ಪುತ್ತೂರು: ದಿ ರೈಸಿಂಗ್ ಸ್ಟಾರ್ಸ್ ಪುತ್ತೂರು ತಂಡದ ವತಿಯಿಂದ ಸಾಮೆತ್ತಡ್ಕದಲ್ಲಿರುವ ಸುದಾನ ಸ್ಪೋರ್ಟ್ಸ್ ಬ್ಯಾಡ್ಮಿಂಟನ್ ಕ್ಲಬ್ನಲ್ಲಿ ಶಿವಳ್ಳಿ ಬ್ರಾಹ್ಮಣ ಪುರುಷರ ಮತ್ತು ಮಹಿಳೆಯರ ಎರಡನೇ ಆವೃತ್ತಿಯ ಸ್ಮಾಷ್ ಇಟ್ ಡಬಲ್ಸ್ ಮಾದರಿಯ ಮುಕ್ತ ಬ್ಯಾಡ್ಮಿಂಟನ್ ಪಂದ್ಯಾವಳಿ ಡಿ.30ರಂದು ನಡೆಯಿತು.
ಪಂದ್ಯಾವಳಿಯನ್ನು ಪ್ರಸಿದ್ಧ ಬ್ರಹ್ಮವಾಹಕ ರಾಧಾಕೃಷ್ಣ ಪುತ್ತೂರಾಯ ಆಲಡ್ಕ, ಪುತ್ತೂರಾಯ ಎಂಟರ್ಪ್ರೈಸಸ್ ತಿಂಗಳಾಡಿ ಹಾಗೂ ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ಇದರ ಅಧ್ಯಕ್ಷ ಹರೀಶ್ ಪುತ್ತೂರಾಯ, ಜಿಡೆಕಲ್ಲು ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ನಳಿನಿ ಡಿ ಹೆಬ್ಬಾರ್, ಸಾಯಿ ಭಗವಾನ್ ಫ್ಯೂಯೆಲ್ಸ್ ಮುಕ್ರುಂಪಾಡಿ ಇದರ ಮಾಲೀಕ ಜಯಗುರು ಆಚಾರ್ ಹಿಂದಾರು, ಮತ್ತು ಪ್ರಗತಿಪರ ಕೃಷಿಕ ಕೃಷ್ಣಪ್ರಸಾದ ಕೆದಿಲಾಯ ಶಿಬರ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ದಕ್ಷಿಣ ಕನ್ನಡ, ಉಡುಪಿ, ಮತ್ತು ಕಾಸರಗೋಡು ಜಿಲ್ಲೆಗಳಿಂದ 38 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು. ಪುರುಷರ ವಿಭಾಗದಲ್ಲಿ ಉಡುಪಿಯ ನಿಖಿಲ್ ಅಡಿಗ ಮತ್ತು ಪವನ್ ಉಪಾಧ್ಯ ವಿಜೇತರಾದರು. ಉಜಿರೆಯ ಕಾರ್ತಿಕ್ ಕೆದಿಲಾಯ ಮತ್ತು ಶ್ರೀಕಾಂತ್ ಶಿಬರಾಯ ರನ್ನರ್ಸ್ ಅಪ್ ಸ್ಥಾನವನ್ನು ಪಡೆದರು. ಉಡುಪಿಯ ಅಭಿಷೇಕ್ ಮತ್ತು ವಾಸುದೇವ್ ಮೂರನೇ ಸ್ಥಾನ ಪಡೆದರೆ, ಸುಧೀರ್ ಮತ್ತು ರಾಹುಲ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಸಹನಾ ಭಟ್ ಮತ್ತು ಆಶಾ ರಾವ್ ಪ್ರಥಮ ಸ್ಥಾನ ಪಡೆದರು. ಪುತ್ತೂರಿನ ಅನನ್ಯ ಬೈಪಾಡಿತ್ತಾಯ ಮತ್ತು ಸುಕನ್ಯಾ ಶಿಬರಾಯ ರನ್ನರ್ಸ್ ಅಪ್ ಆಗಿ ಮೂಡಿ ಬಂದರು. ರಾಮಕುಂಜದ ರಜಿತಾ ಮತ್ತು ಶುಭ ತೃತೀಯ ಸ್ಥಾನ ಪಡೆದರೆ ಸುಳ್ಯದ ಪ್ರಣಮ್ಯ ಮತ್ತು ಪ್ರಸನ್ನ ನಾಲ್ಕನೇ ಸ್ಥಾನ ಪಡೆದರು. ವಿಜೇತರು ಆಕರ್ಷಕ ಟ್ರೋಫಿಯೊಂದಿಗೆ ಮೂರು ಸಾವಿರ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು. ರನ್ನರ್ಸ್ ಆದರವರು ಟ್ರೋಫಿ ಮತ್ತು ಎರಡು ಸಾವಿರ ನಗದು ಬಹುಮಾನ ಪಡೆದರು.
ಟ್ರೇಡ್ ಡ್ರೀಮ್ಸ್ ಮತ್ತು ಡೆಕಾರ್ಸ್ ಸೆಂಚುರಿ ಮ್ಯಾಟ್ರೆಸ್ಸ್ ಫಳ್ನೀರ್ ಮಂಗಳೂರು ಇದರ ಮಾಲೀಕ ಪ್ರಸನ್ನ ಕಣ್ಣಾರಾಯ ಬನೇರಿ, ಪುತ್ತೂರಿನ ನ್ಯಾಯವಾದಿ ಮತ್ತು ಶಿವಳ್ಳಿ ಸಂಪದ ಪುತ್ತೂರು ಇದರ ಅಧ್ಯಕ್ಷ ದಿವಾಕರ ನಿಡ್ವಣ್ಣಾಯ, ಶಿವಳ್ಳಿ ಸಂಪ ಪುತ್ತೂರು ಇದರ ಕಾರ್ಯದರ್ಶಿ ಸತೀಶ್ ಕೆದಿಲಾಯರು ವಿಜೇತರಿಗೆ ಪ್ರಶಸ್ತಿ ವಿತರಿಸಿ ಅಭಿನಂದಿಸಿದರು. ಪಂದ್ಯಾವಳಿಯ ತೀರ್ಪುಗಾರರಾಗಿ ಸಹಕರಿಸಿದ ಅಭಿಕೃಷ್ಣ, ಅಭಿರಾಮ್ ಬೈಪಾಡಿತ್ತಾಯ, ನವನೀಶ್ ಅಸ್ರ, ರಾಮಮೂರ್ತಿ ಹೆಬ್ಬಾರ್, ರತೀಶ್ ಹೆಬ್ಬಾರ್, ದುರ್ಗಾಪ್ರಸಾದ್ ಕೆರ್ಮುಣ್ಣಾಯ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ರೈಸಿಂಗ್ ಸ್ಟಾರ್ಸ್ ತಂಡದ ರೂಪೇಶ್ ಕಣ್ಣಾರಾಯ, ಶಿವರಾಮ ಕಲ್ಲೂರಾಯ, ಶರಣ್ ವಾರಂಬಳಿತ್ತಾಯ ಹಾಗೂ ಪ್ರಸನ್ನ ಉಂಗ್ರುಪುಳಿತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರುತಿ ರಂಜನಿ ಪ್ರಾರ್ಥಿಸಿದರು. ಗೋವಿಂದ ಉಂಗ್ರುಪುಳಿತ್ತಾಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.