ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ

0


27.52 ಕೋಟಿ ರೂ. ವ್ಯವಹಾರ, 13.90 ಲಕ್ಷ ರೂ. ಲಾಭ, ಶೇ.14 ಡಿವಿಡೆಂಡ್- ಜಗನ್ನಾಥ ರೈ

ಪುತ್ತೂರು: ಪುತ್ತೂರು ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಡಿ.23ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರಭವನದಲ್ಲಿ ಜರಗಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ ಮಾದೋಡಿರವರು ಮಾತನಾಡಿ, ಬಂಟಸಿರಿ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ, 27,52,41,550 ವಾರ್ಷಿಕ ವ್ಯವಹಾರ ಮಾಡಿ, ರೂ, 3.89.452 ಸಾಲ ವಿತರಿಸಿ, 13.90,120.00 ರೂ ನಿವ್ವಳ ಲಾಭಗಳಿಸಿದೆ. ಸದಸ್ಯರುಗಳಿಗೆ ಶೇ.14 ಡಿವಿಡೆಂಡ್‌ನ್ನು ನೀಡಲಾಗುವುದು. 2024ರ ಮಾರ್ಚ್ ಅಂತ್ಯಕ್ಕೆ ರೂ.10 ಕೋಟಿಯಷ್ಟು ಠೇವಣಿ ಸಂಗ್ರಹ ಮತ್ತು 8 ಕೋಟಿ ರೂ. ಸಾಲ ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ ಮಾದೋಡಿ ಹೇಳಿದರು.


2013ರಲ್ಲಿ ಸ್ಥಾಪನೆ: ಪುತ್ತೂರು ತಾಲೂಕಿನಲ್ಲಿ ಬಂಟ ಸಮುದಾಯದಿಂದ 2013 ರಲ್ಲಿ ಸ್ಥಾಪಿತವಾದ ಬಂಟಸಿರಿ ವಿವಿಧೋದ್ದೇಶ ಸಹಕಾರ ಸಂಘ ಇದೀಗ 10 ನೇ ವರ್ಷದಲ್ಲಿ ಪ್ರಗತಿಯ ಪಥದಲ್ಲಿ ಮುನ್ನಡೆದು, ಸಹಕಾರ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆಯುತ್ತಿದೆ. ಕಳೆದ ವರ್ಷ 12 ಶೇಕಡಾ ಡಿವಿಡೆಂಡ್ ವಿತರಿಸಿದ ಸಂಸ್ಥೆಯು ಈ ವರ್ಷ 13 ಶೇಕಡಾ ಡಿವಿಡೆಂಡ್‌ನ್ನು ಸದಸ್ಯರುಗಳಿಗೆ ನೀಡುವ ಮೂಲಕ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ಈಗಾಗಲೇ ಕಡಬ ತಾಲೂಕಿನ ಅಲಂಕಾರು ಮತ್ತು ಪುತ್ತೂರು ತಾಲೂಕಿನ ಈಶ್ವರ ಮಂಗಲದಲ್ಲಿ ಹಾಗೂ ಸುಳ್ಯ ತಾಲೂಕಿನ ನಿಂತಿಕಲ್‌ನಲ್ಲಿ ಸಂಘದ ಶಾಖೆಗಳು ಅತ್ಯುತ್ತಮ ರೀತಿಯಲ್ಲಿ ಸಾಧನೆಯನ್ನು ಮಾಡುತ್ತಿದ್ದು, ನಮ್ಮ ಎಲ್ಲಾ ಸದಸ್ಯರುಗಳು ಹಾಗೂ ಆಡಳಿತ ಮಂಡಳಿಯ ಉಪಾಧ್ಯಕ್ಷರು, ಎಲ್ಲಾ ನಿರ್ದೇಶಕರುಗಳು ಮತ್ತು ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲು ಹಾಗೂ ಸಿಬ್ಬಂದಿ ವರ್ಗದ ಸಹಕಾರ ಮತ್ತು ತಾಲೂಕು ಬಂಟರ ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆಯವರು ಸಂಘದ ಅಭಿವೃದ್ಧಿಗೆ ಬೆಂಗಳೂರಿನಲ್ಲಿ ಬೇಕಾದ ಅನೇಕ ಕೆಲಸಗಳನ್ನು ಮಾಡಿಕೊಡುತ್ತಿದ್ದಾರೆ ಎಂದು ನುಳಿಯಾಲು ಜಗನ್ನಾಥ ರೈ ಮಾದೋಡಿರವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣಪ್ರಸಾದ್ ಆಳ್ವರವರು ಸಂಘದ ಕಾನೂನು ನಿಯಮಕ್ಕೆ ಸಂಬಂಧಪಟ್ಟ ಕೆಲಸ ಕಾರ‍್ಯವನ್ನು ನಾನು ಮಾಡುವಲ್ಲಿ ನನಗೆ ಶಾಸಕ ಆಶೋಕ್ ಕುಮಾರ್ ರೈಯವರ ಪೂರ್ಣ ಸಹಕಾರ ದೊರೆತಿದೆ ಎಂದರು.

ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಚನಿಲ ತಿಮ್ಮಪ್ಪ ಶೆಟ್ಟಿ, ಪುರಂದರ ರೈ ಮಿತ್ರಂಪಾಡಿ, ಜಯರಾಮ ರೈ ನುಳಿಯಾಲು, ಸಂಜೀವ ಆಳ್ವ ಹಾರಾಡಿ, ಬಾಲಕೃಷ್ಣ ಶೆಟ್ಟಿ ಕೊಂಡೆವೂರು, ವಿದ್ಯಾ ಪ್ರಸಾದ್ ಆಳ್ವ, ಅನಿತಾ ಹೇಮನಾಥ ಶೆಟ್ಟಿ ಕಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಹಿರಿಯರಾದ ಚಿಕ್ಕಪ್ಪ ನಾಕ್ ಅರಿಯಡ್ಕ ಸಹಿತ ಸಂಘದ ಸದಸ್ಯರುಗಳು ಭಾಗವಹಿಸಿದ್ದರು. ಸಂಸ್ಥೆಯ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲುರವರು ವರದಿ ವಾಚಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪ್ರೇಮ ಎಸ್ ರೈ, ಗುಮಾಸ್ತ ಶಿವರಾಜ್ ರೈ, ಅಲಂಕಾರು ಶಾಖೆಯ ವ್ಯವಸ್ಥಾಪಕಿ ಸುಮತಿ ರೈ, ಈಶ್ವರಮಂಗಲ ಶಾಖೆಯ ವ್ಯವಸ್ಥಾಪಕ ಸುಮಂತ್ ರೈ, ನಿಂತಿಕಲ್ ಶಾಖೆಯ ವ್ಯವಸ್ಥಾಪಕ ಶಿವರಾಜ್, ಅಲಂಕಾರು ಶಾಖೆಯ ಗುಮಾಸ್ತ ತೇಜಸ್, ಈಶ್ವರಮಂಗಲ ಶಾಖೆಯ ಐಶ್ವರ್ಯ ರೈರವರುಗಳು ಸಹಕರಿಸಿದರು. ಸಂಸ್ಥೆಯ ಉಪಾಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಸ್ವಾಗತಿಸಿ, ನಿರ್ದೇಶಕ ವಸಂತ ಕುಮಾರ್ ರೈ ದುಗ್ಗಳ ವಂದಿಸಿದರು. ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ ಕಾರ‍್ಯಕ್ರಮ ನಿರೂಪಿಸಿದರು.

ಸಹಕಾರ ಕ್ಷೇತ್ರದಲ್ಲಿ ಬಂಟಸಿರಿ ಅದ್ಬುತ ಸಾಧನೆ
ಕಳೆದ 10 ವರ್ಷಗಳಿಂದ ಬಂಟಸಿರಿ ಸಹಕಾರ ಸಂಸ್ಥೆಯು ಉತ್ತಮ ಸಾಧನೆಯನ್ನು ಮಾಡುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಅದ್ಬುತ ಪ್ರಗತಿ ಸಾಧಿಸಿದೆ. ಸಂಸ್ಥೆಗೆ ಉತ್ತಮ ಆಡಳಿತ ಮಂಡಳಿ ಇದೆ, ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಸತೀಶ್ ರೈ ನಡುಬೈಲುರವರು ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸಹಕಾರದಲ್ಲಿ ಸಂಸ್ಥೆಯನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸುತ್ತಿರುವುದು ತುಂಬಾ ಸಂತಸದ ವಿಚಾರವಾಗಿದೆ.

ಜಗನ್ನಾಥ ರೈ

ನುಳಿಯಾಲು ಜಗನ್ನಾಥ ರೈ ಮಾದೋಡಿ,
ಅಧ್ಯಕ್ಷರು

ಗ್ರಾಹಕರಿಗೆ ಉತ್ತಮ ಸೇವೆ
ಬಂಟಸಿರಿ ಸಹಕಾರ ಸಂಸ್ಥೆಯಲ್ಲಿ ಗ್ರಾಹಕರಿಗೆ ಕ್ಲಪ್ತ ಸಮಯದಲ್ಲಿ ಸಾಲವನ್ನು ನೀಡುತ್ತಿದ್ದೇವೆ. ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಿ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವೆಯನ್ನು ನೀಡುವಲ್ಲಿ ಎಲ್ಲರ ಸಹಕಾರ ಅಗತ್ಯ

ಸತೀಶ್ ರೈ ನಡುಬೈಲು

ಸತೀಶ್ ರೈ ನಡುಬೈಲು,
ಮುಖ್ಯಕಾರ‍್ಯನಿರ್ವಹಣಾಧಿಕಾರಿ

LEAVE A REPLY

Please enter your comment!
Please enter your name here