ಕುಂಬ್ರ ಅತಿಥಿ ಗ್ರೇಟ್ ಫೆಸ್ಟಿವಲ್ ಲಕ್ಕಿ ಕೂಪನ್ ಡ್ರಾ ಕಾರ್ಯಕ್ರಮ-ನಗುಮೊಗದ, ತೃಪ್ತಿದಾಯಕ ಸೇವೆಯಿಂದ ಅತಿಥಿ ಫೇಮಸ್ ಆಗಿದೆ: ಜಯಂತ ನಡುಬೈಲ್

0

ಪುತ್ತೂರು: ಪೇಟೆಯ ದೊಡ್ಡ ದೊಡ್ಡ ಶೋರೂಮ್‌ಗಳಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲದಿರುವ ಕುಂಬ್ರ ಅಕ್ಷಯ ಆರ್ಕೇಡ್‌ನಲ್ಲಿರುವ ಅತಿಥಿ ಇಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್ಸ್ ಶೋರೂಮ್ ತನ್ನ ಸಿಬ್ಬಂದಿಗಳ ನಗುಮೊಗದ, ತೃಪ್ತಿದಾಯಕ ಸೇವೆಯಿಂದಲೇ ಜನಮೆಚ್ಚುಗೆ ಪಡೆದುಕೊಂಡಿದೆ ಎಂದು ಅಕ್ಷಯ ಗ್ರೂಪ್‌ನ ಮಾಲಕ,ಉದ್ಯಮಿ ಜಯಂತ ನಡುಬೈಲ್ ಹೇಳಿದರು.

ಅವರು ಅತಿಥಿ ಇಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ‍್ಸ್ ಶೋರೂಮ್ ದಸರಾದಿಂದ ದೀಪಾವಳಿ ಹಾಗೂ ಹೊಸ ವರ್ಷದ ಪ್ರಯುಕ್ತ ಹಮ್ಮಿಕೊಂಡಿದ್ದ ಅತಿಥಿ ಗ್ರೇಟ್ ಫೆಸ್ಟಿವಲ್ ಲಕ್ಕಿ ಕೂಪನ್ ಡ್ರಾ ಕಾರ್ಯಕ್ರಮವನ್ನು ಜ.15 ರಂದು ಅತಿಥಿ ಶೋರೂಮ್‌ನಲ್ಲಿ ಮೊದಲ ಬಹುಮಾನದ ಕೂಪನ್ ಅನ್ನು ಡ್ರಾ ನಡೆಸಿಕೊಟ್ಟು ಮಾತನಾಡಿದರು. ಲಕ್ಕಿ ಕೂಪನ್ ಡ್ರಾವನ್ನು ಪಾರದರ್ಶಕವಾಗಿ ಎಲ್ಲರ ಎದುರಲ್ಲೇ ಯಾವುದೇ ಮೋಸವಿಲ್ಲದೆ ನಡೆಸಿಕೊಡುವ ಮೂಲಕ ಅತಿಥಿ ಎಲ್ಲರ ಪ್ರೀತಿಯನ್ನು ಗಳಿಸಿದೆ ಎಂದ ಅವರು ಮುಂದಿನ ದಿನಗಳಲ್ಲಿ ಅತಿಥಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹೇಳಿ ಶುಭ ಹಾರೈಸಿದರು.

ದ್ವಿತೀಯ ಬಹುಮಾನದ ಡ್ರಾ ನಡೆಸಿಕೊಟ್ಟ ಅಮೇರಿಕಾದಲ್ಲಿ ಇಂಜಿನಿಯರಿಂಗ್ ಸೀನಿಯರ್ ಮ್ಯಾನೇಜರ್ ಆಗಿರುವ ದಾಮೋದರ್ ಸುಳ್ಯಪದವುರವರು ಮಾತನಾಡಿ, ನಾನು ಅಮೇರಿಕಾದಿಂದ ಬಂದು ಸವಣೂರಿನಲ್ಲಿ ಒಂದು ಮನೆ ಕಟ್ಟುತ್ತಿದ್ದೇನೆ ಅಲ್ಲಿಗೆ ಅತಿಥಿಯಿಂದಲೇ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ್ದೇನೆ ನಾನು ಕಂಡುಕೊಂಡಂತೆ ಅತಿಥಿಯ ಸರ್ವೀಸ್ ಬಹಳಷ್ಟು ಚೆನ್ನಾಗಿದೆ ಎಂದರು.

ತೃತೀಯ ಬಹುಮಾನದ ಡ್ರಾ ನಡೆಸಿಕೊಟ್ಟ ಸಮೃದ್ಧಿ ಕನ್‌ಸ್ಟ್ರಕ್ಷನ್‌ನ ಮಾಲಕ ಲೋಕೇಶ್ ರೈ ಅಮೈಯವರು ಮಾತನಾಡಿ, ಪೇಟೆಯ ಹೆಸರಾಂತ ಶೋರೂಮ್‌ಗಳಲ್ಲಿ ಇರುವಂತಹ ವಸ್ತುಗಳೇ ಅತಿಥಿಯಲ್ಲೂ ಇರುವುದು, ಅಲ್ಲಿನ ದೊಡ್ಡ ಶೋರೂಮ್‌ಗಳ ಸರ್ವೀಸ್‌ಗಿಂತ ಅತಿಥಿಯ ಸರ್ವೀಸ್ ಬಹಳಷ್ಟು ಚೆನ್ನಾಗಿದೆ ಎಂದರು. ಚತುರ್ಥ ಬಹುಮಾನ ಡ್ರಾ ನಡೆಸಿಕೊಟ್ಟ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಅತಿಥಿ ಎಲ್ಲಾ ವಿಧದಲ್ಲೂ ಒಂದು ಒಳ್ಳೆಯ ಶೋರೂಮ್ ಆಗಿದೆ ಎಂದರು.

ಐದನೇ ಬಹುಮಾನದ ಡ್ರಾ ನಡೆಸಿಕೊಟ್ಟ ಒಳಮೊಗ್ರು ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕರವರು, ಪೇಟೆಯ ಶೋರೂಮ್‌ಗಳಿಗಿಂತ ಯಾವುದೇ ರೀತಿಯಲ್ಲೂ ಅತಿಥಿ ಕಮ್ಮಿ ಇಲ್ಲ, ಅಲ್ಲಿಂದ ಇಲ್ಲಿ ಬೆಲೆಯೂ ಕೊಂಚ ಕಡಿಮೆಯೇ ಇದೆ ಎಂದರು. ಸಮಾಧಾನಕರ ಬಹುಮಾನ ಡ್ರಾ ನಡೆಸಿಕೊಟ್ಟ ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳರವರು ಮಾತನಾಡಿ, ಬೆಳೆಯುತ್ತಿರುವ ಪೇಟೆಗೆ ಅತಿಥಿ ಒಂದು ಮುಕುಟವಿದ್ದಂತೆ, ಇಲ್ಲಿ ಗೃಹೋಪಯೋಗಿ ವಸ್ತುಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ ಎಂದರು.

ಹೆಯರ್ ಕಂಪೆನಿಯ ಆರ್.ಎಸ್ ನಾಗೇಂದ್ರ ಕೆ, ಶಿಕ್ಷಕ ವಿಠಲ ಸುವರ್ಣ ಸುಳ್ಯಪದವು ಸೇರಿದಂತೆ ಹಲವು ಮಂದಿ ಗ್ರಾಹಕರು ಉಪಸ್ಥಿತರಿದ್ದರು. ಅತಿಥಿ ಇಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ‍್ಸ್ ಶೋರೂಮ್ ಮಾಲಕ ಸಂಪತ್ ಕುಮಾರ್‌ರವರು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು. ಸಿಬ್ಬಂದಿಗಳಾದ ಪವಿತ್ರ, ರಶ್ಮೀ, ಸಹನಾ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಪತ್ರಕರ್ತ ಸಿಶೇ ಕಜೆಮಾರ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಅಜಿತ್, ತೀರ್ಥೆಶ್, ಮಿಥುನ್, ಗೌತಮ್, ನವಮಿ ಸಹಕರಿಸಿದ್ದರು. ದಸರಾ ಮತ್ತು ದೀಪಾವಳಿ ಹಬ್ಬ ಹಾಗೂ ಹೊಸ ವರ್ಷದ ಸಲುವಾಗಿ ಅತಿಥಿ ಪ್ರತಿವರ್ಷದಂತೆ ಈ ವರ್ಷವೂ ಲಕ್ಕಿ ಕೂಪನ್ ಹಮ್ಮಿಕೊಂಡಿತ್ತು. ರೂ.2 ಸಾವಿರದಿಂದ ಮೇಲ್ಪಟ್ಟ ಖರೀದಿಗೆ ಲಕ್ಕಿ ಕೂಪನ್ ನೀಡಲಾಗಿತ್ತು. ಈ ಲಕ್ಕಿ ಕೂಪನ್‌ನ ಡ್ರಾ ಕಾರ್ಯಕ್ರಮ ಇದಾಗಿತ್ತು.

LEAVE A REPLY

Please enter your comment!
Please enter your name here