ದ.ಕ ತೆಂಗು ರೈತ ಉತ್ಪಾದಕರ ಸಂಸ್ಥೆಯ ಸಲಹಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ದ.ಕ ತೆಂಗು ರೈತ ಉತ್ಪಾದಕರ ಸಂಸ್ಥೆಯ ಮುಂದಿನ ಯೋಜನೆಗಳ ಕುರಿತು ಪೂರ್ವಭಾವಿ ಸಭೆ ಜ.5ರಂದು ನಗರದ ರೋಟರಿ ಮನಿಷಾ ಸಭಾಂಗಣದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷರು, ಆಡಳಿತ ಸಮಿತಿ ನಿರ್ದೇಶಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಲಹಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಲಹಾ ಸಮಿತಿ ಅಧ್ಯಕ್ಷರಾಗಿ ನಿತ್ಯಾನಂದ ಮುಂಡೋಡಿ ಅವರನ್ನು ಆಯ್ಕೆ ಮಾಡಲಾಗಿದ್ದು, ಗೌರವ ಅಧ್ಯಕ್ಷರಾಗಿ ಕಡೆಮಜಲು ಸುಭಾಷ್ ಅವರನ್ನು‌ ಆಯ್ಕೆ ಮಾಡಲಾಯಿತು. ಸಂಸ್ಥೆಯ ಕಾನೂನು ಸಲಹೆಗಾರರಾಗಿ ಚಿದಾನಂದ ಬೈಲಾಡಿ, ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಸಲಹೆಗಾರರಾಗಿ ಬದನಾಜೆ ಶಂಕರ್‌ ಭಟ್‌, ಕೃಷಿ ಮಾಧ್ಯಮ ಸಲಹೆಗಾರರಾಗಿ ಕುಮಾರ್‌ ಪೆರ್ನಾಜೆ, ಕೃಷಿ ಅಭಿವೃದ್ಧಿ ಸಲಹೆಗಾರರಾಗಿ ಪ್ರಭಾಕರ್‌ ಮಯ್ಯ, ಸುಸ್ಥಿರ ಕೃಷಿ ಸಲಹೆಗಾರರಾಗಿ ಅಮೈ ಮಾಲಿಂಗ ನಾಯ್ಕ, ಸಾವಯವ ಕೃಷಿ ಸಲಹೆಗಾರರಾಗಿ ಗಣಪಯ್ಯ ಭಟ್‌, ಯೋಜನೆಯ ಅಭಿವೃದ್ಧಿ ಸಲಹೆಗಾರರಾಗಿ ಐತ್ತೂರು ಪೂವಪ್ಪ ಗೌಡ, ಜಲಸಂರಕ್ಷಣಾ ಸಲಹೆಗಾರರಾಗಿ ಡೇವಿಡ್‌ ಜೈಮಿ ಕೊಕ್ಕಡ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಮುಂದಿನ ಹಂತದ “ಕಲ್ಪವಿಕಾಸ” ಮಹತ್ವಾಕಾಂಶಿ ಯೋಜನೆಯ ರೂಪುರೇಷೆಗಳ ಬಗ್ಗೆ, ತೆಂಗಿನ ಮೌಲ್ಯವರ್ದಿತ ಉತ್ಪನ್ನಗಳ ಬಗ್ಗೆ, ಸಾವಯವ ತೆಂಗು ಕೃಷಿಗೆ ಉತ್ತೇಜನ, ವೈಜ್ಞಾನಿಕ ಕೃಷಿ ಬೆಳವಣಿಗೆಗೆ ಪ್ರೋತ್ಸಾಹ, ತೆಂಗು ಸಂಸ್ಥೆಯ ವತಿಯಿಂದ ಪತ್ರಿಕೆ ಬಿಡುಗಡೆ ಮಾಡುವ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸಭೆಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕುಸುಮಾಧರ್‌ ಎಸ್‌ ಕೆ, ಸಲಹಾ ಸಮಿತಿಯ ಸಲಹೆಗಳು ಸಂಸ್ಥೆಯ ಹಾಗೂ ರೈತರ ಬೆಳವಣಿಗೆಗೆ ಮಹತ್ವಪೂರ್ಣ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೇತನ್‌ ಎ, ಮುಖ್ಯ ಸಲಹೆಗಾರ ಯತಿಕಾರ್ಪ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಯತೀಶ್‌ ಕೆೆ ಎಸ್, ಆಡಳಿತ ನಿರ್ದೇಶಕ ಗಿರಿಧರ್‌ ಸ್ಕಂದ, ಲತಾ ಕೆ, ವಸಂತ ಕೆ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here