ದೋಳ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ – ಪ್ರತಿಭಾ ಪುರಸ್ಕಾರ

0

ಮಗುವಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಪೋಷಕರ ಜವಾಬ್ದಾರಿ – ಭಾಗೀರಥಿ ಮುರುಳ್ಯ


ಕಾಣಿಯೂರು: ಸಮಾಜ ಸುಧಾರಣೆ ಮಾಡುವ ಸುಧಾರಕನಾಗಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಮೂಡಿ ಬರುವುದಕ್ಕೆ ಮಗುವಿಗೆ ಶಿಕ್ಷಣದ ಅಗತ್ಯವಿದೆ ಹೊರತು, ಉದ್ಯೋಗಕ್ಕಾಗಿ ಕೇವಲ ಶಿಕ್ಷಣ ಅಲ್ಲ. ಮಗುವನ್ನು ಇನ್ನೊಂದು ಮಗುವಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಮಗುವಿನ ಸಾಮಾರ್ಥ್ಯವನ್ನು ಅಳೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅ ಮಗುವಿಗೆ ಎಷ್ಟೋ ಸಾಮಾರ್ಥ್ಯವಿದೆಯೋ ಅಷ್ಟು ಮಗು ಕಲಿಯುತ್ತದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಡಿ. 23ರಂದು ನಡೆದ ದೋಳ್ಪಾಡಿ ಸ.ಹಿ.ಪ್ರಾ.ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಕಾಣಿಯೂರು ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಕೊಪ್ಪ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಸಂಸ್ಕೃತಿ ಮತ್ತು ಸಂಪ್ರದಾಯಗಳ ಕುರಿತು ಅರಿತುಕೊಳ್ಳಬೇಕು. ಒಳ್ಳೆಯ ಚಿಂತನೆ, ಒಳ್ಳೆಯ ಸಂಸ್ಕೃತಿ ಮುಂದಿನ ಜೀವನಕ್ಕೆ ಬುನಾದಿ ಎಂದರು. ಕಾಣಿಯೂರು ಗ್ರಾ.ಪಂ.ಸದಸ್ಯರಾದ ಲೋಕಯ್ಯ ಪರವ ದೋಳ್ಪಾಡಿ, ದೇವಿಪ್ರಸಾದ್ ದೋಳ್ಪಾಡಿ, ಅಂಬಾಕ್ಷಿ ಕೂರೇಲು, ಕಾಣಿಯೂರು ಕ್ಲಸ್ಟರ್ ಸಿಆರ್‌ಪಿ ಯಶೋದ, ದೋಳ್ಪಾಡಿ ಸರಕಾರಿ ಪ್ರೌಢ ಶಾಲಾ ಮುಖ್ಯಗುರು ಶಶಿಧರ್, ಗುತ್ತಿಗೆದಾರ ಮೋಹನ್‌ದಾಸ್ ರೈ ಬಳ್ಕಾಡಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ದೋಳ್ಪಾಡಿ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕೂರೇಲು, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ದೋಳ್ಪಾಡಿ ಘಟ ಸಮಿತಿ ಅಧ್ಯಕ್ಷೆ ರತ್ನಾವತಿ ರೈ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ ಕೂರೇಲು, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ವೇದವ್ಯಾಸ ರೈ ಪಿಜಕ್ಕಳ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಆಚಾರ್ಯ ದೋಳ್ಪಾಡಿ, ವಿದ್ಯಾರ್ಥಿ ನಾಯಕ ಯತಾರ್ಥ್ ಉಪಸ್ಥಿತರಿದ್ದರು. ಶಿಕ್ಷಕಿ ಚಂಚಲಾಕ್ಷಿ ಸ್ವಾಗತಿಸಿ, ಶಿಕ್ಷಕ ಜಯರಾಜ್ ವಂದಿಸಿದರು. ಪುರುಷೋತ್ತಮ್ ಕೊಜಂಬೇಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


ಗುರುವಂದನಾ ಕಾರ್ಯಕ್ರಮ:
ದೋಳ್ಪಾಡಿ ಸ.ಹಿ.ಪ್ರಾ.ಶಾಲಾ ಮುಖ್ಯಗುರು ಜಯಣ್ಣ ಎಸ್, ಸಹ ಶಿಕ್ಷಕಿಯರಾದ ಚಂಚಲಾಕ್ಷಿ, ದೀಪಿಕಾ, ಜಯರಾಜ್ ಡಿ.ಎಸ್, ಅತಿಥಿ ಶಿಕ್ಷಕಿಯರಾದ ಸೌಮ್ಯ, ಕಲಾವತಿ. ಗೌರವ ಶಿಕ್ಷಕಿ ಕೃತಿ ಅವರಿಗೆ ಗುರುವಂದನೆ ನಡೆಯಿತು.


ಪ್ರತಿಭಾ ಪುರಸ್ಕಾರ:
2023-24ನೇ ಸಾಲಿನಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳಾದ ಸಾಧ್ವೀ, ಭವಿಷ್, ಅನುಷ್, ಕೀರ್ತನ್, ಪಾರ್ಥವಿ ರೈ, ಸಾನಿಧ್ಯ, ಸಿ.ವಿ ಸಾಗರ್, ಕೀರ್ತಿಕಾ, ಆಯುಷ್, ಯತಾರ್ಥ್ ಹಾಗೂ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಶನ್ವಿತ್, ದಿಶಾ, ಪೂಜಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.


ಉದ್ಘಾಟನಾ ಸಮಾರಂಭ:
ಬೆಳಿಗ್ಗೆ ನಡೆದ ಕಾರ್ಯಕ್ರಮವನ್ನು ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿಕಟಪೂರ್ವ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಪಿಜಕ್ಕಳ ಉದ್ಘಾಟಿಸಿ ಶುಭಹಾರೈಸಿದರು. ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಬನೇರಿ, ನಿವೃತ್ತ ಮುಖ್ಯಗುರು ಸಂಜೀವ ರೈ ಪೈಕ, ಶಾಲಾ ಎಸ್‌ಡಿಎಂಸಿ ನಿಕಟಪೂರ್ವ ಅಧ್ಯಕ್ಷರಾದ ಉಷಾ ಶಿವರಾಮ ದೋಳ್ಪಾಡಿ, ಎಸ್ ವೆಂಕಟ್ರಮಣ ಎಂ.ವಿ ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯ ಲೋಕಯ್ಯ ಪರವ ದೋಳ್ಪಾಡಿ ಸ್ವಾಗತಿಸಿ, ಸಹಶಿಕ್ಷಕಿ ದೀಪಿಕಾ ನಾರಾಯಣ್ ವಂದಿಸಿದರು. ಪುರುಷೋತ್ತಮ್ ಕೆ.ಆರ್ ಕೊಜಂಬೇಡಿ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ:
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ನಿವೃತ್ತ ಕೃಷಿ ಅಧಿಕಾರಿ ವಿಠಲ ರೈ ಪಿಜಕ್ಕಳ ಹಾಗೂ ಭಾರತದ 17 ರಾಜ್ಯಗಳಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಿದ ಬೆಂಗಳೂರು ಸರೋಜಿನಿ ದಾಮೋದರ್ ಫೌಂಡೇಶನ್‌ನ ವಿಶ್ವನಾಥ ಕಟ್ಟ ಅವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here