ಬಡಗನ್ನೂರುಃ ನಮ್ಮ ಸಂಕಲ್ಪ ವಿಕಸಿತ ಭಾರತ ಅಭಿಯಾನವು ಜ.23 ರಂದು ಅಪರಾಹ್ನ ಗಂ 2ಕ್ಕೆ ಬಡಗನ್ನೂರು ಗ್ರಾ.. ಪಂ ಸಭಾಂಗಣದಲ್ಲಿ ನಡೆಯಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಈಶ್ವರಮಂಗಲ ಮತ್ತು ಪ್ರಸಾದ್ ನೇತ್ರಾಲಯ ಇದರ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣೆ ,ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ಜನ ಸಂಘಟನೆ, ಪ್ರತಿಜ್ಞೆ ಸ್ವೀಕಾರ ಸಮಾರಂಭ ಆರೋಗ್ಯ ತಪಾಸಣಾ ಶಿಬಿರಗಳು ನಡೆಯಲಿದೆ.ಸ್ತ್ರೀ ರೋಗ ತಜ್ಞರು ಮಕ್ಕಳ ತಜ್ಞರು ,ಚರ್ಮರೋಗ ತಜ್ಞರು ಭಾಗವಹಿಸಲಿದ್ದಾರೆ.
ಬ್ಯಾಂಕ್ ಆಫ್ ಬರೋಡಾ ಈಶ್ವರಮಂಗಲ ಇದರ ಸಹಯೋಗದಲ್ಲಿ ಸ್ಥಳದಲ್ಲಿಯೇ ಸಾಲ ನೀಡುವಿಕೆ ಸೌಲಭ್ಯ :-
ಪ್ರದಾನಮಂತ್ರಿ ವಿಮೆ ಯೋಜನೆ ನೋಂದಾಯಿಸುವುದು ಹಾಗೂ ಮುದ್ರಾ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ.ಮತ್ತು ವಿವಿಧ ಯೋಜನೆಗಳ ಬಗೆಗಿನ ಮಾಹಿತಿಗಳನ್ನೊಳಗೊಂಡ ಸಾಹಿತ್ಯದ ವಿತರಣೆ
ಬ್ಯಾಂಕ್ ಆಫ್ ಬರೋಡಾ ಈಶ್ವರಮಂಗಲ ಇದರ ಸಹಯೋಗದಲ್ಲಿ ವಿಮೆ ಮಾಡಿಸುವವರಿಗೆ ಅಗತ್ಯ ದಾಖಲೆ :-
ಖಾತೆದಾರರ ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಜೆರಾಕ್ಸ್ ನಾಮಿನಿ ಆಧಾರ್ ಜೆರಾಕ್ಸ್,ಖಾತೆದಾರರ ಆಧಾರ್ ಜೆರಾಕ್ಸ್,
ಮುದ್ರಾ ಸಾಲ ಪಡೆಯಲು ಅಗತ್ಯ ದಾಖಲೆ :-ಪಂಚಾಯತ್ ಪರವಾನಿಗೆ, ಸ್ವ ಉದ್ಯೋಗದ ಪ್ರಾಜೆಕ್ಟ್ ದಾಖಲೆ,ಬಾಡಿಗೆ ಕಟ್ಟಡದ ಪರವಾನಿಗೆ,ಖಾತೆದಾರರ ಬ್ಯಾಂಕ್ ಪಾಸ್ಬುಕ್ ಹಾಗೂ ಜೆರಾಕ್ಸ್, ಖಾತೆದಾರರ ಆಧಾರ್ ಜೆರಾಕ್ಸ್ ,ಖಾತೆದಾರರ ಪಾನ್, ಉದ್ಯಮ ನೋಂದಾವಣೆ ಸರ್ಟಿಫಿಕೇಟ್,ಪ್ರಾಜೆಕ್ಟ್ ಬ್ಯಾಲೆನ್ಸ್ ಶೀಟ್.