ಪುತ್ತೂರು: ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಸಮೀಪದ ಕನ್ನಡಮೂಲೆ ಎಂಬಲ್ಲಿ ಮರು ನಿರ್ಮಾಣಗೊಳ್ಳಲಿರುವ ಅಯ್ಯಪ್ಪ ಮಂದಿರಕ್ಕೆ ದ.28ರಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ಮಂದಿರದ ಧರ್ಮದರ್ಶಿಗಳಾದ ತಿಮ್ಮಪ್ಪ ಗೌಡ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಭೂಮಿಪೂಜೆ, ಶಂಕುಸ್ಥಾಪನೆ ನಡೆಯಿತು. 3 ದಶಕಗಳ ಹಿಂದೆ ಇಲ್ಲಿ ನಿರ್ಮಿಸಲಾದ ಅಯ್ಯಪ್ಪ ಮಂದಿರವನ್ನು ಗ್ರಾಮಸ್ಥರ ಸಂಪೂರ್ಣ ಸಹಭಾಗಿತ್ವದಲ್ಲಿ ಮರು ನಿರ್ಮಿಸಲು ನಿರ್ಧರಿಸಲಾಗಿದೆ. ಅದರಂತೆ ನೂತನ ಮಂದಿರ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಧರ್ಮದರ್ಶಿ ತಿಳಿಸಿದರು.
ಈ ಸಂದರ್ಭದಲ್ಲಿ ಶಿಲ್ಪಿ ಮಾಧವ ಕೆಯ್ಯೂರು, ಮೇಸ್ತ್ರಿ ಹರಿಕೃಷ್ಣ, ಪ್ರಮುಖರಾದ ನಿವೃತ್ತ ಶಿಕ್ಷಕ ದೇವಪ್ಪ ಗೌಡ ಅಂಗನತ್ತಡ್ಕ, ಕೆದಂಬಾಡಿ ಕೆಯ್ಯೂರು ಪ್ಯಾಕ್ಸ್ ಉಪಾಧ್ಯಕ್ಷರಾದ ಕೃಷ್ಣಕುಮಾರ್ ರೈ ಕೆದಂಬಾಡಿ ಗುತ್ತು, ಸುಧಾಕರ ಸುವರ್ಣ ತಿಂಗಳಾಡಿ, ಮುಖ್ಯ ಶಿಕ್ಷಕರಾದ ಬಾಬು, ಹರಿಕೃಷ್ಣ, ಗಣೇಶ್ ರೈ ತೆಗ್ಗು, ಶುಭಪ್ರಕಾಶ್ ಎರಬೈಲ್, ಆನಂದ ರೈ ಮಠ, ಆನಂದ ರೈ ತಿಂಗಳಾಡಿ, ಬೆಳ್ಳಿಯಪ್ಪ ಎರಬೈಲು, ಕಿಶೋರ್ ತಿಂಗಳಾಡಿ, ಕುಶಾಲಪ್ಪ ಎನ್., ಚಂದ್ರಶೇಖರ್ ಪಂಜಿಕಲ್ಲು, ಚಂದ್ರಶೇಖರ್ ನೆಲ್ಲಿಗುರಿ, ಗೋಪಾಲಕೃಷ್ಣ ಕೋಡಂಬು, ಗಣೇಶ್ ಬೈತಡ್ಕ, ಶಾರದಾ ಕನ್ನಡಮೂಲೆ, ಯಶ್ಜಿತ್ ಕೆ., ಪ್ರಭು ಬಿ.ಎಸ್., ಜಯರಾಮ್, ಪದ್ಮನಾಭ, ಪವನ್, ಯತೀಶ್, ಅಣ್ಣು ಟಿ, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.