ಕೆಪಿಎಸ್ ಕೆಯ್ಯೂರಿನಲ್ಲಿ ವಾರ್ಷಿಕೋತ್ಸವದ ಸಂಭ್ರಮ, ಪ್ರತಿಭಾ ಪುರಾಸ್ಕಾರ – ಶಿಕ್ಷಣ ಎನ್ನುವಂತದ್ದು ಹೃದಯದ ಸಿರಿವಂತಿಕೆ : ನರೇಂದ್ರ ರೈ ದೇರ್ಲ

0

ಕೆಯ್ಯೂರು: ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನಲ್ಲಿ, ಪ್ರಾಥಮಿಕ ವಿಭಾಗ, ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಾರ್ಷಿಕೋತ್ಸವವನ್ನು ಬಹಳ ಸಂಭ್ರಮದಿಂದ ದ22, 23ರಂದು ಆಚರಿಸಲಾಯಿತು.  ಪುತ್ತೂರು ಉಪ ವಿಭಾಗ ಸಹಾಯ ಆಯುಕ್ತ ಗಿರೀಶ್ ನಂದನ್ ಎಂ ಕಾರ್ಯಕ್ರಮದ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಸರಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಿ, ವಿದ್ಯಾರ್ಥಿಗಳು  ಜೀವನದಲ್ಲಿ ಸಾಧನೆ ಮಾಡಬೇಕು ಎಂಬ ಗುರಿ ಇರಬೇಕು, ಇದಕ್ಕೆ ಪೂರಕವಾಗಿ ಶ್ರಮ ಅಗತ್ಯ, ಆಗ ನೀವು ಸಾಧಿಸಿದ ಗುರಿಯ ಕಡೆಗೆ ಇಡೀ  ಸಮಾಜವೇ ನಿಮ್ಮನ್ನು ಗುರುತಿಸಲ್ಪಡುತ್ತದೆ.  ಮಕ್ಕಳ ಹೆತ್ತವರಿಗೆ ಮಕ್ಕಳ ಪ್ರೋತ್ಸಾಹ ಸಿಕ್ಕಾಗ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ ಎಂದು ಶುಭ ಹಾರೈಸಿದರು. ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಅಧ್ಯಕ್ಷತೆ ವಹಿಸಿ ಮಕ್ಕಳ ರಕ್ಷಣೆಯೆ ಒಂದು ಮನೆ ಇನ್ನೊಂದು ವಿದ್ಯಾಲಯ, ಸರಕಾರಿ ಶಾಲೆಗಳು ಯಾವುದಕ್ಕೂ ಕಡಿಮೆಯಿಲ್ಲ, ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಲು ಮುಂದಾಗಬೇಕು.

ಮಕ್ಕಳು ಕಲಿತು ಎಷ್ಟೇ ಉನ್ನತ ಹುದ್ದೆಗೇರಿದರೂ ತಾನು ಕಲಿತ ಶಾಲೆ, ಗುರುಗಳನ್ನು ಎಂದೆಂದೂ  ಮರೆಯಬಾರದು ಎಂದು ಶುಭ ಹಾರೈಸಿದರು. ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು  ಪುತ್ತೂರು ಸರಕಾರಿ ಮಹಿಳಾ ಪ.ದರ್ಜೆ ಕಾಲೇಜು ಪ್ರಾಧ್ಯಪಕ ನರೇಂದ್ರ ರೈ ದೇರ್ಲ ಮಾತಾನಾಡಿ, ನಾವೇ ಶ್ರೇಷ್ಠ, ನಮ್ಮ ಜಾತಿಯೇ ಶ್ರೇಷ್ಠ, ನಮ್ಮ ಮುಖವೇ ಪರಮಶ್ರೇಷ್ಠ ಎನ್ನುವ ಅಹಂಕಾರ ಇರುತ್ತದೆಯೋ ಅದರ ಆಚೆ ನೋಡುವುದೇ ಅದುವೇ ಶಿಕ್ಷಣ. ಶಿಕ್ಷಣವು ಹಣದ ಶ್ರೀಮಂತಿಕೆಯಲ್ಲ , ಬದಲಾಗಿ ಶಿಕ್ಷಣವು ಹೃದಯದ ಸಿರಿವಂತಿಕೆ, ಪುಸ್ತಕ ಮತ್ತು ಹೊರಗಡೆ ಇರುವ ಹಸಿರು ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸುತ್ತದೆ. ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಎಂದಿಗೂ ಮೊಳಕೆಯೊಡೆಯುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ  ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್,   ಕೆಪಿಎಸ್ ಕೆಯ್ಯೂರು ಕಾರ್ಯಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು, ಕರ್ನಾಟಕ ರಾಜ್ಯ ಸ.ನೌ. ಸಂಘ ಬೆಂಗಳೂರು  ಪುತ್ತೂರು ತಾ.ಘಟಕ ಅಧ್ಯಕ್ಷ ಶಿವಾನಂದ ಆಚಾರ್ಯ, ಕೆಯ್ಯೂರು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಮಿತಾ.ಎ.ಕೆ, ವಿ.ಎಂ.ವೇರ್ ಸ್ವಾಪ್ಟ್ ವೇರ್ ಇಂಜಿನಿಯರ್ ಮನೋಜ್ ಬಿ.ರೈ ಮಾಡಾವು,    ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ, ಪೂರ್ಣ ಹಾಜರಾತಿ ಪಡೆದವರಿಗೆ, ತರಗತಿವಾರು ಅತ್ಯುತ್ತಮ ಅಂಕ ಪಡೆದವರಿಗೆ ಬಹುಮಾನಗಳನ್ನು ನೀಡಲಾಯಿತು.  ಕ್ರೀಡೆಯಲ್ಲಿನ ವೈಯಕ್ತಿಕ ಚಾಂಪಿಯನ್ ಗಳನ್ನು, ವಾರ್ಷಿಕ ಸಮಗ್ರ ಪ್ರಶಸ್ತಿ ಪಡೆದ ತಂಡಗಳನ್ನು, ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡಾ ನೂರು ಫಲಿತಾಂಶ ದಾಖಲಿಸಿದ ತಂಡವನ್ನು, ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ವಿಶಿಷ್ಟ ಶ್ರೇಣಿ ಹಾಗೂ ಅತ್ಯಧಿಕ ಅಂಕ ಪಡೆದವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರಗಳನ್ನು, ಕ್ರೀಡಾಕೂಟದ  ಸಾಧಕ ವಿದ್ಯಾರ್ಥಿಗಳ ಸನ್ಮಾನ ,  ಹಾಗೂ ಸಮಗ್ರ ಪ್ರಶಸ್ತಿ, ಬಹುಮಾನ ವಿತರಣೆ , ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕರಿಸಿದ ವರದಿಗಳನ್ನು ಪ್ರಾಥಮಿಕ ವಿಭಾಗ, ಪ್ರೌಢಶಾಲಾ ವಿಭಾಗ, ಕಾಲೇಜು ವಿಬಾಗದ ಶಿಕ್ಷಕರು, ಉಪನ್ಯಾಸಕರು ವರದಿ ವಾಚಿಸಿದರು. ಪ್ರೌಢಶಾಲಾ ವಿಭಾಗದ ಎಲ್ಲಾ ಬಹುಮಾನಗಳನ್ನು , ವೈಯಕ್ತಿಕ ಚಾಂಪಿಯನ್ ಗಳ ಟ್ರೋಫಿಗಳನ್ನು ಪ್ರಾಯೋಜಿಸಿದರು. ವಿಷಯವಾರು ಶಿಕ್ಷಕರು ಹಾಗೂ ಉಪನ್ಯಾಸಕರು ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದವರಿಗೆ ನಗದು ಬಹುಮಾನ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ದಾನಿಗಳು ಸ್ಥಾಪಿಸಿದ ದತ್ತಿನಿಧಿಗಳ ಬಹುಮಾನವನ್ನೂ ವಿತರಿಸಲಾಯಿತು.

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಾಲೆಯ  ಸಮಗ್ರವರದಿ ವಾಚನವನ್ನು ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ. ವರದಿ ಮಂಡಿಸಿದರು.

ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್  ಪ್ರಾಸ್ತಾವಿಕ ವಾಗಿ ಸ್ವಾಗತಿಸಿ, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಪಧವಿಧೇತರ ಮುಖ್ಯ ಗುರು  ಬಾಬು.ಎಂ.ವಂದಿಸಿ, ಸಭಾ ಕಾರ್ಯಕ್ರಮದ ನಿರೂಪಣೆ ಉಪನ್ಯಾಸಕಿ ಉಮಾಶಂಕರಿ ಎಸ್.ಕೆ, ಆಂಗ್ಲ ಭಾಷಾ ಶಿಕ್ಷಕಿ ಜೆಸ್ಸಿ ಪಿ.ವಿ, ಹಾಗೂ ಪ್ರಾಥಮಿಕ ವಿಭಾಗ ಶಿಕ್ಷಕಿ ಸುಪ್ರಭಾ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾಲೇಜು ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು. ವಿವಿಧ ನೃತ್ಯಗಳು ಹಾಗೂ ರೂಪಕಗಳನ್ನು ಪ್ರದರ್ಶಿಸಿದರು. ಎಸ್ ಡಿ ಎಂ ಸಿ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರು, ಮಕ್ಕಳ ಪೋಷಕರು, ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು, ಸಂಸ್ಥೆಯ ಕಛೇರಿ ಸಿಬ್ಬಂದಿ, ಅಡುಗೆ ಸಿಬ್ಬಂದಿ, ಉಪನ್ಯಾಸಕರು ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here