ಕಂಬಳದೊಂದಿಗೆ ಸಸ್ಯ ಹಾಗೂ ಆಹಾರ ಮೇಳ ಆಯೋಜನೆ -ಶಾಸಕ ಅಶೋಕ್ ರೈ
ಉಪ್ಪಿನಂಗಡಿ: ಇಲ್ಲಿನ ವಿಜಯ- ವಿಕ್ರಮ ಜೋಡುಕರೆ ಕಂಬಳವನ್ನು ಈ ಬಾರಿ ಕಂಬಳೋತ್ಸವನ್ನಾಗಿ ಆಚರಿಸುವುದಲ್ಲದೆ, ಸಸ್ಯ ಹಾಗೂ ಆಹಾರ ಮೇಳವನ್ನು ಕಂಬಳದ ದಿನ ಆಯೋಜಿಸುವುದರೊಂದಿಗೆ ಇಲ್ಲಿನ ಕೃಷಿ ಹಾಗೂ ಆಹಾರ ಪದ್ಧತಿಯನ್ನು ಕಂಬಳದೊಂದಿಗೆ ಬೆಸೆಯುವ ಕಾರ್ಯ ಮಾಡಲಾಗುವುದು ಎಂದು ಶಾಸಕ, ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಹೇಳಿದರು.
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಲ್ಲಿ ಜ.20ರಂದು ನಡೆದ ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾನು ಶಾಸಕನಾಗುವ ಮೊದಲು ಉಪ್ಪಿನಂಗಡಿಯ ಕಂಬಳವನ್ನು ಆಯೋಜಿಸಿದ್ದೇನೆ. ಆಗಲೇ ಕಂಬಳವನ್ನು ಜಗದಗಲಕ್ಕೆ ಪರಿಚಯಿಸುವ ಕನಸು ನನ್ನಲ್ಲಿತ್ತು. ಶಾಸಕನಾದ ಬಳಿಕ ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡುವ ಮೂಲಕ ಕಂಬಳವನ್ನು ಎಲ್ಲೆಡೆ ಪರಿಚಯಿಸುವ ಕೆಲಸ ಮಾಡಿದ್ದೇನೆ. ಇದಕ್ಕೆ ಮೂಲ ಪ್ರೇರಣೆಯಾಗಿದ್ದು ಉಪ್ಪಿನಂಗಡಿಯ ಕಂಬಳ. ಕಂಬಳಕ್ಕೆ ಪೇಟಾದವರಿಂದ ತೊಂದರೆಯಾದಾಗ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡಿ ಕಂಬಳದ ಉಳಿವಿಗೆ ಉಪ್ಪಿನಂಗಡಿ ಕಂಬಳ ಸಮಿತಿಯು ತನ್ನದೇ ಕೊಡುಗೆ ನೀಡಿದೆ. ನಾನು ಶಾಸಕನಾದ ಮೇಲೆ ಉಪ್ಪಿನಂಗಡಿಯ ಕಂಬಳವನ್ನು ಮೊದಲ ಬಾರಿಗೆ ಆಯೋಜನೆ ಮಾಡುತ್ತಿದ್ದು, ಅದನ್ನು ಜನಮಾನಸದಲ್ಲಿ ಮರೆಯಲಾಗದ ಕಂಬಳವನ್ನಾಗಿ ರೂಪುಗೊಳಿಸಲಾಗುವುದು ಎಂದರು.
ಈ ಬಾರಿ ಕಂಬಳದೊಂದಿಗೆ ವಿಶೇಷವಾಗಿ ಸಸ್ಯ ಹಾಗೂ ಆಹಾರ ಮೇಳವನ್ನು ಆಯೋಜನೆ ಮಾಡಲಾಗುವುದು. ಕೃಷಿ ಹಾಗೂ ತೋಟಗಾರಿಕಾ ಇಲಾಖೆಯನ್ನು ಇದರೊಂದಿಗೆ ಜೋಡಣೆ ಮಾಡಿ ಇಲ್ಲಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಮಾಹಿತಿ ಕಾರ್ಯಕ್ರಮವನ್ನು ನಡೆಸಲಾಗುವುದು. ಇದರೊಂದಿಗೆ ದೀಪಾಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವುದಲ್ಲದೆ, ರಸ್ತೆ ಬದಿಗಳನ್ನು ಗೂಡು ದೀಪಗಳ ತೋರಣದೊಂದಿಗೆ ಅಲಂಕರಿಸಲಾಗುವುದು ಎಂದರು.
ವೇದಿಕೆಯಲ್ಲಿ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ಎನ್., ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಉಪಸ್ಥಿತರಿದ್ದರು. ಸಭೆಯಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ಯೊಗೀಶ್ ಸಾಮಾನಿ ಸಂಪಿಗೆದಡಿ, ಕೃಷ್ಣಪ್ರಸಾದ್ ಬೊಳ್ಳಾವು, ವಿಜಯ ಪೂಜಾರಿ ಚೀಮುಳ್ಳು, ದಿಲೀಪ್ ಶೆಟ್ಟಿ ಕರಾಯ, ಸಹ ಸಂಚಾಲಕ ಜಯಪ್ರಕಾಶ್ ಬದಿನಾರು, ಉಪಾಧ್ಯಕ್ಷರಾದ ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ವಿದ್ಯಾಧರ ಜೈನ್ ಪದ್ಮವಿದ್ಯಾ, ವಿಠಲ ಶೆಟ್ಟಿ ಕೊಲ್ಲೊಟ್ಟು, ಶಿವಪ್ರಸಾದ್ ರೈ ಮಠಂತಬೆಟ್ಟು, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಅಮ್ಟೂರು ಬಾರಿಕೆ, ಕಾಂಗ್ರೆಸ್ ಪ್ರಮುಖರಾದ ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ಕೃಷ್ಣರಾವ್ ಆರ್ತಿಲ, ಸೋಮನಾಥ, ಸಮಿತಿಯ ಪ್ರಮುಖರಾದ ಸುದೇಶ್ ಶೆಟ್ಟಿ ಶಾಂತಿನಗರ, ನಿಹಾಲ್ ಶೆಟ್ಟಿ ಕಲ್ಲಾರೆ, ಮಹಾಲಿಂಗ ಕಜೆಕ್ಕಾರು, ಪ್ರೀತಮ್ ಶೆಟ್ಟಿ ಕೋಡಿಂಬಾಡಿ, ಜಗದೀಶ್ ಪರಕ್ಕಜೆ, ರಾಕೇಶ್ ಶೆಟ್ಟಿ ಕೆಮ್ಮಾರ, ಸತೀಶ್ ಶೆಟ್ಟಿ ಹೆನ್ನಾಳ, ಸದಾನಂದ ಶೆಟ್ಟಿ, ಪ್ರಜ್ವಲ್ ರೈ ಪಾತಾಜೆ, ರಾಜೇಶ್ ಶೆಟ್ಟಿ ಮಠಂತಬೆಟ್ಟು, ರಂಜನ್ ಶೆಟ್ಟಿ, ಕುಮಾರನಾಥ ಕೋಡಿಂಬಾಡಿ, ಶಿವರಾಮ ಶೆಟ್ಟಿ ಗೋಳ್ತಮಜಲು, ಮತ್ತಿತರರು ಉಪಸ್ಥಿತರಿದ್ದು, ಸಲಹೆ- ಸೂಚನೆ ನೀಡಿದರು.
ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿ, ವಂದಿಸಿದರು.
ಈ ಬಾರಿ 38ನೇ ವರ್ಷದ ವಿಜಯ- ವಿಕ್ರಮ ಜೋಡುಕರೆ ಕಂಬಳವು ಮಾರ್ಚ್ 30 ಮತ್ತು 31ರಂದು ನಡೆಯಲಿದ್ದು, ಫೆ.೪ರಂದು ಕೂಟೇಲು ಬಳಿಯ ಹಳೆಗೇಟುವಿನ ನೇತ್ರಾವತಿ ನದಿ ಕಿನಾರೆಯಲ್ಲಿರುವ ವಿಜಯ- ವಿಕ್ರಮ ಜೋಡುಕರೆಯಲ್ಲಿ ಕರೆ ಮುಹೂರ್ತ ನಡೆಸಲು ನಿರ್ಣಯಿಸಲಾಯಿತು.