*ಬಂಪರ್ ಡ್ರಾದಲ್ಲಿ ಲಭಿಸಲಿದೆ ಹೋಂಡಾ ಆ್ಯಕ್ಟೀವಾ
*ಸ್ಕೀಂ ಗ್ರಾಹಕರಿಗೆ ಅಪಘಾತ ವಿಮೆ ಉಚಿತ
ವಿಟ್ಲ: ಇಲ್ಲಿನ ಖಾಸಗಿ ಬಸ್ಸುನಿಲ್ದಾಣದ ಬಳಿ ಇರುವ ಹನುಮಾನ್ ಕಾಂಪ್ಲೆಕ್ಸ್ ನಲ್ಲಿ ಕಳೆದ 27ವರುಷಗಳಿಂದ ವ್ಯವಹಾರ ನಡೆಸುತ್ತಿರುವ ಶ್ರೀ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ ಮತ್ತು ಫರ್ನೀಚರ್ಸ್ ನಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ 500 ರೂಪಾಯಿಯಂತೆ 40 ಕಂತುಗಳನ್ನು ಕಟ್ಟುವ ಲಕ್ಕಿ ಸ್ಕೀಂ ಆರಂಭಗೊಳ್ಳಲಿದ್ದು, ಅದರ ಸ್ಕೀಂ ಕಾರ್ಡ್ ಬಿಡುಗಡೆ ಸಮಾರಂಭ ಜ.1ರಂದು ಸಂಸ್ಥೆಯಲ್ಲಿ ನಡೆಯಿತು.
ವಿಟ್ಲದ ಹನುಮಾನ್ ಪ್ರಿಂಟರ್ಸ್ ನ ಮಾಲಕ ವೆಂಕಟೇಶ್ ಭಟ್ ರವರು ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ, ಸ್ಕೀಂ ಕಾರ್ಡನ್ನು ಬಿಡುಗಡೆ ಮಾಡಿದರು. ಶೆಟ್ಟಿ ವಾಚ್ ವರ್ಕ್ ನ ಮಾಲಕರಾದ ಗೋಪಾಲ ಕೃಷ್ಣ ಶೆಟ್ಟಿರವರು ಪ್ರಥಮ ಕಾರ್ಡ್ ಅನ್ನು ಪಡೆದುಕೊಂಡರು. ಮೈತ್ರೈಯಿ ಗುರುಕಲದ ಜಗನ್ನಾಥ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಜಯಂತ ಸಿ.ಹೆಚ್, ಪ್ರಮುಖರಾದ ಕೀರ್ತನ್ ಕೆದಿಲಾಯ, ಅವರ ಪತ್ನಿ ಅನಿತಾ ಕೆದಿಲಾಯ, ವಾಸುದೇವ ಪ್ರಭು ವಿಟ್ಲ, ನವೀನ್ , ಶೀನ ಎಲ್.ಐ. ಸಿ. ಸಂಸ್ಥೆಯ ಸಿಬ್ಬಂದಿ ಶರತ್, ಮಾಲಕರ ಪುತ್ರ ಶ್ರೀಶಾಸ್ತ, ಪುತ್ರಿ ಶ್ರೀದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರ ಪತ್ನಿ ರಶ್ಮಿಮಂಜುನಾಥ್ ಅಥಿತಿಗಳನ್ನು ಸ್ವಾಗತಿಸಿದರು.
27 ವರುಷಗಳ ಸೇವಾ ಪರಂಪರೆ:
ಶ್ರೀ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ ಮತ್ತು ಫರ್ನೀಚರ್ ಸಂಸ್ಥೆಯು ಕಳೆದ ಇಪ್ಪತ್ತೇಳು ವರುಷಗಳಿಂದ ವಿಟ್ಲದ ಖಾಸಗಿ ಬಸ್ಸುನಿಲ್ದಾಣದ ಬಳಿ ಇರುವ ಹನುಮಾನ್ ಕಾಂಪ್ಲೆಕ್ಸ್ ನಲ್ಲಿ ವ್ಯವಹಾರ ನಡೆಸುತ್ತಿದ್ದು, ಈ ಭಾಗದ ಜನರ ವಿಶ್ವಾಸಾರ್ಹ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆಯು ಅತೀ ಕಡಿಮೆ ಬೆಲೆಗೆ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಈ ಭಾಗದ ಜನರ ಅಚ್ಚುಮೆಚ್ಚಿನ ಸಂಸ್ಥೆಯಾಗಿದೆ. ಹಲವಾರು ಗ್ರಾಹಕವರ್ಗವನ್ನು ಹೊಂದಿರುವ ಸಂಸ್ಥೆ ಬೆಳೆದು ಇದೀಗ 28ನೇ ವರುಷಕ್ಕೆ ಪಾದಾರ್ಪಣೆ ಗೈದಿದೆ.
500 ರೂಪಾಯಿಯಂತೆ 40 ಕಂತು:
ಸಂಸ್ಥೆಯೂ 28ನೇ ವರುಷಾಚರಣೆಯ ಸಂದರ್ಭದಲ್ಲಿ ಗ್ರಾಹಕರಿಗೆ ಲಕ್ಕಿ ಸ್ಕೀಂ ಒಂದನ್ನು ಆರಂಭಿಸಿದ್ದು, ಪ್ರತೀ ೧೫ದಿನಗಳಿಗೊಮ್ಮೆ 500 ರೂಪಾಯಿಯಂತೆ 40 ಕಂತುಗಳು ಪಾವತಿ ಮಾಡಬೇಕಾಗಿದೆ. ಪ್ರತೀ ಹದಿನೈದು ದಿನಗಳಿಗೊಮ್ಮೆ ನಡೆಯುವ ಡ್ರಾದಲ್ಲಿ ವಿಜೇತರಾದವರಿಗೆ ಬೆಲೆಬಾಳಯವ ಎಲೆಕ್ಟ್ರೋನಿಕ್ಸ್ ಅಥವಾ ಫರ್ನೀಚರ್ ಐಟಂಗಳು ಲಭಿಸಲಿದೆ. ಡ್ರಾ ವಿಜೇತರಾದ ಸದಸ್ಯರು ಮುಂದಿನ ಕಂತು ಕಟ್ಟ ಬೇಕಾಗಿಲ್ಲ. ಸ್ಕೀಂ ಗೆ ಸೇರಿದ ಸದಸ್ಯರಿಗೆ ಕೊನೆಯಲ್ಲಿ ಹೋಂಡಾ ಆ್ಯಕ್ಟೀವಾ ಗೆಲ್ಲಯವ ಸುವರ್ಣಾವಕಾಶವನ್ನು ಸಂಸ್ಥೆ ಕಲ್ಪಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 7892938713, 9448502272ಯನ್ನು ಸಂಪರ್ಕಿಸಬಹುದಾಗಿದೆ.
ಸ್ಕೀಂಗೆ ಸೇರಿದ ಸದಸ್ಯರಿಗೆ ಉಚಿತ ಅಪಘಾತ ವಿಮಾ ಯೋಜನೆ:
ಮಂಜುನಾಥ ಎಲೆಕ್ಟ್ರೋನಿಕ್ಸ್ ನಲ್ಲಿ ಹೊಸದಾಗಿ ಆರಂಭಿಸಿರುವ ಸ್ಕೀಂಗೆ ಸೇರಿದ ಸದಸ್ಯರಿಗೆ ಒಂದು ಲಕ್ಷ ರೂಪಾಯಿ ಉಚಿತ ಅಪಘಾತ ವಿಮೆ ಲಭಿಸಲಿದೆ. ಸ್ಕೀಂ ಗೆ ಸದಸ್ಯರಾದ ಗ್ರಾಹಕರು ಆ ಕೂಡಲೇ ಅಪಘಾತ ವಿಮಾ ಯೋಜನೆಗೆ ಒಳಪಡಲಿದ್ದಾರೆ.
ಫೆ.5ರಂದು ಪ್ರಥಮ ಡ್ರಾ:
ಸಂಸ್ಥೆಯು ಆರಂಭಿಸಿರುವ ಲಕ್ಕಿ ಸ್ಕೀಂ ನ ಪ್ರಥಮ ಡ್ರಾವೂ ಫೆ.5 ರಂದು ಸಂಸ್ಥೆಯ ವಠಾರದಲ್ಲಿ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಉಪಸ್ಥಿತರಿರುವ ಗ್ರಾಹಕರ ಪೈಕಿ ಲಕ್ಕಿ ಡ್ರಾದ ಮೂಲಕ 10 ಜನರಿಗೆ ಸರ್ಪ್ರೈಸ್ ಗಿಫ್ಟ್ ಕೊಡಲು ತೀರ್ಮಾನಿಸಿದೆ.
ಸ್ಕೀಂ ಆರಂಭಿಸಲಾಗಿದೆ – ಎಲ್ಲರ ಸಹಕಾರ ಅಗತ್ಯ
ಕಳೆದ 27 ವರುಷಗಳಿಂದ ವಿಟ್ಲ ದಲ್ಲಿ ವ್ಯವಹರ ನಡೆಸುತ್ತಾ ಬರುತ್ತಿದ್ದೇವೆ. ಗುಣಮಟ್ಟದ ವಸ್ತುಗಳನ್ನು ನೀಡುವ ಮೂಲಕ ಜನಮಣ್ಣನೆಯನ್ನು ಗಳಿಸಿದ್ದೇವೆ. ಇದೀಗ ನಮ್ಮ ಗ್ರಾಹಕರಿಗಾಗಿ ಲಕ್ಕಿ ಸ್ಕೀಂ ನ ಆಯೋಜನೆಯನ್ನು ಮಾಡಿದ್ದೇವೆ. ಲಕ್ಕಿ ಸ್ಕೀಂ ನಲ್ಲಿ ವಿಜೇತರಾದ ಪ್ರತಿಯೋರ್ವರಿಗು ಉತ್ತಮ ವಾರಂಟಿಯೊಂದಿಗೆ ಗುಣಮಟ್ಟದ ವಸ್ತುಗಳು ಲಭಿಸಲಿದೆ. ಸ್ಕೀಂಗೆ ಸೇರ್ಪಡೆಗೊಂಡ ಪ್ರತಿಯೋರ್ವರಿಗೂ ಒಂದು ಲಕ್ಷರೂಪಾಯಿ ಮೌಲ್ಯದ ಅಪಘಾತ ವಿಮೆ ಲಭಿಸಲಿದೆ.
ಮಂಜುನಾಥ
ಮಾಲಕರು,ಶ್ರೀ ಮಂಜುನಾಥೇಶ್ವರ ಎಲೆಕ್ಟ್ರೋನಿಕ್ಸ್ ಮತ್ತು ಫರ್ನೀಚರ್ ವಿಟ್ಲ