





ಪುತ್ತೂರು: ಪುತ್ತೂರಿನ ಒಡೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನ್ನಪೂರ್ಣೇಶ್ವರಿ ಅನ್ನಛತ್ರ ಕಟ್ಟಡಕ್ಕೆ ಕುರಿಯ ಮಾಡಾವು ನಂಜೆ ಏಳ್ನಾಡುಗುತ್ತು ಕುಟುಂಬಸ್ಥರು ರೂ.1,77,500 ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ಹಾಗೂ ಪ್ರಧಾನ ಅರ್ಚಕರಾದ ವಸಂತ್ ಕೆದಿಲಾಯ ರವರ ಸಮ್ಮುಖದಲ್ಲಿ ಪ್ರಾರ್ಥನೆ ಮಾಡಿ ದೇಣಿಗೆಯನ್ನು ಹರಿವಾಣದಲ್ಲಿಟ್ಟು ಹಸ್ತಾಂತರ ಮಾಡಲಾಯಿತು.


ಇದೇ ಸಂದರ್ಭದಲ್ಲಿ ಚೆನ್ನಪ್ಪ ರೈ ಬಳಜ್ಜ ಕುರಿಯ ಮಾಡಾವು ಏಳ್ನಾಡುಗುತ್ತುರವರಿಗೆ ಶಾಲು ಹೊದಿಸಿ ಏಳ್ನಾಡುಗುತ್ತು ಕುಟುಂಬಕ್ಕೆ ಆಶೀರ್ವಾದ ಮಾಡಿ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಎಸ್ ಬಿ ಜಯರಾಮ ರೈ ಬಳಜ್ಜ ಕುರಿಯ ಮಾಡಾವು ಏಳ್ನಾಡುಗುತ್ತು, ಎಸ್ ಮಾಧವ ರೈ ಕುಂಬ್ರ, ಯತೀಶ್ ಆಳ್ವ ಕುರಿಯ ಮಾಡಾವು ಏಳ್ನಾಡುಗುತ್ತು ಹಾಗೂ ಸತೀಶ್ ರೈ ಕುರಿಯ ಏಳ್ನಾಡುಗುತ್ತು ಮತ್ತಿತರರು ಉಪಸ್ಥಿತರಿದ್ದರು.













