ಪುತ್ತೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್‌ನಿಂದ ಕುಟುಂಬ ಸಮ್ಮಿಲನ

0

ಪುತ್ತೂರು: ಪುತ್ತೂರು ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ ವತಿಯಿಂದ ಕುಟುಂಬ ಸದಸ್ಯರಿಗೆ ವಾರ್ಷಿಕ ಕ್ರೀಡಾಕೂಟ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ಜ.7ರಂದು ನಡೆಯಿತು. ಬೆಳಿಗ್ಗೆ ಪ್ರಾರಂಭವಾದ ಕ್ರೀಡಾಕೂಟದಲ್ಲಿ ನಡಿಗೆ ಸ್ಪರ್ಧೆ, ಕ್ರಿಕೆಟ್, ಓಟ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ಸದಸ್ಯರು ಹಾಗೂ ಕುಟುಂಬದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆನಂದಿಸಿದರು. ತೆಂಕಿಲ ವಿವೇಕಾನಂದ ಶಾಲೆಯ ಮೈದಾನದಲ್ಲಿ ಜರುಗಿದ ಕ್ರೀಡಾಕೂಟವನ್ನು ಪುತ್ತೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್‌ನ ಮಾಜಿ ಅಧ್ಯಕ್ಷ ಕೆ ಕೇಶವ ಪೈ ಯವರು ಉದ್ಘಾಟಿಸಿ ಸದಸ್ಯರೊಳಗಿನ ಬಾಂಧವ್ಯ ಕುಟುಂಬ ಸದಸ್ಯರ ಪ್ರತಿಭೆಯ ಅನಾವರಣ ಹಾಗೂ ಕ್ರೀಡಾ ಸ್ಪೂರ್ತಿಗೆ ಇಂತಹ ಕ್ರೀಡಾಕೂಟಗಳು ಪೂರಕವಾಗಲಿ ಎಂದು ಹಾರೈಸಿದರು. ಅಧ್ಯಕ್ಷರಾದ ವಾಮನ್ ಪೈಯವರು ಸ್ವಾಗತಿಸಿ ಮನೋಜ್ ಟಿವಿ ವಂದಿಸಿದರು.
ಸಂಜೆ 6.30ಕ್ಕೆ ಕುಟುಂಬ ಸಮ್ಮಿಲನ ಕಾರ್ಯಕ್ರಮವು ರೋಟರಿ ಮನಿಷ ಸಭಾಂಗಣದಲ್ಲಿ ಜರಗಿತು. ಅನುಪಮಾ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದರು.
ಅಧ್ಯಕ್ಷ ವಾಮನ್ ಪೈ ಅವರು ಸ್ವಾಗತಿಸಿ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ವ್ಯಾಪಾರಸ್ಥರು ವ್ಯಾಪಾರದ ಒತ್ತಡದ ನಡುವೆ ಕುಟುಂಬ ಸಮ್ಮಿಲನ ಒಂದು ಉತ್ತೇಜನವನ್ನು ನೀಡುತ್ತದೆ ಮತ್ತು ಕುಟುಂಬ ಸದಸ್ಯರ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡಿದಂತಾಗುತ್ತದೆ ಎಂದು ಹೇಳಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿಯನ್ನು ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್‌ಆರ್‌ಕೆ ಲ್ಯಾಡರ್ಸ್‌ನ ಮಾಲಕ ಕೇಶವ್ ಅಮೈಯವರು ಸಂಘಟನೆ, ಬದ್ಧತೆ ಹಾಗೂ ಸದುದ್ದೇಶಗಳು ಗುರಿ ಸಾಧನೆಗೆ ಪೂರಕ ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ಎರಡು ನೂತನ ಸದಸ್ಯರುಗಳನ್ನು ಸಂಸ್ಥೆಗೆ ಸೇರ್ಪಡೆಗೊಳಿಸಲಾಯಿತು. ವಿಶೇಷ ಸಾಧನೆಗೈದ ಕೇಶವ ಅಮೈಯವರನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ಟಿ ವಿ ಮನೋಜ್ ಅವರ ಪುತ್ರಿ ವೈಗಾ ಮನೋಜ್ ರವರನ್ನು ತ್ರೋಬಾಲ್ ನ್ಯಾಷನಲ್ ಚ್ಯಾಂಪಿಯನ್‌ಶಿಪ್ ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸನ್ಮಾನಿಸಿ ಹಾರೈಸಲಾಯಿತು
ಬೆಳಿಗ್ಗೆ ನಡೆದ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ವೇಣುಗೋಪಾಲ ಮತ್ತು ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಹಲವು ಸದಸ್ಯರು ಇದರಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಕಾರ್ಯದರ್ಶಿ ಟಿ.ವಿ ಮನೋಜ್, ಉಪಾಧ್ಯಕ್ಷ ರವಿಕೃಷ್ಣ ಮತ್ತು ಶ್ರೀಕಾಂತ ಕೊಳತ್ತಾಯರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಉಪಾಧ್ಯಕ್ಷ ಸೂರ್ಯನಾಥ ಆಲ್ವ ವಂದಿಸಿದರು.

LEAVE A REPLY

Please enter your comment!
Please enter your name here