ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳವು ಜ. 27 ಮತ್ತು 28 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರು ಗದ್ದೆಯಲ್ಲಿ ನಡೆಯಲಿದೆ. ಇದರ ಅಂಗವಾಗಿ ಕಂಬಳದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭವು ಜ.14ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ರವರು ಕೋಟಿ ಚೆನ್ನಯ ಜೋಡು ಕರೆ ಕಂಬಳದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ, ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಟಿ ಶೆಟ್ಟಿ ,ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ, ಖಜಾಂಜಿ ಪಂಜಿಗುಡ್ಡೆ ಈಶ್ವರ ಭಟ್, ಸಂಚಾಲಕ ವಸಂತಕುಮಾರ್ ರೈ ಜೆ ಕೆ, ಉಪಾಧ್ಯಕ್ಷರಾದ ನಿರಂಜನ ರೈ ಮಠಂತಬೆಟ್ಟು, ಶಿವರಾಮ ಆಳ್ವ , ಕುರಿಯ , ಜಿನ್ನಪ್ಪ ಪೂಜಾರಿ ಮುರ, ಜೋಕಿಂ ಡಿ ಸೋಜಾ, ಪ್ರೇಮ ನಂದಾ ನಾಕ್, ರಂಜಿತ್ ಬಂಗೇರ, ಕೃಷ್ಣಪ್ರಸಾದ್ ಆಳ್ವ, ವಿಶಾಲಾಕ್ಷಿ ಬನ್ನೂರು, ಗಂಗಾಧರ ರೈ ಕೈಕಾರ , ರೋಶನ್ ರೈ ಬನ್ನೂರು, ಪ್ರವೀಣ್ ಕುಮಾರ್ ಆಳಕೆ ಮಜಲು, ಶಿವಪ್ರಸಾದ್ ಮಠಂತಬೆಟ್ಟು, ಚಂದ್ರಹಾಸ ಶೆಟ್ಟಿ ಬನ್ನೂರು, ಸುದೇಶ್ ಕುಮಾರ್ ಚಿಕ್ಕಪುತ್ತೂರು, ಸುಶಾಂತ್ ರೈ ಕಂಬಳಬೆಟ್ಟು , ಸುಮಿತ್ ಶೆಟ್ಟಿ ಅಳಕೆಮಜಲು, ಪ್ರವೀಣ್ ಶೆಟ್ಟಿ ಅಳಕೆ ಮಜಲು, ನವೀನ್ ನಾಕ್ ಬೆದ್ರಾಳ, ಚಂದ್ರಶೇಖರ ಶೆಟ್ಟಿ ಬನ್ನೂರು, ಹಸೈನಾರ್ ಬನಾರಿ, ಅಬ್ದುಲ್ ಖಾದರ್ ಪೊಳ್ಯ,ಜತಿನ್ ನಾಯಕ್ ಬೆದ್ರಾಳ , ಮುರಳೀಧರ ಮಠಂತಬೆಟ್ಟು ,ಉಮೇಶ್ ಕರ್ಕೇರ, ಶಶಿಕುಮಾರ್ ನೆಲ್ಲಿ ಕಟ್ಟೆ, ವಿನಯಕುಮಾರ್ ಸವಣೂರು, ಉಮಾಶಂಕರ್ ನಾಯ್ಕ್ ಪಾಂಗಳಾಯಿ ,ಕೃಷ್ಣ ನಾಯ್ಕ, ಅಭಿಜಿತ್ ಬೆಳ್ಳಿ ಪಾಡಿ ,ಲೋಕೇಶ್ ಪಡ್ದಯೂರು , ಮಂಜುನಾಥ ಗೌಡ ತೆಂಕಿಲ ,ಕಿರಣ್ ಡಿಸೋಜಾ ,ಶಿವಕುಮಾರ್, ಸುಜಿತ್ ಶೆಟ್ಟಿ ಸವಣೂರು, ಶ್ರೀಕಾಂತ್ ಗೌಡ ತೆಂಕಪಾಡಿ, ಪ್ರಶಾಂತ್ ರೈ ಕೈಕಾರ, ಹರ್ಷಿತ್ ರಾಮ್ ಬೊಳ್ವಾರ್, ಪ್ರಹ್ಲಾದ್ ಬೆಳ್ಳಿಪಾಡಿ ,ಜಯಂತ ಕಲ್ಲೆಗ, ಸನತ್ ರೈ ಒಳಮೊಗ್ರು, ಜಯಪ್ರಕಾಶ್ ಬದಿನಾರ್, ರಾಧಾಕೃಷ್ಣ ಕಲ್ಲೆಗ, ಉಮೇಶ್ ರೈ ನಾಡಜೆ, ಸುರೇಂದ್ರರೈ ಕಂಪ, ಎಂ .ಬಿ. ವಿಶ್ವನಾಥ ರೈ, ಸಚಿನ್ ಸರೊಳಿ, ಶೀನಪ್ಪ ಪೂಜಾರಿ ಪಡ್ನೂರು, ಬಾಲಕೃಷ್ಣ, ಶಿವಪ್ರಸಾದ್ ಮಠಂತಬೆಟ್ಟು, ಯೋಗಿಶ್ ಸಾಮಾನಿ,ಶರತ್ ಕೇಪುಳು, ಸುಂದರ ಸಪಲ್ಯ ಮುರ, ವಿಜಯಕುಮಾರ್ ಕೋಡಿಂಬಾಡಿ, ಚಂದ್ರಶೇಖರ ರೈ ,ಸುಮಿತಿ ಶೆಟ್ಟಿ ಪ್ರವೀಣ್ ಶೆಟ್ಟಿ ,ಪ್ರತೀಕ್ ಚಿಕ್ಕ ಪುತ್ತೂರು ,ಪ್ರಮುಖ್ ಚಿಕ್ಕ ಪುತ್ತೂರು ,ರಕ್ಷಿತ್ ಚಿಕ್ಕ ಪುತ್ತೂರು, ಚಿಂತನ್ ಚೊಕ್ಕಾಡಿ ,ಭರತ್ ಉರ್ಲಾಂಡಿ ,ರಾಜೇಶ್ ರಾಗಿದ ಕುಮೆರಿ ,ಕಿಶೋರ್, ಕಾರ್ತಿಕ್, ಜಯಕುಮಾರ್ ನಾಯರ್, ಪ್ರಣಾಮ್ ಕೈಕಾರ, ಲಿಖಿತ್ ರೈ ಮೊದಲಾದವರು ಉಪಸ್ಥಿತರಿದ್ದರು
ಕುದಿ ಕಂಬಳಕ್ಕೆ ಅವಕಾಶ
ಪುತ್ತೂರು :ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ ಜ. 27, 28ರಂದು ನಡೆಯಲಿರುವ 31ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಅಂಗವಾಗಿ ಜ.15 ರಿಂದ ಕುದಿ ಕಂಬಳ ಓಡಿಸುವವರಿಗೆ ಅವಕಾಶ ಇದೆ ಎಂದು ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ತಿಳಿಸಿದ್ದಾರೆ.