಿದೆ. ಅದು ಕಾಣಿಯೂರಿಗೂ ವಿಸ್ತರಣೆಯಾಗಿರುವುದು ಸಂತೋಷದ ವಿಚಾರ. ಸಹಕಾರಿ ರಂಗ ಆರಂಭದಿಂದ ಆರ್ಥಿಕ ಶಿಸ್ತನ್ನು ಸಮಾಜಕ್ಕೆ ತೋರಿಸಿದೆ. ಯಾಕೆಂದರೆ ಇವತ್ತು ಪ್ರತಿಯೊಂದು ವೃತ್ತಿ ಕ್ಷೇತ್ರದಲ್ಲೂ, ವಯಸ್ಸಿನನಲ್ಲೂ, ಸಮುದಾಯದಲ್ಲೂ ಸಹಕಾರಿ ಸಂಘವಿದೆ ಎಂದರು. ಕೇಂದ್ರ ಸರಕಾರ ಕೊಡುವ ಯೋಜನೆ ಕಾಮಧೇನು ಕಲ್ಪವೃಕ್ಷದಂತೆ ಇವತ್ತು ಹಲವು ಯೋಜನೆಗಳು ಸಾಮಾನ್ಯರ ಜೀವನ ಉತ್ತಮ ಪರಿಣಾಮ ಬೀರಿದೆ. ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘವು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟಕ್ಕೂ ವಿಸ್ತರಿಸಲಿ ಎಂದರು.
ಸಹಕಾರಿ ಸಂಘಕ್ಕೆ ಅತ್ಯುತ್ತಮ ಉದಾಹರಣೆ ಗೌರಿ:
ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಉಷಾ ಅಂಚನ್ ಮಾರಾಟ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ ನಾವು ರಾಜಕೀಯದಲ್ಲಿ ಬೇರೆ ಬೇರೆ ಪಕ್ಷದವರಾದರೂ ಸಹಕಾರಿ ಕ್ಷೇತ್ರದಲ್ಲಿ ಪಕ್ಷ ಬೇಧ ಮರೆತು ಕೆಲಸ ಮಾಡುತ್ತಿದ್ದೇವೆ. ನಮ್ಮ ಕಾಮಧೇನು ಸಹಕಾರಿ ಸಂಘದ ಸ್ಥಾಪನೆಗೆ ಪೂರ್ಣ ಮಾಹಿತಿ ನೀಡಿದವರು ಮಹಿಳಾ ವಿವಿದ್ಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ. ಅವರು ಮಹಿಳೆಯರ ಆರ್ಥಿಕ ಸುಧಾರಣೆಗೆ ಉತ್ತಮ ಸಲಹೆ ಸೂಚನೆ ನೀಡಿದ್ದರು. ಇವತ್ತು ಮಹಿಳೆಯರಿಗೆ ಸಹಕಾರ ಸಂಘ ಆರ್ಥಿಕ ವರದಾನವಾಗಿದೆ ಎಂದರು.
ಮಹಿಳೆ ಅಬಳೆಯಲ್ಲ ಸಬಳೆ:
ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ತ್ರಿವೇಣಿ ಅವರು ಸಹಕಾರ ಜ್ಯೋತಿ ಮಹಿಳಾ ಸ್ವ ಸಹಾಯ ಸಂಘವನ್ನು ಉದ್ಘಾಟಿಸಿ ಮಾತನಾಡಿ ಮಹಿಳೆ ಮುಂದೆ ಬಂದರೆ ಎನನ್ನು ಸಾಧಿಸಬಲ್ಲಲು ಎಂಬುದಕ್ಕೆ ಗೌರಿ ಉದಾಹರಣೆಯಾಗಿದ್ದಾರೆ. ಮಹಿಳೆಗೆ ಅಧಿಕಾರ ಕೊಟ್ಟರೆ ಏನನ್ನು ಸಾಧಿಸಬಹುದು ಎಂಬುದಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗಿರಥಿ ಮುರುಳ್ಯ ಅವರು ಉದಾಹರಣೆಯಾಗಿದ್ದಾರೆ. ಸಹಕಾರಿ ಸಂಘವನ್ನು ಸ್ಥಾಪನೆ ಮಾಡುವ ಮೂಲಕ ಉಷಾನ್ ಅಂಚನ್ ಸಾಧಕರಾಗಿದ್ದಾರೆ. ಹೀಗೆ ಒಟ್ಟಿನಲ್ಲಿ ಮಹಿಳೆ ಅಬಳೆಯಲ್ಲ ಸಬಳೆ ಎಂಬುದನ್ನು ಅರಿತುಕೊಳ್ಳಬೇಕೆಂದರು.
ಅಷ್ಟಮಠಗಳ ಮೂಲಸ್ಥಾನದ ಅನುಗ್ರಹವಿರಲಿ:
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ಒಂದು ವರ್ಷದ ಹಿಂದೆ ಇದೆ ಪರಿಸರದಲ್ಲಿ ನಮ್ಮ ಸಂಘದ ಶಾಖೆಯನ್ನು ತೆರೆಯಲಾಯಿತು. ಸರಿ ಒಂದು ವರ್ಷದ ಬಳಿಕ ನಮ್ಮ ಪಕ್ಕದಲ್ಲೇ ಮಹಿಳಾ ವಿವಿದ್ಧೋದ್ದೇಶ ಸಹಕಾರಿ ಸಂಘವು ತೆರೆದಿರುವುದು ಬಹಳ ಉತ್ತಮ ವಿಚಾರ. ಅದೇ ರೀತಿ ಅಷ್ಟಮಠಗಳ ಮೂಲಸ್ಥಾನವಾದ ಕಾಣಿಯೂರು ಮಠದ ಅನುಗ್ರಹವಿರಲಿ ಎಂದರು.
ಮಾದರಿ ಸಂಘವಾಗಿ ಮೂಡಿ ಬರಲಿ:
ಕಾಣಿಯೂರು ಗ್ರಾ.ಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ ಅವರು ಉಳಿತಾಯ ಖಾತೆಗೆ ಚಾಲನೆ ನೀಡಿ ಮಾತನಾಡಿ ಸಂಘದ ಕಾಣಿಯೂರಿನಲ್ಲಿ ಮಾದರಿ ಸಂಘವಾಗಿ ಮೂಡಿ ಬರಲಿ ಎಂದು ಹಾರೈಸಿದರು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಆನಂದ ಮೇಲ್ಮನೆ ಅವರು ಶುಭ ಹಾರೈಸಿದರು.
ಪಂಚಮಮ್ ಕಾರ್ಯ ಸಿದ್ದಿ:
ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಹೆಚ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾಣಿಯೂರಿನಲ್ಲಿ 5ನೇ ಶಾಖೆಯನ್ನು ಮಾಡುವ ಮೂಲಕ ಪಂಚಮಮ್ ಕಾರ್ಯ ಸಿದ್ಧಿ ಎಂಬಂತೆ ನೂತನ ಶಾಖೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಕಾಣಿಯೂರು ಶಾಖೆಯನ್ನು ಆರಂಭಿಸುವಾಗ ಡೆಪೋಸಿಟ್ ಕೊಡಿ ಎಂದು ಎಲ್ಲೂ ಕೇಳಿಲ್ಲ. ಆದರೆ ಈ ಭಾಗದವರು ಸುಮಾರು ರೂ. ಅರ್ಧ ಕೋಟಿಯಷ್ಟು ಡೆಪೋಸಿಟ್ ನೀಡಿರುವುದು ಸಂಘದ ಕಾರ್ಯಾಭಿವೃದ್ಧಿಗೆ ಯಶಸ್ಸು ಕಂಡಿತಾ ಸಿಗಲಿದೆ. ಈ ಸಂಘ ಕೇವಲ ವ್ಯವಹಾರ ಮಾತ್ರವಲ್ಲ ಯಾರು ಕಷ್ಟದಲ್ಲಿದ್ದಾರೋ ಅವರಿಗೆ ಸಹಾಯ ಮಾಡುವ ಸಂಸ್ಥೆಯಾಗಿ ಮೂಡಿ ಬರಲಿದೆ. ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿಕೊಂಡು ದರ್ಬೆ ಟೌನ್ ಶಾಖೆ, ಉಪ್ಪಿನಂಗಡಿ ಶಾಖೆ, ನೆಹರುನಗರ ಶಾಖೆಯೊಂದಿಗೆ ಕಾರ್ಯಾಚರಿಸುತ್ತಿರುವ ಸಂಘ ಮಹಿಳೆಯರಿಂದ ಮಹಿಳೆಯರಿಗಾಗಿ 1975-76ರ ಮಹಿಳಾ ವರ್ಷದಲ್ಲಿ ಬಾಡಿಗೆ ಕೊಠಡಿಯಲ್ಲಿ ಪ್ರಾರಂಭಗೊಂಡು ಇದೀಗ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ತಾಲೂಕಿನ ಸೀಮಿತ ವ್ಯಾಪ್ತಿಯಲ್ಲಿ ಕಾರ್ಯ ನಡೆಸುತಿದ್ದ ನಮ್ಮ ಸಂಸ್ಥೆ ಜಿಲ್ಲಾ ವ್ಯಾಪ್ತಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನ ಎಂಬಂತೆ ತಾಲೂಕಿನಿಂದ ಹೊರಗೆ ಕಡಬ ತಾಲೂಕಿನ ಕಾಣಿಯೂರಿನಲ್ಲಿ 5ನೇ ಶಾಖೆಯನ್ನು ಆರಂಭಿಸಿದಾಗ ನಿರೀಕ್ಷೆಗೂ ಮೀರಿ ಪ್ರೋತ್ಸಾಹ ಸಿಕ್ಕಿದೆ. ಸಂಘದಲ್ಲಿ ಸದಸ್ಯರಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಜೊತೆಗೆ ಜವುಳಿ, ಗ್ರಾಹಕ ಸಾಮಾಗ್ರಿಗಳ ಮಾರಾಟ, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಸರಕಾರಿ ಕಚೇರಿಗಳಿಗೆ ಸಾಮಾಗ್ರಿಗಳ ಸರಬರಾಜು ಮಾಡುವುದರ ಜೊತೆಗೆ ನ್ಯಾಯಬೆಲೆ ಅಂಗಡಿಯನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ಇ-ಸ್ಟಾಂಪಿಂಗ್ ವ್ಯವಸ್ಥೆಯಿದೆ. ಸಂಘದ ಮೂಲಕ ಅಂಗನವಾಡಿ ಕೇಂದ್ರಗಳಿಗೆ, ಆಸ್ಪತ್ರೆಗಳಿಗೆ, ಕನ್ಯಾನ ಆಶ್ರಮಕ್ಕೆ, ಎಂಡೋಸಲ್ಫಾನ್ ಪೀಡಿತ ಸಂರಕ್ಷಣ ಕೇಂದ್ರ ಹಾಗು 2016-17ನೇ ಸಾಲಿನ ಲಾಭಾಂಶದಲ್ಲಿ ಕೊಡಗು ಜಿಲ್ಲೆಯ ಗೋಣಿಕೊಪ್ಪ ತಾಲೂಕಿನ ನೆರೆ ಸಂತ್ರಸ್ತರಿಗೆ ಧನಸಹಾಯ ಮಾಡಲಾಯಿತು. ಆರ್ಥಿಕವಾಗಿ ಹಿಂದುಳಿದ ಅರ್ಹ ಸದಸ್ಯರಿಗೆ ಹಾಗು ಸಾರ್ವಜನಿಕರಿಗೆ ಆರ್ಥಿಕ ನೆರವು ನೀಡಲಾಗಿದೆ. ಸಂಘವು 31-3-2023ರ ಅಂತ್ಯಕ್ಕೆ ರೂ. 43.18 ಲಕ್ಷ ನಿವ್ವಳ ಲಾಭವನ್ನು ಹೊಂದಿ ಶೇ.16ರ ಲಾಭಾಂಶವನ್ನು ಘೋಷಣೆ ಮಾಡಲಾಗಿದೆ. ಜೊತೆಗೆ ಪ್ರಸ್ತುತ ಸಂಘದಲ್ಲಿ 2,800 ಮಂದಿ ಸದಸ್ಯರಿದ್ದಾರೆ. ಪುತ್ತೂರಿನಲ್ಲಿ ಸಹಕಾರ ಸಂಘದ ಕಚೇರಿಯ ಸಹಕಾರ ಭವನ ಆಧುನೀಕರಣಗೊಂಡು ಹವಾನಿಯಂತ್ರಣ ಅಳವಡಿಸಲಾಗಿದೆ. ಎಲ್ಲಾ ಶಾಖೆಗಳಿಗೆ ಸಿ.ಸಿ.ಕ್ಯಾಮರ ಅಳವಡಿಸಲಾಗಿದೆ. ನೂತನ ಕಾಣಿಯೂರು ಶಾಖೆಯಲ್ಲಿ ತ್ವರಿತಗತಿಯಲ್ಲಿ ಚಿನ್ನಾಭರಣ ಸಾಲ, ಠೇವಣಿ ಮೇಲಿನ ಆಕರ್ಷಕ ಬಡ್ಡಿದರ, ಹಿರಿಯ ನಾಗರಿಕರಿಗೆ ಹೆಚ್ಚುವರ ಬಡ್ಡಿ , ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ವಾಹನ ಸಾಲ ಸೌಲಭ್ಯ ನೀಡಲಾಗುವುದು ಎಂದರು.
ಸನ್ಮಾನ:
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಸಂಸದ ನಳಿನ್ ಕುಮಾರ್ ಕಟೀಲ್, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಸಭಾಭವನವನ್ನು ಹವಾನಿಯಂತ್ರಿತವನ್ನಾಗಿ ರೂಪಿಸಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾಗಿರುವ ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಪಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ವೇಗದ ನಡಿಗೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸುಶಿಲಾ ಪೆರ್ವೋಡಿ ಅವರನ್ನು ಗೌರವಿಸಲಾಯಿತು. ನೂತನ ಶಾಖಾ ಕಚೇರಿ ವ್ಯವಸ್ಥೆಯಲ್ಲಿ ಸಹಕರಿಸಿದ ಜನಾರ್ದನ, ಗುರುಪ್ರಸಾದ್, ನವೀನ್, ದಯಾನಂದ ಅವರನ್ನು ಅಭಿನಂದಿಸಲಾಯಿತು.
ಡೆಪೋಸಿಟ್, ಠೇವಣಿದಾರರಿಗೆ ಗೌರವ:
ಕಾಣಿಯೂರು ಶಾಖೆಯ ಡೆಪೊಸಿಟ್ ನೀಡಿದವರಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ಪುಷ್ಪಾವತಿ ಕಳುವಾಜೆ ಡೆಪೋಸಿಟ್ ಪ್ರಮಾಣ ಪತ್ರ ವಿತರಿಸಲಾಯಿತು. ಇದೇ ಸಂದರ್ಭ ಠೇವಣಿದಾರರನ್ನು ಗೌರವಿಸಲಾಯಿತು. ವತ್ಸಲಾ ರಾಜ್ಞಿ ಅವರು ಠೇವಣಿದಾರರನ್ನು ಗುರುತಿಸುವ ಕಾರ್ಯಕ್ರಮ ನಿರ್ವಹಿಸಿದರು.
ಸಾರ್ವಜನಿಕ ಉಪಕಾರ ನಿಧಿ ವಿತರಣೆ:
ಸಂಘದ ಸಾರ್ವಜನಿಕ ಉಪಕಾರ ನಿಧಿಯಿಂದ ಆರ್ಥಿಕವಾಗಿ ಹಿಂದುಳಿದ ಲೀಲಾವತಿ ಮತ್ತು ಕೊಪ್ಪ ಸಾರ್ವಜನಿಕ ಶಾರದಾ ಭಜನಾ ಮಂದಿರಕ್ಕೆ ಉಪಕಾರ ನಿಧಿ ವಿತರಿಸಲಾಯಿತು. ಸಂಘದ ಹಿರಿಯ ನಿರ್ದೇಶಕಿ ಪ್ರೆಮಲತಾ ರಾವ್ ಉಪಕಾರ ನಿಧಿ ವಿತರಣೆ ಕಾರ್ಯಕ್ರಮ ನಿರ್ವಹಿಸಿದರು.
ಸಂಘದ ಸಲಹಾ ಸಮಿತಿ ಸದಸ್ಯರ ಗುರುತಿಸುವಿಕೆ:
ಸಲಹಾ ಸಮಿತಿ ಅಧ್ಯಕ್ಷೆ ಮೋಹಿನಿ ದಿವಾಕರ್, ಸದಸ್ಯರಾದ ಪುಷ್ಪಾವತಿ ಕಳುವಾಜೆ, ಇಂದಿರಾ ಬಿ ಕೆ, ಸುಪ್ರಿತ ಕರಂದ್ಲಾಜೆ, ಶುಭ ಕಿರಣ ಪಿ, ತೇಜಸ್ವಿನಿ, ಗೌರಿ ಬರೆಪ್ಪಾಡಿ, ಮಮತ, ಉಮೇಶ್ವರಿ, ಸುಮನ, ಆಶಾ ರೈ, ಚಂಪ, ಶುಭದ ರೈ, ಪ್ರಮೀಳಾ ಜನಾರ್ದನ ಆಚಾರ್ಯ ಅವರನ್ನು ಗೌರವಿಸಲಸಯಿತು. ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕಿ ಇಂದಿರಾ ಪಿ ಆಚಾರ್ಯ ಗೌರವ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಲಹೆ ಮಾರ್ಗದರ್ಶಕರಾಗಿರುವ ಲಕ್ಷ್ಮೀನಾರಾಯಣ ಕಡಂಬಲಿತ್ತಾಯ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭ ಸಂಘದ ಸಿಬ್ಬಂದಿಗಳನ್ನು ಗುರುತಿಸಲಾಯಿತು. ಪ್ರಧಾನ ಕಚೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಟಿ, ದರ್ಬೆ ಶಾಖಾ ವ್ಯವಸ್ಥಾಪಕಿ ವಿದ್ಯಾ ಎಸ್, ಸರಿತಾ, ನಿತಿನ್, ಸಾವಿತ್ರಿ, ವಿಮಲ, ಧನಷ್ ಅವರನ್ನು ಗುರುತಿಸಲಾಯಿತು.
ಸಂಘದ ಸಲಹಾ ಸಮಿತಿ ಸದಸ್ಯರಾದ ಸುಪ್ರಿತಾ ಕರಂದ್ಲಾಜೆ, ಪಿ ಕೆ ಇಂದಿರಾ, ಉಮೇಶ್ವರಿ, ಪುಷ್ಪಾವತಿ ಕಳುವಾಜೆ, ತೇಜಸ್ವಿನಿ, ಗೌರಿ ಬರೆಪ್ಪಾಡಿ, ಮಮತಾ, ಆಶಾ ರೈ, ಸುಮನಾ, ಉಮಾ ಅತಿಥಿಗಳನ್ನು ಗೌರವಿಸಿದರು. ಸಂಘದ ಆಡಳಿತ ನಿರ್ದೇಶಕರಾದ ಉಷಾಚಂದ್ರ ಮುಳಿಯ, ಜಯಶ್ರೀ ಎಸ್ ಶೆಟ್ಟಿ, ಮೋಹಿನಿ ಪಿ ನಾಯ್ಕ, ವಿಜಯಲಕ್ಷ್ಮೀ, ಯಶೋದಾ ನಾಡಗೀತೆ ಹಾಡಿದರು. ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರು ಮತ್ತು ಕಾಣಿಯೂರು ಶಾಖೆಯ ಸಲಹಾ ಸಮಿತಿ ಅಧ್ತಕ್ಷರಾಗಿರುವ ಮೋಹಿನಿ ದಿವಾಕರ್ ಸ್ವಾಗತಿಸಿದರು. ಸಂಘದ ನಿರ್ದೇಶಕಿ ಯಶೋಧ ವಂದಿಸಿದರು. ವಸಂತ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು. ಅದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರು ಬೆಳಿಗ್ಗೆ ನೂತನ ಶಾಖೆಗೆಗೆ ಬಂದು ಪ್ರಥಮ ಠೇವಣಿ ನೀಡಿ ಶುಭಹಾರೈಸಿ ತೆರಳಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಉದಯ ರೈ ಮಾದೋಡಿ, ಲಕ್ಷ್ಮಣ ಗೌಡ ಕರಂದ್ಲಾಜೆ, ಜಯಸೂರ್ಯ ರೈ ಮಾದೋಡಿ, ಶ್ರೀಧರ್ ಗೌಡ ಕಣಜಾಲು, ಚಂದ್ರಕಲಾ ಜಯರಾಮ್, ದೇವಿ ಪ್ರಸಾದ್, ಉಮೇಶ್ ಶೆಣೈ, ಎ.ವಿ.ಜಿ ಇಂಗ್ಲೀಷ್ ಮೀಡಿಯಂ ಶಾಲೆಯ ಸಂಚಾಲಕ ಎ ವಿ ನಾರಾಯಣ್, ದಿಶಾ ಸದಸ್ಯ ರಾಮದಾಸ್ ಹಾರಾಡಿ, ಯಶವಂತ ಕಳುವಾಜೆ, ಕಪಿಲೇಶ್ವರಿ ಸ್ವಸಹಾಯ ಸಂಘದ ಸದಸ್ಯರು, ಕಾಣಿಯೂರು ಹಾಲು ಉತ್ಪಾದಕ ಸಂಘ ನಿರ್ದೇಶಕರು, ಸದಸ್ಯರು ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಉಮಾ ಡಿ.ಪ್ರಸನ್ನ,, ನಿರ್ದೇಶಕರಾದ ಮೋಹಿನಿ ದಿವಾಕರ್, ಪ್ರೇಮಲತಾ ರಾವ್, ವತ್ಸಲಾ ರಾಜ್ಞಿ, ಶಶಕಿಲಾ, ಮೋಹಿನಿ ಪಿ ನಾಯ್ಕ್, ಉಷಾ ಚಂದ್ರಮುಳಿಯ, ಜಯಶ್ರೀ ಎಸ್ ಶೆಟ್ಟಿ, ಯಶೋದ, ವಿಜಯಲಕ್ಷ್ಮೀ, ಇಂದಿರಾ ಪಿ ಆಚಾರ್ಯ, ಅರ್ಪಣಾ ಎಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.