ಪುತ್ತೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಕೆದಂಬಾಡಿ ಗ್ರಾಮ ಸಮಿತಿ ಆಶ್ರಯದಲ್ಲಿ ಗೇರು ಸಂಶೋಧನಾ ನಿರ್ದೇಶನಾಲಯ ಪುತ್ತೂರು ಇವರ ಸಹಭಾಗಿತ್ವದಲ್ಲಿ ಗೇರು ಕೃಷಿಯಲ್ಲಿ ಕೀಟ ನಿಯಂತ್ರಣ ಬಗ್ಗೆ ಮಾಹಿತಿ ಮತ್ತು ಗೇರು ತೋಟಕ್ಕೆ ಡ್ರೋನ್ ಮೂಲಕ ಲಘು ಪೋಷಕಾಂಶಗಳ ಸಿಂಪರಣೆ ಪ್ರಾತ್ಯಕ್ಷಿತೆ ಜ.10 ರಂದು ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ನಡೆಯಲಿದೆ.
ಐಸಿಎಆರ್ ಡಿಸಿಆರ್ ಪುತ್ತೂರು ನಿರ್ದೇಶಕ ಡಾ. ಜೆ. ದಿನಕರ ಅಡಿಗ ಉದ್ಘಾಟಿಸಲಿದ್ದಾರೆ. ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ಯಾಂಕ್ ಆಫ್ ಬರೋಡ ಕುಂಬ್ರ ಶಾಖೆಯ ಹಿರಿಯ ವ್ಯವಸ್ಥಾಪಕ ಜೆ. ರಾಜ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಡಿಸಿಆರ್ ಪ್ರಧಾನ ವಿಜ್ಞಾನಿ ಡಾ. ಟಿ.ಎನ್. ರವಿಪ್ರಸಾದ್, ವಿಜ್ಞಾನಿಗಳಾದ ಡಾ. ಮಂಜುನಾಥ ಕೆ., ಡಾ. ಮಂಜೇಶ್ ಜಿ.ಎನ್., ಡಾ.ಭಾಗ್ಯ ಎಚ್.ಪಿ., ಡಾ. ಅಶ್ವತಿ ಸಿ. ಮಾಹಿತಿದಾರರಾಗಿ ಭಾಗವಹಿಸಲಿದ್ದಾರೆ. ವೈಜ್ಞಾನಿಕ ಗೇರು ಕೃಷಿಕ ಕಡಮಜಲು ಸುಭಾಸ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.
ಗೇರು ಕೃಷಿಯಲ್ಲಿ ಕೀಟ ನಿಯಂತ್ರಣ ಬಗ್ಗೆ ಮಾಹಿತಿ ಮತ್ತು ಗೇರು ತೋಟಕ್ಕೆ ಡ್ರೋನ್ ಮೂಲಕ ಲಘು ಪೋಷಕಾಂಶಗಳ ಸಿಂಪರಣೆ ಪ್ರಾತ್ಯಕ್ಷಿತೆ