ವಿಟ್ಲ: ಬಂಟ್ವಾಳ ತಾಲೂಕು ವಿಟ್ಲ ಹೋಬಳಿಯ ಮಾಣಿಲ ಗ್ರಾಮದ ತಾರಿದಳ ಅಂಗನವಾಡಿ ಕೇಂದ್ರದಲ್ಲಿ ಡಿ.26ರಂದು ವಾರ್ಷಿಕೋತ್ಸವ ಮತ್ತು ಅಂಗನವಾಡಿ ದಿನಾಚರಣೆ ಆಚರಿಸಲಾಯಿತು.
ಮಾಣಿಲ ಗ್ರಾಮ ಪಂಚಾಯತು ಅಧ್ಯಕ್ಷ ಶ್ರೀಧರ ಬಾಳೆಕಲ್ಲು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅಂಗನವಾಡಿ ಕೇಂದ್ರದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸ್ತ್ರೀಶಕ್ತಿ ಸಂಘದ ಅನುರಾಧ ಸ್ವಾಗತಿಸಿದರು. ಗ್ರಾಮ ಪಂ.ಮಾಜಿ ಅಧ್ಯಕ್ಷೆ ವನಿತಾ, ಗ್ರಾ. ಪಂಚಾಯತ್ ಸದಸ್ಯ ವಿಷ್ಣುಭಟ್, ಕಾಮಜಾಲು ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಸುಧಾ, ಆಶಾ ಕಾರ್ಯಕರ್ತೆ ಉಷಾ, ಅಂಗನವಾಡಿ ಕಾರ್ಯಕರ್ತೆ ರೇವತಿ, ಸಹಾಯಕಿ ಪ್ರೇಮಾ ಉಪಸ್ಥಿತರಿದ್ದರು.