ಪುತ್ತೂರಿನ ಅರುಣಾ ಚಿತ್ರಮಂದಿರ ಅತ್ಯಾಧುನಿಕ ಶೈಲಿಯ ಅರುಣಾ ಕಲಾ ಮಂದಿರವಾಗಿ ಪರಿವರ್ತನೆ-ಸಂಪೂರ್ಣ ಹವಾ ನಿಯಂತ್ರಿತ ಸಭಾಭವನದ ಉದ್ಘಾಟನೆ

0

ಪತ್ತೂರು: ಬದಲಾದ ಕಾಲಕ್ಕೆ ಅನುಗುಣವಾಗಿ ಪುತ್ತೂರಿನ ಅರುಣಾ ಚಿತ್ರಮಂದಿರದ ಕಟ್ಟಡ ಹೊಸ ತಂತ್ರಜ್ಞಾನ ಮತ್ತು ಹೊಸ ಅತ್ಯಾಧುನಿಕ ವಿನ್ಯಾಸದಲ್ಲಿ ಸಂಪೂರ್ಣ ಹವಾನಿಯಂತ್ರಿತ ಸಭಾಭವನ ’ಅರುಣಾ ಕಲಾ ಮಂದಿರ ’ ಜ.31ರಂದು ಉದ್ಘಾಟನೆಗೊಂಡಿತು. ಹಿರಿಯ ಜವುಳಿ ಉದ್ಯಮಿ ಕೆ. ವಾಮನ ಕುಡ್ವ ಮತ್ತು ಆನಂದ ಆಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ. ಗೌರಿ ಪೈ ಅವರು ನೂತನ ಅರುಣಾ ಕಲಾ ಮಂದಿರವನ್ನು ಉದ್ಘಾಟಿಸಿದರು. ಉದ್ಘಾಟನಾ ಸಂದರ್ಭ ವೇ ಮೂ ವೆಂಕಟೇಶ್ ನಾಯಕ್ ಮಂತ್ರಘೋಷ ಪಠಿಸಿದರು.


ಇಷ್ಟು ಸುಂದರವಾದ ಕಲಾಮಂದಿರ ಸಿಕ್ಕಿರುವುದು ನಮ್ಮ ಪುಣ್ಯ:
ಅರುಣಾ ಕಲಾ ಮಂದಿರವನ್ನು ಉದ್ಘಾಟಿಸಿದ ಆನಂದ ಆಶ್ರಮ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ. ಗೌರಿ ಪೈ ಅವರು ಮಾತನಾಡಿ ರಮಾನಂದ ನಾಯಕ್ ಮನೆ ಮಂದಿಯನ್ನು ಸಣ್ಣ ಮಕ್ಕಳಿಂದಲೇ ನೋಡಿದವಳು ನಾನು. ಹಿಂದೆ ಅರುಣಾ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದು ನೆನಪಿದೆ. ಇವತ್ತು ಅದು ಕಲಾ ಮಂದಿರವಾಗುವಾಗ ಖುಷಿ ಕೊಟ್ಟಿದೆ. ಇಷ್ಟು ಸುಂದರವಾದ ಕಲಾ ಮಂದಿರ ಸಿಕ್ಕಿರುವುದು ನಮ್ಮ ಪುಣ್ಯ. ಇಲ್ಲಿ ಉತ್ತಮ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಹಾರೈಸಿದರು.


ಪುತ್ತೂರಿನ ಜನತೆಯ ಮಂಗಳಕಾರ್ಯಕ್ಕೆ ಉತ್ತಮ ಕಲಾ ಮಂದಿರ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಡಾ. ಅಶೋಕ್ ಪ್ರಭು ಅವರು ಮಾತನಾಡಿ ಅರುಣಾ ಚಿತ್ರಮಂದಿರ ಅರುಣಾ ಕಲಾಮಂದಿರವಾಗಿ ಪರಿವರ್ತನೆ ಆಗಿದೆ. ಆದರೂ ಪುತ್ತೂರಿನ ದೊಡ್ಡ ಲ್ಯಾಂಡ್ ಮಾರ್ಕ್ ಅರುಣಾ ಎಂದ ಅವರು ನಾನು ಮತ್ತು ನನ್ನ ತಾಯಿ ಈ ಚಿತ್ರಮಂದಿರದಲ್ಲಿ ನೋಡದ ಸಿನಿಮಾ ಇಲ್ಲ. ಆದರೆ ಇವತ್ತು ಪರಿವರ್ತನೆ ಜಗದ ನಿಯಮ. ಅದರಂತೆ ಮಲ್ಪಿಪ್ಲೆಕ್ಸ್, ಮಾಲ್, ಹೋಮ್ ಥಿಯೇಟರ್ ಬಂದ ಬಳಿಕ ಥಿಯೇಟರ್ ಸಮಯಕ್ಕೆ ಬಂದು ನೋಡಲು ಈಗ ನಮಗೆ ಸಮಯವಿಲ್ಲ. ನಮಗೆ ಬೇಕಾದ ಸಮಯದಲ್ಲೇ ಮನೆಯಲ್ಲೇ ಸಿನಿಮಾ ನೋಡುವ ವ್ಯವಸ್ಥೆಯ ಸಂದರ್ಭದಲ್ಲಿ ಕಲೆ, ಸಾಹಿತ್ಯಗಳಲ್ಲಿ ಬಹಳ ಪ್ರೀತಿ ವಿಶ್ವಾಸ ಅಭಿಮಾನ ಇರುವ ಕುಟುಂಬ ಸುಬ್ರಾಯ ನಾಯಕ್, ಮಾದವ ನಾಯಕ್, ರಮಾನಂದ ನಾಯಕ್ ಅವರು ಕುಟುಂಬದ ಅಸ್ತಿ ಅರುಣಾವನ್ನು ಉಳಿಸಿಕೊಂಡಿರುವುದು ಉತ್ತಮ ವಿಚಾರವಾಗಿದೆ. ಜನರಿಗೆ ಅತ್ಯಾಧುನಿಕ ವ್ಯವಸ್ಥೆಯಲ್ಲಿ ಕಾರ್ಯಕ್ರಮಗಳ ವ್ಯವಸ್ಥೆಗೆ ಯಾವುದೇ ಸಮಸ್ಯೆ ಇಲ್ಲದಂತೆ ಇಲ್ಲಿ ಎ ಟೂ ಝಡ್ ಸಿಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಲಾ ಮಂದಿರ ಮಾಡಿರಬಹುದು. ಡಾ. ರಾಘವೇಂದ್ರ ನಾಯಕ್ ಅವರ ಮುಂದಾಲುತ್ವದಲ್ಲಿ ನಡೆಯಲಿರುವ ಈ ಕಲಾ ಮಂದಿರದಲ್ಲಿ ಉತ್ತಮ ಕಾರ್ಯಕ್ರಮ ಮೂಡಿಬರಲು ಸೀಮೆಯ ಮಹಾಲಿಂಗೇಶ್ವರ ಅನುಗ್ರಹ ನೀಡಲಿ. ಪುತ್ತೂರಿನ ಜನತೆಗೆ ಮಂಗಳಕಾರ್ಯ ಆಗಲಿ ಎಂದರು.


ಜೀವನದ ನೈಜ ಚಿತ್ರಣ ನೀಡುವ ಕೆಲಸ ಇಲ್ಲಿಂದ ಆರಂಭವಾಗಲಿದೆ:
ವಾಸ್ತು ಇಂಜಿನಿಯರ್ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ಇಲ್ಲಿನ ತನಕ ಅರುಣಾ ಚಿತ್ರಮಂದಿರವಾಗಿ ಚಿತ್ರಣ ನೀಡುತ್ತಿತ್ತು. ಮುಂದೆ ಜೀವನದ ನೈಜ ಚಿತ್ರಣ ನೀಡುವ ಕೆಲಸ ಇಲ್ಲಿಂದ ಆರಂಭಗೊಳ್ಳಲಿದೆ. ಅದಕ್ಕೆ ತಕ್ಕಂತೆ ಯಜಮಾನ ಸ್ಥಾನದಲ್ಲಿ ಕಲಾಮಂದಿರದ ಎದುರು ಮಹಾಲಿಂಗೇಶ್ವರ ದೇವರ ಕಟ್ಟೆಯೂ ಇದೆ. ಶ್ರೀ ದೇವರು ಜಾತ್ರೆ ಸಂದರ್ಭ ಇಲ್ಲಿ ಪೂಜೆ ಸ್ವೀಕರಿಸುವುದು ವಿಶೇಷ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಎಷ್ಟು ಸಾಧ್ಯವೋ ಅಷ್ಟು ಶಾಸ್ತ್ರಗಳನ್ನು ಅಳವಡಿಸಲಾಗಿದೆ ಎಂದ ಅವರು ಅರುಣಾ ಕಲಾಮಂದಿರ ಪುತ್ತೂರಿಗೆ ಚಿನ್ನದ ಗರಿಯಾಗಿದೆ ಎಂದರು.


ಹೆಚ್ಚಿನ ಕಾರ್ಯಕ್ರಮ ಇಲ್ಲಿ ನಡೆಯಲಿ:
ಸುಳ್ಯ ಕರ್ನಾಟಕ ಪ್ಲೈವುಡ್‌ನ ಮಾಲಕ ಕೃಷ್ಣ ಕಾಮತ್ ಅವರು ಮಾತನಾಡಿ ಉನ್ನತ ವಿದ್ಯಾಕ್ಷೇತ್ರ, ಹುದ್ದೆಗಳನ್ನು ಅನುಭವಿಸುವ ವ್ಯವಸ್ಥೆ ಇದ್ದರೂ ಅದನ್ನು ಬಿಟ್ಟು ತನ್ನ ತಂದೆಗೆ ಹೆಗಲು ಕೊಟ್ಟು ಕಲಾಮಂದಿರಕ್ಕೆ ರೂಪುಕೊಟ್ಟ ಡಾ. ರಾಘವೇಂದ್ರ ನಾಯಕ್ ಅವರು ಎಲ್ಲಾ ಹಂತದಲ್ಲಿ ಕೌಶಲ್ಯ ಇರುವ ವ್ಯಕ್ತಿಯಾಗಿ ಮೂಡಿ ಬಂದಿದ್ದಾರೆ ಎಂದರು.


ಹಿರಿಯರ ತಪ್ಪಸಿಗೆ ವಿಶೇಷ ಆಯಾಮ ಲಭಿಸಿದೆ:
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಮಾತನಾಡಿ ನಾನು ಕೂಡಾ ಈ ಕುಟುಂಬಕ್ಕೆ ಸೇರಿದ ಸದಸ್ಯ. ಈ ನಿಟ್ಟಿನಲ್ಲಿ ಹಿರಿಯರ ತಪ್ಪಿಸಿಗೆ ವಿಶೇಷ ಆಯಾಮವನ್ನು ರಮಾನಂದ ನಾಯಕ್ ಕುಟುಂಬ ನೀಡಿದ್ದಾರೆ. ವ್ಯವಹಾರದ ಬಗ್ಗೆ ಅವರಿಗೆ ಇದ್ದ ಶ್ರದ್ಧೆ. ಧಾರ್ಮಿಕ ಚೌಕಟ್ಟಿನ ಒಳಗೆ ಅವರು ಬೆಳೆದ ರೀತಿಯಿಂದಾಗಿ ಹಿರಿಯರು ಕಂಡ ಕನಸು ಉಳಿದಿದೆ. ಸಾಹಿತ್ಯ, ಸಾಂಸ್ಕೃತಿಕ ಕೊಡುಗೆಯನ್ನು ನೀಡಿದ ರಮಾನಂದ ನಾಯಕ್ ಅವರ ತಂದೆಯವರು ನೀಡಿದ್ದಾರೆ. ಆ ಸಾಹಿತ್ಯ, ಸಾಂಸ್ಕೃತಿಕ ಪರಂಪರೆಗೆ ಈ ಸ್ಥಳವು ಕಲಾಮಂದಿರವಾಗಿ ರೂಪುಗೊಂಡಿರುವುದು ಉತ್ತಮ ವಿಚಾರ. ಕಾಲದ ಅಗತ್ಯಕ್ಕೆ ಸರಿಯಗಿ ಸಮಯದ ಬೇಡಿಕೆಗೆ ಸರಿಯಾಗಿ ಹೊಂದಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕಲಾಮಂದಿರ ಎಲ್ಲ ಜನರಿಗೂ ಉತ್ತಮ ಕಾರ್ಯಕ್ರಮಕ್ಕೆ ಅವಕಾಶ ಸಿಗಲೆಂದು ಹಾರೈಸಿದರು.


ಹಿರಿಯರಿಗೆ ಗೌರವ:
ಹಿರಿಯರಾದ ಡಾ. ಗೌರಿ ಪೈ ಮತ್ತು ಹಿರಿಯ ಜವುಳಿ ಉದ್ಯಮ ವಾಮನ ಕುಡ್ವ ಅವರನ್ನು ಅರುಣಾ ಕಲಾ ಮಂದಿರದ ಮಾಲಕರು ಮತ್ತು ಮನೆ ಮಂದಿ ಗೌರವಿಸಿದರು.


ಸಾಹಿತ್ಯ ಪರಿಷತ್‌ಗೆ ಪುಸ್ತಕ ಹಸ್ತಾಂತರ:
ಬೊಳುವಾರು ದಿ| ಮಾದವ ನಾಯಕ್ ಸ್ಮರಣಾರ್ಥ ಅವರ ಪುತ್ರ ರಮಾನಂದ ನಾಯಕ್ ಅವರು ಉಲ್ಲಾಸಣ್ಣ ಸಹಿತ ಇತರರು ಬರೆದ ಸಾಹಿತ್ಯ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಪರಿಷತ್‌ಗೆ ಕೊಡುಗೆಯಾಗಿ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರಿಗೆ ಪುಸ್ತಕ ಹಸ್ತಾಂತರಿಸಲಾಯಿತು.


ಅತ್ಯಾಧುನಿಕ ಜೀವನ ಶೈಲಿಗೆ ರೂಪುಗೊಂಡಿರುವ ಕಲಾಮಂದಿರ
ಅರುಣಾ ಕಲಾ ಮಂದಿರದ ಮಾಲಕ ಪಿ.ರಾಮಾನಂದ ನಾಯಕ್ ಅವರ ಪತ್ನಿ ವಿಜಯ ಆರ್ ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ 1979 ರಲ್ಲಿ ಮಾದವ ನಾಯಕ್ ಅವರ ಮೂಲಕ ಬಂದಿರುವ ಅರುಣಾ ಚಿತ್ರಮಂದಿರ ಪುತ್ತೂರಿನಲ್ಲಿ ಒಂದು ಲ್ಯಾಂಡ್ ಮಾರ್ಕ್ ಆಗಿದೆ. ಇಲ್ಲಿ ಬಂಧನ, ವಸಂತ, ಸಹಿತ ಹಲವಾರು ಉತ್ತಮ ಚಿತ್ರಗಳ ಪ್ರದರ್ಶನಗೊಂಡು ಕಳೆದ ಕೋವಿಡ್ ಸಂದರ್ಭದ ಬಳಿಕ 2023ರ ಮಾ.23ಕ್ಕೆ ಚಿತ್ರಮಂದಿರವನ್ನು ಮುಚ್ಚಿದ್ದೇವೆ. ಆ ಬಳಿಕ ನನ್ನ ಮಗನ ಮೂಲಕ ಹೊಸಚಿಂತನೆಯಲ್ಲಿ ಚಿತ್ರಮಂದಿರ ಕಲಾಮಂದಿರವಾಗಿ ಪರಿವರ್ತನೆಗೊಂಡಿದೆ. ಚಿತ್ರಮಂದಿರವಿದ್ದ ಸಂದರ್ಭ ನಡೆಯುತ್ತಿದ್ದ ಮದುವೆ ಸಂದರ್ಭ ಜ್ಯೂಸ್ ಬಾಟಲ್, ಪ್ಯಾಕೇಟ್ ನೀಡುವಂತೆ ಇವತ್ತು ಅದನ್ನೇ ದ್ವಾರದಲ್ಲಿ ಮತ್ತೊಮ್ಮೆ ಮರುಕುಳಿಸಿದ್ದೇವೆ. ಡಾ. ರಾಘವೇಂದ್ರ ನಾಯಕ್ ಅವರು ತಂದೆಗೆ ಹೆಗಲು ಕೊಟ್ಟು ಆಧುನಿಕ ಜೀವನ ಶೈಲಿಗೆ ಅಗತ್ಯವಾಗಿ ಬೇಕಾಗುವ ರೀತಿಯಲ್ಲಿ ಕಲಾಮಂದಿರವನ್ನಾಗಿ ಪರಿವರ್ತಿಸಿದ್ದಾನೆ. ಒಂದು ಕಾಲದಲ್ಲಿ ಕತ್ತಲೆಯ ಬೆಳಕಿನಾಟದಲ್ಲಿ ಜನರನ್ನು ಮನರಂಜಿಸುತ್ತಿದ್ದ ಚಿತ್ರಮಂದಿರ ಇವತ್ತು ಜನರ ಬೆಳಕಿನಾಟವನ್ನು ಮನರಂಜಿಸಲು ಕಲಾಮಂದಿರವಾಗಿ ರೂಪುಗೊಂಡಿದೆ. ಕಲಾಮಂದಿರದಲ್ಲಿ ಒಟ್ಟು 750 ಮಂದಿಗೆ ಕುಳಿತುಕೊಳ್ಳಲು ಸೌಲಭ್ಯ ಒದಗಿಸಲಾಗಿದೆ. ವಿಶಾಲವಾದ ವೇದಿಕೆ, ಅತ್ಯಧುನಿಕ ಶೈಲಿಯ ಒಳವಿನ್ಯಾಸದೊಂದಿಗೆ ಸಂಪೂರ್ಣ ಹವಾನಿಯಂತ್ರಿತವಾಗಿದೆ ಎಂದರು.

ವಿಜಯ ನಾಯಕ್, ಡಾ.ರಾಘವೇಂದ್ರ ನಾಯಕ್, ನರೇಂಸ್ರ ಚಿಕ್ಕಮಂಗಳೂರು, ಗಣಪತಿ ನಾಯಕ್, ಮಂಜುನಾಥ್ ಕಾಮತ್, ವಿನಯ ನಾಯಕ್ ಅತಿಥಿಗಳನ್ನು ಗೌರವಿಸಿದರು. ಡಾ. ಅನುಪಮ ಬಾಳಿಗ ಪ್ರಾರ್ಥಿಸಿದರು. ಅರುಣಾ ಕಲಾ ಮಂದಿರದ ಮಾಲಕ ರಮಾನಂದ ನಾಯಕ್ ಸ್ವಾಗತಿಸಿದರು. ಡಾ ಅನುಪಮಾ ಬಾಳಿಗ ವಂದಿಸಿದರು. ಅನ್ನಪೂರ್ಣ ಮತ್ತು ರಜನಿಪ್ರಭು ಕಾರ್ಯಕ್ರಮ ನಿರೂಪಿಸಿದರು. ಸ್ವರ್ಣೋದ್ಯಮಿ ಜಿ.ಎಲ್. ಬಲರಾಮ ಆಚಾರ್ಯ, ರಾಜಿ ಬಲರಾಮ ಆಚಾರ್ಯ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೆಶ್ ನಾಯಕ್, ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ, ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಬಿ.ಕೆ.ವೀಣಾ, ಪಾಂಡುರಂಗ ನಾಯಕ್, ವಿದ್ಯಾ ನಾಯಕ್, ಬೊಳುವಾರು ಯೂನಿಯನ್ ಬ್ಯಾಂಕ್‌ನ ಮ್ಯಾನೇಜರ್ ಬೈರ್ ಕುಮಾರ್ , ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಕಾರ್ಯದರ್ಶಿ ಯು ಪೂವಪ್ಪ, ಹಿಮ ರೆಫ್ರಿಜರೇಶನ್ ಮಾಲಕ ರಾಜೇಶ್, ಕಲಾ ಮಂದಿರದ ಕನ್‌ಸ್ಟ್ರಕ್ಷನ್ ಉಸ್ತುವಾರಿ ಸೂರಜ್ ನಾಯರ್, ವತ್ಸಲಾ ನಾಯಕ್, ಸುಜಾತ ಬಾರ್ ಆಂಡ್ ರೆಸ್ಟೋರೆಂಟ್‌ನ ಮಾಲಕ ಸುಶಾಮ್ ಸಹಿತ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ರಮಾನಂದ ನಾಯಕ್ ಅವರ ಸಹೋದರ ಮಹಾಲಕ್ಷ್ನೀ ಗ್ಲಾಸ್ ಆಂಡ್ ಪ್ಲೈವುಡ್ಸ್‌ನ ಮಾಲಕ ಗಣಪತಿ ನಾಯಕ್ ಮತ್ತು ವಿನಯಾ ನಾಯಕ್, ಭರತ್ ನಾಯಕ್, ಪುನಿತ್ ನಾಯಕ್, ರಮಾನಂದ ನಾಯಕ್ ಅವರ ಪುತ್ರಿ ಅಕ್ಷತಾ ಮತ್ತು ಯೋಗೇಶ್ ಕಾಮತ್, ಡಾ. ಅನುಪಮ ಬಾಳಿಗ ಮತ್ತು ಡಾ. ಕಿರಣ್ ಬಾಳಿಗ, ಮಿತ್ರ ಮತ್ತು ಬಿ.ಎಚ್ ನರೇಂದ್ರ ಪೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಹಿರಿಯರ ಸ್ಥಾನಮಾನ ಉಳಿಸುವ ಕಾರ್ಯ:
ನನ್ನ ಅಜ್ಜ ಬೊಳುವಾರು ನರಸಿಂಹ ನಾಯಕ್ ಅವರು ಆರಂಭಿಸಿದ ವ್ಯವಹಾರ. ಅಜ್ಜ ತಂದು ಕೊಟ್ಟ ಸ್ಥಾನಮಾನಗಳ ಜೊತೆಗೆ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ನಮಗೆ ಉತ್ತಮ ನೆಲೆಯನ್ನು ತಂದುಕೊಟ್ಟ ನನ್ನ ತಂದೆ ಬೊಳುವಾರು ಮಾಧವ ನಾಯಕ್ ಅವರನ್ನು ನಾನು ಇವತ್ತು ಸ್ಮರಿಸುತ್ತೇನೆ. ಅವರ ಸ್ಥಾನಮಾನ ಉಳಿಸಿಕೊಂಡು ಮುಂದುವರಿದು ಇವತ್ತು ಅರುಣಾ ಕಲಾಮಂದಿರವನ್ನಾಗಿ ಅವರ ಸ್ಥಾನ ಮಾನ ಉಳಿಸಿಕೊಂಡಿದ್ದೇವೆ.
ಪಿ.ರಮಾನಂದ ನಾಯಕ್, ಮಾಲಕರು ಅರುಣಾ ಕಲಾ ಮಂದಿರ

ಸಂಸ್ಥೆಯ ಹಿರಿಯ ಸಿಬ್ಬಂದಿಗೆ ಬೈಕ್ ನೀಡಿದ ಮಾಲಕರು
ಅರುಣಾ ಕಲಾಮಂದಿರ ಮಾಲಕರಾಗಿರುವ ಪಿ ರಮಾನಂದ ನಾಯಕ್ ಅವರು ಐಡಿಯಲ್ ಐಸ್‌ಕ್ರೀಮ್ ನಡೆಸುತ್ತಿದ್ದು ಈ ಸಂಸ್ಥೇಯಲ್ಲಿ ಆರಂಭದಿಂದಲೂ ಸುಮಾರು 20 ವರ್ಷ ಕೆಲಸ ನಿರ್ವಹಿಸಿಕೊಂಡು ಬಂದಿರುವ ಐಡಿಯಲ್ ಐಸ್‌ಕ್ರೀಮ್‌ನ ಪುತೂರು, ಸುಳ್ಯ ಮೇಲ್ಚಿಚಾರಕ ದಾರಂದಕುಕ್ಕುವಿನ ರಾಜೇಶ್ ಪ್ರಭು ಅವರಿಗೆ ಸಂಸ್ಥೆಯ ಮಾಲಕ ರಮಾನಂದ ನಾಯಕ್ ಅವರು ಬೈಕ್ ನೀಡಿ ಗೌರವಿಸಿದರು. ರಾಜೇಶ್ ಪ್ರಭು ನಮ್ಮ ಕೆಲಸದವನ್ನಲ್ಲ ಕುಟುಂಬದ ಸದಸ್ಯನಂತೆ ಇದ್ದಾನೆ. ಅವರ ಪ್ರಾಮಾಣಿಕ ಕರ್ತವ್ಯಕ್ಕೆ ನಮ್ಮ ಕಡೆಯಿಂದ ಚಿಕ್ಕ ಉಡುಗೊರೆ ಎಂದು ಸಭೆಯಲ್ಲಿ ಬೈಕ್ ಕೀಯನ್ನು ರಾಜೇಶ್ ಪ್ರಭು ಅವರಿಗೆ ಹಸ್ತಾಂತರಿಸಿ ಸನ್ಮಾನಿಸಿದರು. ಇದೇ ಸಂದರ್ಭ ಅರುಣಾ ಕಲಾಮಂದಿರದ ಕನ್‌ಸ್ಟ್ರಕ್ಷನ್ ಸೂರಜ್ ನಾಯರ್, ಸೂರತ್ ಇಶಾನ್ ನಾಯಕ್, ಪ್ಲಬಂರ್ ವಾಸು, ಹೆಲ್ಪರ್ ಗಿರೀಶ್ ಸಹಿತ ಕಟ್ಟಡ ನಿರ್ಮಾಣದ ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಂಡವರನ್ನು ಗೌರವಿಸಲಾಯಿತು.

ಸಂಪೂರ್ಣ ಹವಾನಿಯಂತ್ರಿತ ಅರುಣಾ ಕಲಾ ಮಂದಿರ
ಅರುಣಾ ಕಲಾ ಮಂದಿರ ಪುತ್ತೂರಿನ ಹೃದಯಭಾಗದಲ್ಲಿದ್ದು ಪುತ್ತೂರಿನ ಲ್ಯಾಂಡ್ ಮಾರ್ಕ್ ಆಗಿದೆ. ಸಭಾಂಗಣ ಮತ್ತು ಡೈನಿಂಗ್ ಹಾಲ್ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಮೇಲಂತಸ್ತು ಮತ್ತು ಕೆಳಅಂತಸ್ತಿನಲ್ಲಿ ಒಟ್ಟು 750 ಮಂದಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಮದುವೆ, ನಿಶ್ಚಿತಾರ್ಥ, ಉಪನಯನ, ಔತಣಕೂಟ, ಸಹಿತ ಹಲವು ಸಮಾರಂಭಗಳಿಗೆ ವ್ಯವಸ್ಥೆ ಕಲ್ಪಿಸಲಾಗಿರುವ ಕಲಾಮಂದಿರ ವಿಶಾಲವಾದ ಪಾರ್ಕಿಂಗ್ ಒಳಗೊಂಡಿದೆ. ವಿವಾಹ ಕಾರ್ಯಕ್ರಮದಲ್ಲಿ ವೇದಿಕೆಯ ಅಕ್ಕಪಕ್ಕದ ಕೊಠಡಿಗಳು ಹವಾನಿಯಂತ್ರಿತವಾಗಿದೆ. ಸಭಾಂಗಣ ಮತ್ತು ಕಲಾಮಂದಿರದ ವಠಾರದಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗಿದೆ. ಸಭಾಂಗಣದ ಬುಕ್ಕಿಂಗ್‌ಗಾಗಿ ಮೊ:8310091376 9448120315 ಅನ್ನು ಸಂಪರ್ಕಿಸುವಂತೆ ಕಲಾ ಮಂದಿರದ ಮಾಲಕ ಪಿ.ರಮಾನಂದ ನಾಯಕ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here