ಪುತ್ತೂರು: ಬನ್ನೂರು ಶ್ರೀ ದೆಯ್ಯರಮಾಡ, ಇಷ್ಟದೇವತೆ, ರಕ್ತೇಶ್ವರಿ, ಅಣ್ಣಪ್ಪ ಪಂಜುರ್ಲಿ, ಸಾನಿಧ್ಯಗಳ ಬ್ರಹ್ಮ ಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ವಿಜ್ಞಾಪನಾ ಪತ್ರವನ್ನು ಕ್ಷೇತ್ರದ ಗೌರವಾಧ್ಯಕ್ಷ ಸುದೇಶ್ ಪೂಂಜಾ ಅವರ ಮಾರ್ಗದರ್ಶನದಂತೆ ಇತ್ತೀಚೆಗೆ ಕ್ಷೇತ್ರದ ಸಾನಿಧ್ಯದಲ್ಲಿ ಬಿಡುಗಡೆಗೊಳಿಸಲಾಯಿತು.
ಕ್ಷೇತ್ರದ ನಾಲ್ಕು ಸಾನಿಧ್ಯಗಳ ಹಿಂದಿನ ಇತಿಹಾಸ ಮತ್ತು ಮುಂದಿನ ಆರಾಧನೆಯ ಬಗ್ಗೆ ತಿಳಿಸುವ ಮತ್ತು ಸಾನಿಧ್ಯಗಳಿಗೆ ತಗಲಬಹುದಾದ ಖರ್ಚು ವೆಚ್ಚಗಳ ಬಗ್ಗೆ ಸವಿಸ್ತಾರವಾಗಿ ತಿಳಿಸುವ ವಿಜ್ಞಾಪನಾ ಪತ್ರವನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎ ವಿ ನಾರಾಯಣ,
ಕಾರ್ಯದರ್ಶಿ ಮೌನೀಶ್, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ, ಪ್ರಧಾನ ಕಾರ್ಯದರ್ಶಿ ರತ್ನಾಕರ ರೈ ಕೆಳಗಿನಮನೆ, ಖಜಾಂಜಿ ರಮೇಶ್ ಗೌಡ ನೀರ್ಪಾಜೆ,
ನಾರಾಯಣ ಗೌಡ ಬನ್ನೂರು ಸಹಿತ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಅದೃಷ್ಟಚೀಟಿ ಯೋಜನೆಯ ರಶೀದಿಗಳನ್ನೂ ಬಿಡುಗಡೆಗೊಳಿಸಲಾಯಿತು.