ಪುತ್ತೂರು: ಸರಕಾರಿ ಉ.ಹಿ.ಪ್ರಾ ಶಾಲೆ ಮೇನಾಲ ಇಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ‘ಪ್ರತಿಭಾ ಸಿಂಚನ’ ನಡೆಯಿತು. ಕಾರ್ಯಕ್ರಮವನ್ನು ನೆ.ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ರಾಮ ಮೇನಾಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಫೌಝಿಯಾ, ಸದಸ್ಯರಾದ ರಮೇಶ್ ರೈ ಸಾಂತ್ಯ, ವೆಂಕಪ್ಪ ನಾಯ್ಕ, ಮಾಜಿ ಸದಸ್ಯ ಕೆ ಮಹಮ್ಮದ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಬಾಲಕೃಷ್ಣ ರೈ ಮಾತನಾಡಿ ಶುಭ ಹಾರೈಸಿದರು.ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿರುವ ಅಬ್ದುಲ್ಲಾ ಕೆ ಮೆಣಸಿನಕಾನ ಮಾತನಾಡಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿ ಶುಭ ಹಾರೈಸಿದರು.
ಇತ್ತೀಚೆಗೆ ನಿಧನರಾದ ನೆ.ಮುಡ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷರು ಹಾಗೂ ಮೇನಾಲ ಶಾಲೆಯ ಯಶಸ್ವಿಗೆ ಕಾರಣೀಭೂತರಾದ ಕೆ ಮಹಮ್ಮದ್ ಮೇನಾಲರವರಿಗೆ ಸಂತಾಪ ಸೂಚಿಸಲಾಯಿತು.ಆರನೇ ತರಗತಿಯ ವಿದ್ಯಾರ್ಥಿನಿ ಚರಣ್ಯಾರವರ ಹುಟ್ಟುಹಬ್ಬವನ್ನು ವೇದಿಕೆಯಲ್ಲಿ ಆಚರಿಸಲಾಯಿತು. ವಿವಿಧ ಕಾರ್ಯಕ್ರಮದಲ್ಲಿ ಸಹಕರಿಸಿದ ವೆಂಕಪ್ಪಗೌಡ, ಅಬ್ಬಾಸ್ ಇ. ಎಚ್, ರವಿ ಕೆ ಹಾಗೂ ಹಮೀದ್ ಕೊಪ್ಪಳ ಅವರನ್ನು ಗೌರವಿಸಲಾಯಿತು.
ವಿದ್ಯಾರ್ಥಿಗಳ ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದ ಶಾಲಾ ಹಿರಿಯ ವಿದ್ಯಾರ್ಥಿ, ಅನಿವಾಸಿ ಉದ್ಯಮಿ ಯೂಸುಫ್ ಪಟ್ರೋಡಿ ಅವರ ಪರವಾಗಿ ಅವರ ಅನುಪಸ್ಥಿತಿಯಲ್ಲಿ ಸಹೋದರ ಯೂನಸ್ ಅವರನ್ನು ಸನ್ಮಾನಿಸಲಾಯಿತು.
ಅಕ್ಷರ ದಾಸೋಹದ ಸಿಬ್ಬಂದಿಗಳಾದ ಸರಸ್ವತಿ (ಮುಖ್ಯ ಅಡುಗೆ ಸಿಬ್ಬಂದಿ) ಸರಸ್ವತಿ (ಸಹಾಯಕ ಅಡುಗೆ ಸಿಬ್ಬಂದಿ) ಲೀಲಾವತಿ (ಇನ್ನೋರ್ವ ಸಹಾಯಕ ಅಡುಗೆ ಸಿಬ್ಬಂದಿ) ಹಾಗೂ ಅತಿಥಿ ಶಿಕ್ಷಕಿ ಲತಾ, ಕುಮಾರಿ ಪೂರ್ಣಿಮಾ ಅವರನ್ನು ಗೌರವಿಸಲಾಯಿತು. ಭೋಜನ ವ್ಯವಸ್ಥೆಯ ಉಸ್ತುವಾರಿ ವಹಿಸಿದ್ದ ಲಿಂಗಪ್ಪ ನಾಯ್ಕ ಇವರನ್ನು ಗುರುತಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಉದ್ಯಮಿ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಅಂಗನವಾಡಿ ಕಾರ್ಯಕರ್ತೆ ಶೈಲಜಾ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಮನೋರಮ ಉಪಸ್ಥಿತರರಿದ್ದರು.
ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕ ವೃಂದ, ಹಿರಿಯ ವಿದ್ಯಾರ್ಥಿ ವೃಂದ, ವಿದ್ಯಾಭಿಮಾನಿಗಳು ಸಹಕರಿಸಿದರು. ಎಸ್.ಎಸ್.ಎಫ್ ಮೇನಾಲ ಘಟಕದ ವತಿಯಿಂದ ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಮುಖ್ಯ ಶಿಕ್ಷಕಿ ಜಲಜಾ ಕೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.
ಶಿಕ್ಷಕಿ ಜಯಶ್ರೀ ಬಿ ವರದಿ ವಾಚಿಸಿದರು. ಶಿಕ್ಷಕಿಯರಾದ ರೇವತಿ ಕೆ, ಲತಾ.ಬಿ ಹಾಗೂ ಕುಮಾರಿ ಪೂರ್ಣಿಮಾ ಸ್ಪರ್ಧೆಗಳಲ್ಲಿ ವಿಜೇತರಾದವರ ಪಟ್ಟಿ ವಾಚಿಸಿದರು, ರಾಜಿವಿ. ಎ ವಂದಿಸಿದರು. ಶಿಕ್ಷಕಿ ವಾಣಿ ಕೆ ಕಾರ್ಯಕ್ರಮ ನಿರೂಪಿಸಿದರು.
ಮೇನಾಲ ಅಂಗನವಾಡಿ ಶಾಲಾ ಮಕ್ಕಳು ಹಾಗೂ ಮೇನಾಲ ಪ್ರಾಥಮಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಪುಟಾಣಿಗಳಿಗೂ ಪ್ರೋತ್ಸಾಹಕ ಬಹುಮಾನಗಳನ್ನು ಶಾಲಾ ಎಸ್.ಡಿ.ಎಂ.ಸಿ ವತಿಯಿಂದ ನೀಡಲಾಯಿತು.