ಬಡಗನ್ನೂರು ಗ್ರಾ.ಪಂ. ಸಾಮಾನ್ಯ ಸಭೆ

0

ಬಡಗನ್ನೂರುಃ ಕುಡಿಯುವ ನೀರಿನ ಸ್ಥಾವರ ವಿದ್ಯುತ್ ಬಿಲ್ ದುಪ್ಪಟ್ಟು ಹೆಚ್ಚಾಗುತ್ತಿದ್ದು ಈ ಬಗ್ಗೆ  ನೀರಿನ ಸಮಿತಿ ಸಭೆ ಕರೆದು ಪರಿಹಾರ ಕೈಗೊಳ್ಳುವ ಬಗ್ಗೆ  ಬಡಗನ್ನೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಅಧ್ಯಕ್ಷತೆಯಲ್ಲಿ ಜ.30 ರಂದು  ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.

ಕುಡಿಯುವ ನೀರಿನ  ಸ್ಥಾವರದಲ್ಲಿ ವಿದ್ಯುತ್ ಬಿಲ್ ದುಪ್ಪಟ್ಟು ಹೆಚ್ಚಳ ಕಂಡು ಬಂದ ನಿಟ್ಟಿನಲ್ಲಿ ಸದಸ್ಯ ರವಿರಾಜ ರೈ ಸಜಂಕಾಡಿ  ವಿಷಯ ಪ್ರಸ್ತಾಪ ಮಾಡಿ ಮಾತನಾಡಿ  ಸಜಂಕಾಡಿ ಸ್ಥಾವರದ ಪ್ರತೀ ತಿಂಗಳು ವಿದ್ಯುತ್ ಬಿಲ್ ಹೆಚ್ಚಾಗುತ್ತಿದೆ. ಇಲ್ಲಿ 22 ಕುಟುಂಬ ಕಡಿಯುವ ನೀರಿನ ಸಂಪರ್ಕ ಹೊಂದಿದ್ದಾರೆ. ಆದರೆ ಇನ್ನೂ ಕೆಲವು ಭಾಗಗಳಲ್ಲಿ ಫಲಾನುಭವಿಗಳ ಸಂಖ್ಯೆ ಹೆಚ್ಚಿದೆ ಅದರೆ ಅಲ್ಲಿ ವಿದ್ಯುತ್ ಬಿಲ್ ಕಡಿಮೆ ಕಂಡುಬರುತ್ತದೆ ಅದುದರಿಂದ ಕುಡಿಯುವ ನೀರಿನ ಸಮಿತಿ ಸಭೆ ಕರೆಯುವಂತೆ ಒತ್ತಾಯಿಸಿದರು. ಈ ಬಗ್ಗೆ ಸದಸ್ಯ ಸಂತೋಷ ಆಳ್ವ ಧ್ವನಿ ಗೂಡಿಸಿ ಮಾತನಾಡಿ  ಕಳೆದ ಎರಡು ತಿಂಗಳಿನಿಂದ ನೀರಿನ ಸಮಿತಿ ಸಭೆ ಕರೆಯುವ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಆದರೆ ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ ಮತ್ತು ಪಿಡಿಒ ರವರಗೆ ಎರಡು ಪಂಚಾಯತಿಗೆ ಕರ್ತವ್ಯ ನಿಯೋಜಿಸಲಾಗಿದೆ. ಇದರಿಂದ ಸಕಾಲದಲ್ಲಿ ಯಾವುದೇ ಸಭೆ ಮಾಡಲು ಸಾಧ್ಯವಾಗುತ್ತಿಲ್ಲ.ತಕ್ಷಣ ಕುಡಿಯುವ ನೀರಿನ ಸಭೆ ಕರೆದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳೋಣ ಎಂದು ಹೇಳಿದರು

ಪಿಡಿಒ ವಸೀಮ ಗಂಧದ ಈ ಬಗ್ಗೆ ಉತ್ತರಿಸಿ ಕುಡಿಯುವ ನೀರಿನ ಸ್ಥಾವರದಲ್ಲಿ ಆಟೋ ಸ್ಟಾಟರ್ ಹಾಕಿರುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗುತ್ತದೆ. ಮತ್ತು ಇದರ ಜತೆಗೆ ಟ್ಯಾಂಕ್ ತುಂಬಿ ನೀರು ಪೋಲಾಗುವ ಸಾಧ್ಯತೆ ಹೆಚ್ಚು .ಇದರಿಂದ ಸ್ಥಾವರದಲ್ಲಿ ಅಟೋ ಸ್ವಿಚ್ ತೆರವುಗೊಳಿಸುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ತಕ್ಷಣ ಕುಡಿಯುವ ನೀರಿನ ಸಭೆ ಕರೆಯುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.ಬೀದಿ ದೀಪ ದುರಸ್ತಿ ಹಾಗೂ ನಿರ್ವಹಣೆ ಬಗ್ಗೆ  ನಿರ್ಣಯ ಕೈಗೊಳ್ಳಲಾಯಿತು.  

ಸಭೆಯಲ್ಲಿ ಉಪಾಧ್ಯಕ್ಷೆ ಸುಶೀಲ ಪಕ್ಯೋಡ್,ಸದಸ್ಯರಾದ ರವಿರಾಜ ರೈ ಸಜಂಕಾಡಿ, ವೆಂಕಟೇಶ ಕನ್ನಡ್ಕ, ಕುಮಾರ ಅಂಬಟೆಮೂಲೆ, ವಸಂತ ಗೌಡ ಕನ್ನಯ, ಪದ್ಮನಾಭ ಕನ್ನಡ್ಕ, ಸಂತೋಷ್ ಆಳ್ವ ಗಿರಿಮನೆ, ರವಿಚಂದ್ರ ಸಾರೆಪ್ಪಾಡಿ, ಧರ್ಮೇಂದ್ರ ಕುಲಾಲ್, ಪದಡ್ಕ, ಲಿಂಗಪ್ಪ ಮೋಡಿಕೆ, ಕಲಾವತಿ ಗೌಡ ಪಟ್ಲಡ್ಕ, ಶ್ರೀಮತಿ ಕನ್ನಡ್ಕ, ಸುಜಾತ ಮೈಂದನಡ್ಕ, ಸವಿತಾ ನೇರೋತ್ತಡ್ಕ, ದಮಯಂತಿ ಕೆಮನಡ್ಕ, ಜ್ಯೋತಿ ಅಂಬಟೆಮೂಲೆ, ಹೇಮಾವತಿ ಮೋಡಿಕೆ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here