ಆಲಂಕಾರು :ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ವಿದ್ಯಾಲಯದಲ್ಲಿ ಕಿರು ಉದ್ಯಾನವನ ಉದ್ಘಾಟನೆ ಹಾಗೂ ವಾರ್ಷಿಕೋತ್ಸವವು ಡಿ.22 ನೇ ಶುಕ್ರವಾರ ನಡೆಯಿತು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ಧ್ವಜಾರೋಹಣ ನೇರವೆರಿಸಿದರು. ದುರ್ಗಾಂಬಾ ವಿದ್ಯಾಲಯದ ಕಿರು ಉದ್ಯಾನವನ ಉದ್ಘಾಟನೆ ಹಾಗು ರಾತ್ರಿ ವಾರ್ಷಿಕೋತ್ಸವ ನಡೆಯಿತು. ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಕಿರು ಉದ್ಯಾನವನ ಉದ್ಘಾಟಿಸಿ ಮಾತನಾಡಿ ಶಿಕ್ಷಣ ಸಂಸ್ಥೆಗಳಿಗೆ ಅಡಳಿತಮಂಡಳಿ ಅಧಾರಸ್ತಂಭವಿದ್ದಂತೆ.ಶಿಕ್ಷಣ ಕ್ಷೇತ್ರದಲ್ಲೊ ಪೈಪೋಟಿ ಇದೆ,ಎಲ್ಲಾರು ಗುಣಮಟ್ಟದ ಶಿಕ್ಷಣವನ್ನು ಅಶಿಸುತ್ತಾರೆ.
ಶಿಕ್ಷಕರ ಸಾಧನೆ ದೊಡ್ಡದು,ಒಳ್ಳೆಯ ಶಿಕ್ಷಕರಿದ್ರೆ ಮಾತ್ರ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾ ದೇಗುಲಗಳಲ್ಲಿ ಎಲ್ಲರೂ ಒಟ್ಟಿಗೆ ಯಾವುದೇ ಜಾತಿ, ಮತ,ಪಂಥ,ಧರ್ಮದ ಬೇಧ ಭಾವ ಇಲ್ಲದೇ ಒಟ್ಟಿಗೆ ಶಿಕ್ಷಣ ಪಡೆಯುವುದರಿಂದ ಎಲ್ಲಾ ಕ್ಷೇತ್ರಗಳಿಂದಲೂ ಶಿಕ್ಷಣ ಕ್ಷೇತ್ರ ಅತ್ಯಂತ ಶ್ರೇಷ್ಠ ವಾಗಿದೆ ಎಂದು ತಿಳಿಸಿ ಶಿಕ್ಷಣ ಸಂಸ್ಥೆಗಳು ಒಂದು ಊರಿಗೆ ಆಸ್ತಿ ಇದ್ದಂತೆ ಶಿಕ್ಷಣ ಸಂಸ್ಥೆ ಗಳನ್ನು ಎಲ್ಲಾರ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಬೇಕೆಂದು ತಿಳಿಸಿ ಶ್ರೀ ದುರ್ಗಾಂಬಾ ವಿದ್ಯಾವರ್ಧಕ ದಲ್ಲಿ ಉದ್ಯಾನವನ ನಿರ್ಮಾಣ ಮಾಡಿ ಶಾರದದೇವಿಯನ್ನು ಪ್ರತಿಷ್ಠಾಪಿಸಿ ಕಾರಂಜಿಯನ್ನು ಅಳವಡಿಸಿದ್ದೀರಿ.ಕಾರಂಜಿಯಲ್ಲಿ ನೀರು ಎತ್ತರಕ್ಕೆ ಚಿಮ್ಮವಂತೆ ಅದೇ ತರ ದುರ್ಗಾಂಬಾ ವಿದ್ಯಾಸಂಸ್ಥೆ ಅಭಿವೃದ್ಧಿಪಥದಲ್ಲಿ ಸಾಗಲಿ ಎಂದು ತಿಳಿಸಿ ಶುಭಹಾರೈಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಅಬುದಾಬಿಯ ಉದ್ಯಮಿ ಜಯರಾಮ ರೈ ಮಿತ್ರಂಪಾಡಿ ಮಾತನಾಡಿ ಅಡಳಿತ ಮಂಡಳಿಯ ನಿಸ್ವಾರ್ಥ ಸೇವೆ,ಶಿಕ್ಷಕ ವೃಂದದವರ ಪರಿಶ್ರಮ,ಹಿರಿಯ ವಿದ್ಯಾರ್ಥಿಗಳು ಮತ್ತು ಪೋಷಕರ ಸಹಕಾರ,ಸಮಾಜ ಸೇವಕರು ಹಾಗು ರಾಜಕೀಯ ಧುರೀಣರ ಸಹಕಾರ ಇದ್ರೆ ಮಾತ್ರ ಗ್ರಾಮೀಣ ಪ್ರದೇಶದ ಶಿಕ್ಷಣ ಸಂಸ್ಥೆ ಅಭಿವೃದ್ಧಿ ಗೊಳ್ಳಲು ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಪಡೆದ ಶಿಕ್ಷಣ ನಮ್ಮ ಹೃದಯದಲ್ಲಿ ಶಾಶ್ವತವಾಗಿರುತ್ತದೆ. ಅಲ್ಲಿ ಗುರು ಹಾಗು ಶಿಷ್ಯರ ಸಂಬಂಧ ಆತ್ಮೀಯತೆಯಿಂದ ಇದ್ದು ಬಹಳ ಬೆಸುಗೆಯಂತೆ ಗಟ್ಟಿಯಾಗಿರುತ್ತದೆ.ವಿದ್ಯಾರ್ಥಿಗಳು ಅಂಕಗಳಿಸುವುದು ಮುಖ್ಯವಲ್ಲ ಅಚಾರ, ವಿಚಾರ,ಕಲೆ,ಸಂಸ್ಕೃತಿ, ಪರಂಪರೆಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕೆಂದು ತಿಳಿಸಿ ಭಾರತೀಯ ಸಂಸ್ಕಾರ, ಸಂಸ್ಕೃತಿಯಿಂದಾಗಿ ಭಾರತೀಯರಿಗೆ ಇಂದು ವಿಶ್ವದಾದ್ಯಂತ ಸ್ಥಾನಮಾನಗಳು ಲಭಿಸುತ್ತಿದೆ ಎಂದು ತಿಳಿಸಿ ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆಯವರು ನನಗೆ ಅತ್ಮೀಯರಾಗಿದ್ದು ಅವರ ಒತ್ತಾಸೆಯಂತೆ ಈ ವಿದ್ಯಾಸಂಸ್ಥೆಗೆ ಬಂದಿದ್ದೇನೆ ಈ ಶಿಕ್ಷಣ ಸಂಸ್ಥೆ ಇನ್ನಷ್ಟು ಕೀರ್ತಿ ಪಡೆಯಲಿ ಎಂದು ತಿಳಿಸಿ ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘಕ್ಕೆ ರೂ 50000 ದ ಚೆಕ್ಕನ್ನು ಅಡಳಿತ ಮಂಡಳಿ ಯ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ಯವರಿಗೆ ಹಸ್ತಾಂತರಿಸಿದರು.
ಮಂಗಳೂರು ಎಂ.ಆರ್.ಪಿ.ಎಲ್ ನ ಸೀತಾರಾಮ ರೈ ಕೈಕಾರರವರು ಮಾತನಾಡಿ ಆಲಂಕಾರಿನಲ್ಲಿ 42 ವರ್ಷಗಳ ಹಿಂದೆ ಆಲಂಕಾರಿನಲ್ಲಿ ಶ್ರೀ ದುರ್ಗಾಂಬಾ ವಿದ್ಯಾಸಂಸ್ಥೆ ಬೇಕೆನ್ನುವ ಸದ್ದುದೇಶದಿಂದ ವಿದ್ಯಾಸಂಸ್ಥೆ ಯನ್ನು ಪ್ರಾರಂಬಿಸಿದರು.ಆದರೆ ಇಂದು ಸಾರ್ಥಕತೆಯನ್ನು ಪಡೆಯುತ್ತಿದೆ ಪ್ರಸಕ್ತ ಅಡಳಿತ ಮಂಡಳಿಯವರು ಬಹಳ ಯಶಸ್ವಿಯಾಗಿ ಶ್ರೀ ದುರ್ಗಾಂಬಾ ವಿದ್ಯಾ ಸಂಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದಕ್ಕೆ ಅಭಿನಂದನೆ ತಿಳಿಸಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಹಣ, ಸಮಯ,ಗುರು ಶಿಷ್ಯರು,ತಂದೆ ತಾಯಿಗಳೊಂದಿಗೆ,ಬಂದು ಮಿತ್ರರೊಂದಿಗೆ ಬಾಂದವ್ಯಕ್ಕೆ ಬೆಲೆ ಕೊಟ್ಟು ವಿದ್ಯಾರ್ಥಿ ಜೀವನವನ್ನು ಮುನ್ನಡೆಸಬೇಕೆಂದರು.
ಸಭೆಯಲ್ಲಿ ಸೇವಾನಿವೃತ್ತರಾದ ಭೋದಕ,ಭೋದಕೇತರ ವರ್ಗದ ನಾರಾಯಣ ಭಟ್ಟ್,ಮಹಾಬಲೇಶ್ವರ ಭಟ್ಟ್,ಜಯಕರ ರೈ, ನಾರಾಯಣ,ಹುಕ್ರಪ್ಪ ರವರನ್ನು ಹಾಗು ಪ್ರಸಕ್ತ ಮುಖ್ಯಗುರುಗಳಾದ ಶ್ರೀಪತಿ ರಾವ್ ರವರನ್ನು ಹಿರಿಯ ವಿದ್ಯಾರ್ಥಿ ಸಂಘದ ಪರವಾಗಿ ಸನ್ಮಾನಿಸಿದರು.ನಂತರ ಮಾತನಾಡಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮನೋಹರ ಎಣ್ಣೆತ್ತೋಡಿ ಮಾತನಾಡಿ ನಮಗೆ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಕಿರು ಉದ್ಯಾನವನ ನಿರ್ಮಾಣ ಮಾಡಿಕೊಟ್ಟದಕ್ಕೆ ಹಾಗು ಸೇವಾ ನಿವೃತ್ತರಾದ ಗುರುವೃಂದದವರನ್ನು ಸನ್ಮಾನಿಸಿದಕ್ಕೆ ಧನ್ಯತಭಾವ ನಮ್ಮಲ್ಲಿದೆ.ಇನ್ನು ಮುಂದೆಯೂ ಇಂತಹ ಕೆಲಸ ಕಾರ್ಯದಲ್ಲಿ ಹಿರಿಯ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದಾಗಿ ತಿಳಿಸಿ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿದರು.
ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ ರವರು ಶಾಲಾ ವಾರ್ಷಿಕೋತ್ಸವ ಅಂದರೆ ವಿದ್ಯಾರ್ಥಿಗಳಿಗೆ ಹಬ್ಬವಿದ್ದಂತೆ ತಮ್ಮ ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡಲು ಒಂದು ಒಳ್ಳೆಯ ಅವಕಾಶ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭಾಹಾರೈಸಿದರು .ಸಭೆಯಲ್ಲಿ ವಿದ್ಯಾರ್ಥಿ ,ವಿದ್ಯಾರ್ಥಿನಿಯರಿಗೆ ಶೈಕ್ಷಣಿಕವಾಗಿ, ಸಾಂಸ್ಕೃತಿಕ ಹಾಗು ಕ್ರೀಡೆಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಭಾದ್ಯಕ್ಷತೆ ವಹಿಸಿದ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಯವರು ಮಾತನಾಡಿ ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘವು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಬೇಕೆನ್ನುವ ಸಧುದ್ದೇಶದಿಂದ ಈ ವಿದ್ಯಾಸಂಸ್ಥೆಯು ಹುಟ್ಟಿಕೊಂಡಿದ್ದು ಅಡಳಿತಮಂಡಳಿಯವರ ನಿಸ್ವಾರ್ಥ ಸೇವೆ,ಭೋದಕ,ಭೋದಕೇತರ ವರ್ಗದವರ ಪರಿಶ್ರಮ,ವಿದ್ಯಾರ್ಥಿಗಳ ಸಾಧನೆ ಊರಿನವರ ಸಹಕಾರದೊಂದಿಗೆ ವಿದ್ಯಾಸಂಸ್ಥೆ ಅಭಿವೃದ್ಧಿ ಗೊಂಡಿದ್ದು. ಇನ್ನು ಮುಂದೆಯೂ ಈ ವಿದ್ಯಾಸಂಸ್ಥೆಯ ಏಳಿಗೆಗೆ ಎಲ್ಲಾರು ಸಹಕರಿಸುವಂತೆ ವಿನಂತಿಸಿದರು.
ವೇದಿಕೆಯಲ್ಲಿ ಅಡಳಿತ ಮಂಡಳಿಯ ಕಾರ್ಯದರ್ಶಿ ಈಶ್ವರ ಗೌಡ ಪಜ್ಜಡ್ಕ , ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀನಾಥ್ ಗೌಡ. ಪಿ ಆಡಳಿತ ಮಂಡಳಿಯ ಸದಸ್ಯರಾದ ಮುತ್ತಪ್ಪ ಪೂಜಾರಿ ನೆಯ್ಯಲ್ಗ, ತಾರನಾಥ ರೈ ನಗ್ರಿ, ದಯಾನಂದ ಗೌಡ ಆಲಡ್ಕ, ಇಂದುಶೇಖರ ಶೆಟ್ಟಿ ಕುಕ್ಕೇರಿ, ರಾಮರಾಜ ನಗ್ರಿ, ವಿಜಯ ಕುಮಾರ್ ರೈ ಮನವಳಿಕೆ. ,ವಿದ್ಯಾರ್ಥಿ ನಾಯಕಿ ಮೈತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಆಶಾ ಡಿ.ಜಿ, ದೈಹಿಕ ಶಿಕ್ಷಕರಾದ ಶ್ರೇಯಸ್ಸು ರೈ, ನಿವ್ಯ ರೈ ಪಿ.ಯನ್ ಅವರು ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಮುಖ್ಯ ಗುರುಗಳಾದ ಶ್ರೀಪತಿ ರಾವ್ ಹೆಚ್ ಅವರು ವಾರ್ಷಿಕ ವರದಿಯನ್ನು ವಾಚಿಸಿದರು.
ಕನ್ನಡ ಉಪನ್ಯಾಸಕಿ ರೂಪಾ ಜೆ ರೈ ಕಾರ್ಯಕ್ರಮವನ್ನು ನಿರೂಪಿಸಿದರು .ಹಿರಿಯ ವಿದ್ಯಾರ್ಥಿ ಗಳಾದ ಚಂದ್ರಹಾಸ ಕೆ.ಸಿ,ಹರಿಶ್ಚಂದ್ರ ಸನ್ಮಾನಿತರ ಪಟ್ಟಿಯನ್ನು ವಾಚಿಸಿದರು. ಪ್ರಾಂಶುಪಾಲ ನವೀನ್ ರೈ ಧನ್ಯವಾದ ಸಮರ್ಪಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.