ಪುತ್ತೂರು: ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ ಬಂದಿರುವ ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ಜಾತ್ರೋತ್ಸವಕ್ಕೆ ಜ.31 ರಂದು ಗೊನೆ ಮುಹೂರ್ತ ನಡೆಯಿತು. ಸರ್ವೆ ಗ್ರಾಮದ ಎಲಿಯದಲ್ಲಿ ನೆಲೆನಿಂತು ಭಕ್ತರನ್ನು ಸಲಹುತ್ತಾ ಬಂದಿರುವ ಶ್ರೀ ವಿಷ್ಣುಮೂರ್ತಿ ದೇವರ ದ್ವಿತೀಯ ಪ್ರತಿಷ್ಠಾ ವರ್ಧಂತಿ ಹಾಗೂ ಉತ್ಸವವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ.5 ರಿಂದ ಆರಂಭಗೊಂಡು 7 ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಜಾತ್ರೋತ್ಸವಕ್ಕೆ ದೇವಳದ ಪ್ರಧಾನ ಅರ್ಚಕರಾದ ನಾಗೇಶ ಕಣ್ಣಾರಾಯ ಎಲಿಯರವರು ಗೊನೆ ಮುಹೂರ್ತ ನೆರವೇರಿಸಿದರು. ಮಜಲುಗದ್ದೆ ತೋಟದಲ್ಲಿ ಗೊನೆ ಕಡಿದು ಅಲ್ಲಿಂದ ಭಕ್ತ ಸಮೂಹದ ಮೆರವಣಿಗೆಯೊಂದಿಗೆ ದೇವಳಕ್ಕೆ ತಂದು ಪೂಜೆ ನಡೆದು ಗೊನೆ ಮುಹೂರ್ತ ನಡೆಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಗೌರವ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಅಧ್ಯಕ್ಷ ಶಿವರಾಮ ರೈ ಸೊರಕೆ, ಸಂಚಾಲಕ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಕಾರ್ಯದರ್ಶಿ ರಜನಿಕಾಂತ ಬಾಳಾಯ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಗೌಡ ಎಲಿಯ, ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ರತ್ನಾಕರ ರೈ ಕೆದಂಬಾಡಿಗುತ್ತು, ರವಿಕುಮಾರ್ ರೈ ಮಠ, ಬಿ.ವಿ ಸೂರ್ಯನಾರಾಯಣ ಎಲಿಯ, ಪ್ರಸನ್ನ ರೈ ಮಜಲುಗದ್ದೆ, ನಿಶಾಂತ್ ರೈ ಸೊರಕೆ, ಜಯಾನಂದ ರೈ ಮಿತ್ರಂಪಾಡಿ, ಉದಯ ಕುಮಾರ್ ರೈ ಬಾಕುಡ, ರಾಮಚಂದ್ರ ಸೊರಕೆ, ಉಮೇಶ್ ಸುವರ್ಣ ಸೊರಕೆ, ಸುಂದರ ಕಟ್ಟತ್ತಡ್ಕ, ಧನುಷ್ ರೈ ಬಾಕುಡ, ಗಣೇಶ್ ನೇರೋಳ್ತಡ್ಕ, ಅಭಿಲಾಷ್ ಮಾರ್ತ, ಆನಂದ ರಾವ್ ಸೊರಕೆ, ಪುಷ್ಪಾ ಆನಂದ ರಾವ್, ರಾಘವ ನಾಯ್ಕ ನೆಕ್ಕಿಲು, ತಿಮ್ಮಪ್ಪ ಗೌಡ ಕನ್ನಡಮೂಲೆ,ಲಲಿತಾ ಗೌಡ ಮಜಲುಗದ್ದೆ ಸಹಿತ ಹಲವು ಮಂದಿ ಭಕ್ತರು ಉಪಸ್ಥಿತರಿದ್ದರು.