





ಗೌರವಾಧ್ಯಕ್ಷ- ಗಿರಿಶಂಕರ್ ಸುಲಾಯ, ಅಧ್ಯಕ್ಷ- ಪ್ರಕಾಶ್ ರೈ ಸಾರಕರೆ, ಪ್ರ.ಕಾರ್ಯದರ್ಶಿ- ಗಂಗಾಧರ್ ಪೆರಿಯಡ್ಕ
ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ನ.29 ಮತ್ತು 30ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಮಾರು ಗದ್ದೆಯಲ್ಲಿ ನಡೆಯಲಿರುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ವಿವಾಹ, ಹಿಂದವಿ ಸಾಮ್ರಾಜೋತ್ಸವ ಕಾರ್ಯಕ್ರಮದ ಅಮಂತ್ರಣ ಪತ್ರ ಬಿಡುಗಡೆ ಮತ್ತು ಸವಣೂರು ವಲಯ ಸಮಿತಿಯನ್ನು ನ.10ರಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಸಂಚಾಲಕ ಅರುಣ್ ಕುಮಾರ್ ಪುತ್ತಿಲರವರ ಅಧ್ಯಕ್ಷತೆಯಲ್ಲಿ ಸವಣೂರು ಯುವ ಸಭಾಭವನದಲ್ಲಿ ಜರಗಿದ ಸಭೆಯಲ್ಲಿ ರಚಿಸಲಾಯಿತು.



ಸವಣೂರು ವಲಯ ಸಮಿತಿಯ ಗೌರವಾಧ್ಯಕ್ಷರಾಗಿ ಹಿಂದು ಮುಖಂಡ ಗಿರಿಶಂಕರ್ ಸುಲಾಯ ದೇವಸ್ಯ, ಅಧ್ಯಕ್ಷರಾಗಿ ಪ್ರಕಾಶ್ ರೈ ಸಾರಕರೆ, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ್ ಪೆರಿಯಡ್ಕ, ಉಪಾಧ್ಯಕ್ಷರುಗಳಾಗಿ ಸಚಿನ್ ಸವಣೂರು, ಜಗದೀಶ್ ಇಡ್ಯಾಡಿ, ಸುರೇಶ್ ಬಂಬಿಲದೋಳ, ತಾರಾನಾಥ ಕಾಯರ್ಗ, ಕಾರ್ಯದರ್ಶಿಗಳಾಗಿ ಪುಷ್ಪರಾಜ್ ಅರೇಲ್ತಡಿ, ಚೇತನ್ ಇಡ್ಯಾಡಿ, ಸತೀಶ್ ಬಲ್ಯಾಯ, ದೇವಿ ಪ್ರಸಾದ್, ಸದಸ್ಯರುಗಳಾಗಿ ಮಹೇಶ್ ಕೆ.ಸವಣೂರು, ಶ್ರೀಧರ್ ಇಡ್ಯಾಡಿ, ತೀರ್ಥರಾಮ್ ಕೆಡೆಂಜಿ, ದಿವಾಕರ್ ಬಸ್ತಿ, ಶಿವರಾಮ ಗೌಡ ಮೆದು, ರೋಶನ್ ಮಾಲೆತ್ತಾರು, ಪ್ರದೀಪ್, ದೇವಿಪ್ರಸಾದ್ ಬಿ, ಪರಮೇಶ್ವರ, ಭವಿತ್ ಕುಮಾರ್, ಗಣೇಶ್ ಸರ್ವೆ, ಉಮೇಶ್, ರಮೇಶ್, ಗೋಪಾಲಕೃಷ್ಣ, ಹರಿಪ್ರಸಾದ್ ಅಂಗಡಿಮೂಲೆ, ಸಂತೋಷ್, ಮೋಕ್ಷಿತ್ ಇಡ್ಯಾಡಿ, ಸ್ವಸ್ತಿಕ್ ಪಟ್ಟೆ, ಸುಬ್ರಹ್ಮಣ್ಯ, ರಾಮಕೃಷ್ಣ ಪ್ರಭು, ಕೀರ್ತನ್ ಕೋಡಿಬೈಲು, ದಯಾನಂದ ಮೆದು, ಮನೋಹರ ಮತ್ತು ಪ್ರದೀಪ್ ಕುಮಾರ್ ಎ ರವರುಗಳನ್ನು ಆಯ್ಕೆ ಮಾಡಲಾಗಿದೆ.






ಪೂರ್ಣ ರೀತಿಯ ಸಹಕಾರವನ್ನು ನೀಡಿ- ಅರುಣ್ ಕುಮಾರ್ ಪುತ್ತಿಲ
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಸಂಚಾಲಕ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ ಹಿಂದುತ್ವ ಮತ್ತು ರಾಷ್ಟ್ರೀಯತೇಯ ಮಹತ್ವವನ್ನು ಜಗತ್ತಿಗೆ ಸಾರಿ, ಸ್ವಾಭಿಮಾನಿ ಸನಾತನ ಹಿಂದೂ ಸಮಾಜವನ್ನು ನಿರ್ಮಾಣ ಮಾಡುವ ಸಂಕಲ್ಪದಿಂದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕಳೆದ ಎರಡು ವರ್ಷಗಳಿಂದ ಲೋಕಕಲ್ಯಾಣಕ್ಕಾಗಿ ಪರಮ ಪವಿತ್ರ ಶ್ರೀನಿವಾಸ ಕಲ್ಯಾಣೋತ್ಸವವನ್ನು ವಿಜೃಂಭಣೆಯಿಂದ ನಡೆಸಿ, ಇದೀಗ ಮೂರನೇ ವರ್ಷದ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಹಿಂದವಿ ಸಾಮ್ರಾಜೋತ್ಸವ ಅದ್ದೂರಿಯಾಗಿ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಹಿಂದೂ ಭಾಂದವರು ಭಾಗವಹಿಸಿ, ಪೂರ್ಣ ರೀತಿಯ ಸಹಕಾರವನ್ನು ನೀಡುವಂತೆ ವಿನಂತಿಸಿದರು.
ಹಿಂದು ಸಮಾಜವನ್ನು ಸಂರಕ್ಷಣೆ ಮಾಡಬೇಕು- ಗಿರಿಶಂಕರ್ ಸುಲಾಯ ದೇವಸ್ಯ
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಶ್ರೀನಿವಾಸ ಕಲ್ಯಾಣೋತ್ಸವದ ಸವಣೂರು ವಲಯ ಸಮಿತಿಯ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯರವರು ಮಾತನಾಡಿ ಹಿಂದೂ ಸಮಾಜ ಐಕ್ಯತೆಯಿಂದ ಒಗ್ಗಟ್ಟಾಗುವ ಅವಶ್ಯಕತೆ ಇದೆ, ಈ ನಿಟ್ಟಿನಲ್ಲಿ ನಾವೆಲ್ಲ ಒಂದಾಗಬೇಕು, ಜೊತೆಗೆ ಹಿಂದು ಸಮಾಜವನ್ನು ಸಂರಕ್ಷಣೆ ಮಾಡಬೇಕು, ಪುತ್ತೂರಿನಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ- ಸಾಮೂಹಿಕ ವಿವಾಹ- ಹಿಂದವಿ ಸಾಮ್ರಾಜೋತ್ಸವ ಕಾರ್ಯಕ್ರಮದಲ್ಲಿ ಪ್ರತಿ ಮನೆಯವರು ಭಾಗವಹಿಸಿ ಸಹಕಾರವನ್ನು ನೀಡಬೇಕೆಂದು ವಿನಂತಿಸಿದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಇದರ ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಸಹ ಸಂಚಾಲಕ ರವಿಕುಮಾರ್ ರೈ ಕೆದಂಬಾಡಿ ಮಠ, ಜೊತೆ ಕಾರ್ಯದರ್ಶಿ ರಾಜು ಶೆಟ್ಟಿ, ರೂಪೇಶ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸುರೇಶ್ ರೈಸೂಡಿಮುಳ್ಳು ಭಾಗವಹಿಸಿದರು. ನ್ಯಾಯವಾದಿ ಮಹೇಶ್ ಕೆ.ಸವಣೂರು ಕಾರ್ಯಕ್ರಮ ನಿರೂಪಿಸಿದರು.








