ಸತ್ಯಸಾಯಿ ಮಂದಿರದಲ್ಲಿ 56ನೇ ಉಚಿತ ನೇತ್ರಾ ಚಿಕಿತ್ಸಾ ಶಿಬಿರ

0

ಪುತ್ತೂರು: ಶ್ರೀ ಸತ್ಯಸಾಯಿ ಸೇವಾ ಸಮಿತಿ, ಶ್ರೀ ಬೈಂದೂರು ಪ್ರಭಾಕರ ರಾವ್ ಮೆಮೊರಿಯಲ್ ಟ್ರಸ್ಟ್, ದ.ಕ ಜಿಲ್ಲಾ ಅಂಧತ್ವ ಹತೋಟಿ ಸಂಸ್ಥೆ, ಜಿಲ್ಲಾ ವೆನ್ ಲಾಕ್ ಸಂಚಾರಿ ನೇತ್ರಾ ಚಿಕಿತ್ಸಾ ಘಟಕ, ಕೆಎಂಸಿ ಆಸ್ಪತ್ರೆ ಮಂಗಳೂರು ಹಾಗೂ ಸರಕಾರ ಆಸ್ಪತ್ರೆ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕೋರ್ಟ್ ರಸ್ತೆಯ ಶ್ರೀ ಸತ್ಯಸಾಯಿ ಮಂದಿರದಲ್ಲಿ 56ನೇ ಉಚಿತ ನೇತ್ರಾ ಚಿಕಿತ್ಸಾ ಶಿಬಿರವು ಡಿ.26ರಂದು ನಡೆಯಿತು.ಶಿಬಿರವನ್ನು ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅನಘ ದೀಪ ಬೆಳಗಿಸಿ ಉದ್ಘಾಟಿಸಿದರು.


ಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ ಪ್ರಸನ್ನ ಎನ್ ಭಟ್ ಮಾತನಾಡಿ, 220 ದೇಶಗಳಲ್ಲಿ ಸತ್ಯಸಾಯಿ ಸೇವಾ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಭಜನೆ, ಆಧ್ಯಾತ್ಮಿಕತೆಗಳ ಜೊತೆಗೆ ಸೇವೆಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ಇದು ಮಂದಿರವೂ ಹೌದು.‌ಸೇವಾ ಕ್ಷೇತ್ರವೂ ಆಗಿದೆ. ನಿಸ್ವಾರ್ಥವಾಗಿ ಸರ್ವಧರ್ಮ ಸಮನ್ವಯತೆಯಿಂದ ಸೇವೆ ನೀಡಲಾಗುತ್ತಿದೆ ಎಂದರು.


ನೇತ್ರಾಧಿಕಾರಿ ಶಾಂತರಾಜ್ ಮಾತನಾಡಿ, ದ.ಕ ಜಿಲ್ಲೆಯಲ್ಲಿ ನಡೆಯುವ ಶಿಬಿರಗಳಲ್ಲಿ ಸತ್ಯಸಾಯಿ ಮಂದಿರದಲ್ಲಿ ಯಶಸ್ವಿಯಾಗಿ ಶಿಬಿರ ನಡೆಯುತ್ತಿದೆ. ಶಿಬಿರದಲ್ಲಿ ಪರೀಕ್ಷಿಸಿ ಸೂಕ್ತ ಸಲಹೆ,‌ ಚಿಕಿತ್ಸೆ, ರೀಡಿಂಗ್ ಗ್ಲಾಸ್ ವಿತರಿಸಲಾಗುತ್ತದೆ. ಪೊರೆ ಇದ್ದವರಿಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಅನುಭವೀ ವೈದ್ಯರುಗಳಿಂದ ಕಣ್ಣಿನ ಉಚಿತ ಪೊರೆ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು ಎಂದರು.


ಬೈಂದೂರು ಪ್ರಭಾಕರ ರಾವ್ ಮೆಮೊರಿಯಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಸತ್ಯಸುಂದರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಜನರ ಸೇವೆಯ ಮೂಲಕ ಜನಾರ್ದನನ ಸೇವೆ ನಡೆಸಲಾಗುತ್ತಿದೆ. ಸತ್ಯಸಾಯಿ ಸೇವಾ ಸಮಿತಿ ಮೂಲಕ ಉಚಿತ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಸಂಸ್ಥೆಯ ಮೂಲಕ ಪುಟ್ಟಪರ್ತಿ ಹಾಗೂ ವೈಟ್ ಫೀಲ್ಡ್ ನಲ್ಲಿರುವ ಆಸ್ಪತ್ರೆಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಎಲ್ಲಾ ರೀತಿಯ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ ಎಂದರು.


ವೆನ್ ಲಾಕ್ ಆಸ್ಪತ್ರೆಯ ನೇತ್ರಾಧಿಕಾರಿ ಅನಿಲ್ ರಾಮಾನುಜನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀವಿತಾ ರೈ ಪ್ರಾರ್ಥಿಸಿದರು. ಡಾ.ಸತ್ಯ ಸುಂದರ ರಾವ್ ಸ್ವಾಗತಿಸಿದರು. ಪದ್ಮನಾಭ ನಾಯಕ್ ಶಿಬಿರದ ಮಾಹಿತಿ ನೀಡಿದರು. ದಯಾನಂದ ಕೆ.ಎಸ್ ವಂದಿಸಿದರು. ರಘುನಾಥ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here