





ಪುತ್ತೂರು: ಪ್ರತಿಷ್ಠಿತ ಮೊಬೈಲ್ ಮಳಿಗೆಗಳಲ್ಲಿ ಒಂದಾದ ಇಲ್ಲಿನ ವೆಂಕಟ್ರಮಣ ದೇವಸ್ಥಾನದ ಬಳಿ ಮತ್ತು ದೇವಣ್ಣ ಕಿಣಿ ಕಟ್ಟಡದಲ್ಲಿರುವ ಸೆಲ್ ಝೋನ್ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬಂದು ಇದೀಗ ಬಂಪರ್ ಬಹುಮಾನದ ಡ್ರಾ ವನ್ನು ಜ.15ರಂದು ನೆರವೇರಿಸಲಾಯಿತು. ಮುರದ ಟೈಲರ್ ಅಶೋಕ್ ಅವರು ಬಂಪರ್ ಡ್ರಾದ ಹಿರೋ ಬೈಕ್ ವಿಜೇತರಾದರು.


ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಅವರು ಡ್ರಾ ನೆರವೇರಿಸಿ, ಮಾತನಾಡಿ ವ್ಯಾಪಾರದ ಲಾಭದ ಒಂದಂಶವನ್ನು ಗ್ರಾಹಕರಿಗಾಗಿ ಮೀಸಲಿಡುವ ಅಮೈ ಸಹೋದರರರು ಇನ್ನಷ್ಟು ಗ್ರಾಹಕರ ಪ್ರೀತಿ ವಿಶ್ವಾಸ ಗಳಿಸುವಂತೆ ಶುಭ ಹಾರೈಸಿದರು. ಈ ಸಂದರ್ಭ ಪುತ್ತೂರು ರೋಟರಿ ಸೆಂಟ್ರಲ್ ಅಧ್ಯಕ್ಷ ಡಾ| ರಾಜೇಶ್ ಬೆಜ್ಜಂಗಳ, ಸುದರ್ಶನ್ ಅವರು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬೈಕ್ ವಿಜೇತ ಟೈಲರ್ ಅಶೋಕ್ ಅವರಿಗೆ ಬೈಕ್ ಕೀ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಜಯಪ್ರಕಾಶ್ ಅಮೈ, ಜದೀಶ್ ಅಮೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.





ಪ್ರತಿಯೊಬ್ಬ ಗ್ರಾಹಕರಿಗೂ ಖಚಿತ ಉಡುಗೊರೆ
ದೀಪಾವಳಿ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಆಫರ್ಗಳಲ್ಲಿ ಪ್ರತಿಯೊಬ್ಬ ಗ್ರಾಹಕರಿಗೂ ಖಚಿತ ಉಡುಗೊರೆ ನೀಡಿದ್ದೇವೆ. ಪ್ರಥಮ ಬಂಬಪರ್ ಬಹುಮಾನವಾಗಿ ಹಿರೋ ಬೈಕ್, ಕ್ವಾಚ್ಕಾರ್ಡ್ ಮೂಲಕ 4 ಟಿವಿ, ಇಯರ್ ಪೋನ್ ಸಹಿತ 300ಕ್ಕೂ ಅಧಿಕ ಕೊಡುಗೆಗಳನ್ನು ನೀಡಿದ್ದೇವೆ ಎಂದು ಸೆಲ್ ಝೋನ್ ಸಂಸ್ಥೆಯ ಪ್ರವೀಣ್ ಅಮೈ ಅವರು ತಿಳಿಸಿದ್ದಾರೆ.







