ಪುತ್ತೂರು: ಬುಸ್ತಾನುಲ್ ಬಾದುಷ ಮಜ್ಲಿಸ್ ಹಾಗು ಜಲಾಲಿಯ್ಯಾ ರಾತೀಬ್ ಸಮಿತಿ ಕೆಮ್ಮಾಯಿ ಇದರ ಜಂಟಿ ಆಶ್ರಯದಲ್ಲಿ 2ನೇ ವರ್ಷದ ಜುಲಾಲಿಯ್ಯ ರಾತೀಬ್ ಮಜ್ಲಿಸ್ ಕಾರ್ಯಕ್ರಮವು ಕೆಮ್ಮಾಯಿ ತಂಙಳ್ ನಿವಾಸದಲ್ಲಿ ಜ.7ರಂದು ಸಂಜೆ ಗಂಟೆ 7ಕ್ಕೆ ಮಗ್ರಿಬ್ ನಮಾಜಿನ ಬಳಿಕ ನಡೆಯಲಿದೆ ಎಂದು ಜಲಾಲಿಯ್ಯಾ ರಾತೀಬ್ ಸಮಿತಿ ಸಂಚಾಲಕ ಇಸಾಕ್ ಸಾಲ್ಮರ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಹಾಜಿ ಸಯ್ಯದ್ ಅಬೂಬಕ್ಕರ್ ಅಲ್‌ಹಾದಿ ತಂಙಳ್ ಕೆಮ್ಮಾಯಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅಸ್ಸಯಿದ್ ಅಹ್ಮದ್ ಪೂಕೋಯ ತಂಙಳ್ ಅವರು ದುವಾಃ ನೆರವೇರಿಸಲಿದ್ದಾರೆ. ಕೆಮ್ಮಾಯಿ ಮುದರ್ರಿಸ್ ಮಹಮ್ಮದ್ ಇರ್ಶಾದ್ ಸಖಾಫಿ ಅಲ್ ಹಿಕಮಿ ಅಲ್ ಅರ್ಶದಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಹು ಯು.ಕೆ. ಮುಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಅಲ್‌ಹಾಜಿ ಅಸ್ಸಯಿದ್ ಮುಹಮ್ಮದ್ ಅಲ್‌ಹಾದಿ ತಂಙಳ್ ಸಾಲ್ಮರ, ಅಲ್‌ಹಾಜಿ ಅಸ್ಸಯಿದ್ ಹಾಮಿದ್ ತಂಙಳ್ ಮಂಜೇಶ್ವರ ಅವರು ಗಣ್ಯ ಉಪಸ್ಥಿತಿಯಲ್ಲಿದ್ದು ಅನೇಕ ಮಂದಿ ಗಣ್ಯರು ಆಗಮಿಸಲಿದ್ದಾರೆ. ರಾತ್ರಿ ಗಂಟೆ ೮ಕ್ಕೆ ಇಶಾ ನಮಾಜಿನ ಬಳಿಕ ಜಲಾಲಿಯ್ಯ ರಾತೀಬ್ ಮಜ್ಸಿಸ್ ಬಹು ಸಯ್ಯದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಲ್ ಅವರ ನೇತೃತ್ವದಲ್ಲಿ ನಡೆಯಲಿದೆ. ಕಾರ್ಯಕ್ರಮದ ಬಳಿಕ ಕೊನೆಯಲ್ಲಿ ಅನ್ನದಾನ ನಡೆಯಲಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಲಾಲಿಯ್ಯಾ ರಾತೀಬ್ ಸಮಿತಿ ಪ್ರಧಾನ ಕಾರ್ಯದರ್ಶಿ ಯೂಸೂಫ್ ಸಾಲ್ಮರ, ಖಜಾಂಚಿ ಮೂಸ ಹಾಜಿ ಕೆಮ್ಮಾಯಿ, ಸದಸ್ಯ ಆದಂ ಕೆಮ್ಮಾಯಿ ಉಪಸ್ಥಿತರಿದ್ದರು.