ಪುತ್ತೂರು: ಲಿವರ್ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುತ್ತೂರು ನೆಹರೂನಗರದ ದಿ.ಆನಂದ ನಾಯ್ಕ ಎಂಬವರ ಪುತ್ರಿ 29ರ ಹರೆಯದ ಐಶ್ಚರ್ಯ ಇಂದು ಬೆಳಿಗ್ಗೆ ಬಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಇಂಜಿನಿಯರ್ ಪದವೀಧರೆಯಾಗಿದ್ದರು.
ಐಶ್ವರ್ಯ ಬೆಂಗಳೂರಿನ ಅಫೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಲಿವರ್ ಟ್ರಾನ್ಸ್ಪ್ಲಾಂಟ್ನಿಂದ ಮಾತ್ರ ಐಶ್ವರ್ಯಳ ಜೀವ ಉಳಿಸಲು ಸಾಧ್ಯ ಎಂದು ವೈದ್ಯರು ತಿಳಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಇವರು ತಾಯಿ ವಿಮಲ, ತಂಗಿ ಅನುಷಾ ಮತ್ತು ಬಂದು ಬಳಗವನ್ನು ಅಗಲಿದ್ದಾರೆ.