ಕಾಣಿಯೂರು: ಕಾಣಿಯೂರು ಉಜ್ವಲ ಸಂಜೀವಿನಿ ಒಕ್ಕೂಟದ 2022-2023ನೇ ಸಾಲಿನ ವಾರ್ಷಿಕ ಮಹಾಸಭೆಯು ಕಾಣಿಯೂರು ಗ್ರಾಮ ಪಂಚಾಯತ್ ನ ಕಣ್ವರ್ಷಿ ಸಭಾಭವನ ನಡೆಯಿತು. ಒಕ್ಕೂಟ ದ ಅಧ್ಯಕ್ಷರಾದ ಸುಚಿತ್ರಾ ಕಟ್ಟತ್ತಾರು ಅಧ್ಯಕ್ಷತೆ ವಹಿಸಿದ್ದರು.ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ರಾದ ಜಗತ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎನ್.ಆರ್.ಎಲ್.ಎಂ ಯೋಜನೆ ಬಗ್ಗೆ, ಒಕ್ಕೂಟದ ಅನುದಾನದ ಬಗ್ಗೆ, ಮಹಿಳೆಯರಿಗೆ ಸ್ವಉದ್ಯೋಗ ದ ಬಗ್ಗೆ, ಬೇರೆ ಬೇರೆ ಕಾರ್ಯಕ್ರಮ ನಡೆಸುವ ಬಗ್ಗೆ, ಒಕ್ಕೂಟದ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ, ಮತ್ತು ಕೌಶಲ್ಯ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿದರು.
ವಲಯ ಮೇಲ್ವಿಚಾರಕರಾದ ನಮಿತಾರವರು ಮಾತನಾಡಿ ವಾರ್ಡ್ ಒಕ್ಕೂಟ ದ ಬಗ್ಗೆ, ಗ್ರಾಮೀಣ ರೈತ ಸಂತೆ, ಮಾರ್ಕೆಟಿಂಗ್, ಮತ್ತು ಬಿಸಿ ಸಖಿ, LCRP, ಆಯ್ಕೆ ಯ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸದಸ್ಯೆ ಅಂಬಾಕ್ಷಿ ಕೂರೇಲು ಉಪಸ್ಥಿತರಿದ್ದರು. ಒಕ್ಕೂಟದ ಕಾರ್ಯದರ್ಶಿ ಜಲಜಾಕ್ಷಿ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.
ಅಂಗನವಾಡಿ ಕಾರ್ಯಕರ್ತೆಯರಾದ ವೇದಾವತಿ, ರೋಹಿಣಿ, ಆಶಾ ಕಾರ್ಯಕರ್ತೆಯರಾದ ಚಂದ್ರಾವತಿ, ಭಾರತಿ, MBK, LCRP, ಕೃಷಿ ಸಖಿ, ಪಶುಸಖಿ, ಕೃಷಿ ಉದ್ಯೋಗ ಸಖಿ, ಸಂಘದ ಸದಸ್ಯರು ಭಾಗವಹಿಸಿದ್ದರು. ಚಿತ್ರಾ ಪ್ರಾರ್ಥಿಸಿದರು. ಲೀಲಾವತಿ ಸ್ವಾಗತಿಸಿ, ಎಲ್.ಸಿ.ಆರ್.ಪಿ ಚಂದ್ರಿಕಾ ವಂದಿಸಿದರು. ಎಂ.ಬಿ. ಕೆ ಸುಮನಾ ಕಾರ್ಯಕ್ರಮ ನಿರೂಪಿಸಿದರು.