ಪುತ್ತೂರು: ಕಲಿತ ಶಾಲೆಗೆ ತೆರಳಿದ ಶಾಸಕ ಅಶೋಕ್ ಕುಮಾರ್ ರೈ ಆ ದಿನಗಳಲ್ಲಿ ತಾನು ಕುಳಿತುಕೊಂಡಿದ್ದ ತರಗತಿಗೆ ಭೇಟಿ ನೀಡಿ ವಿದ್ಯಾರ್ಥಿ ಜೀವನದ ಬಾಲ್ಯದ ಆ ನೆನಪುಗಳನ್ನು ಮೆಲುಕು ಹಾಕಿಕೊಂಡ ಅಪೂರ್ವ ಘಟನೆಗೆ ಪುತ್ತೂರು ಕೊಂಬೆಟ್ಟಿನ ಸರಕಾರಿ ಪ್ರೌಢ ಶಾಲೆ ಸಾಕ್ಷಿಯಾಯಿತು.
ಪುತ್ತೂರಿನ ಕೊಂಬೆಟ್ಟು ಸರಕಾರಿ ಪ್ರೌಢ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದರು. ಇದೇ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಶಾಸಕ ಅಶೋಕ್ ರೈ ಅಂದು ತಾನು ಕುಳಿತುಕೊಂಡಿದ್ದ ತರಗತಿಗೆ ಭೇಟಿ ನೀಡಿ, ಕುಳಿತು ಪಾಠ ಕೇಳುತ್ತಿದ್ದ ಅದೇ ಜಾಗದಲ್ಲಿ ಕುಳಿತು ಹೈಸ್ಕೂಲ್ ಜೀವನವನ್ನು ಮೆಲುಕು ಹಾಕಿದರು. ಈ ಹೃದಯಸ್ಪರ್ಶಿ ಘಟನೆಗೆ ಶಾಲೆಯ ಉಪಪ್ರಾಂಶುಪಾಲರು ಸೇರಿದಂತೆ ಹಲವರು ಸಾಕ್ಷಿಯಾದರು. ಶಾಸಕರ ಹೈಸ್ಕೂಲ್ ಸಮಯದ ಉದೃತ ಭಾಗದ ಪ್ರಮಾಣ ಪತ್ರವನ್ನು ನೀಡಿ ಗೌರವಿಸುವ ಮೂಲಕ ಉಪಪ್ರಾಂಶುಪಾಲ ವಸಂತ್ ಮೂಲ್ಯ ಭೇಟಿಯ ಈ ಕ್ಷಣಗಳನ್ನು ಸ್ಮರಣೀಯವಾಗಿಸಿದರು.