ಪುತ್ತೂರು:ದ.ಕ.ಜಿ. ಪಂ. ಸ. ಪ್ರಾ. ನೆಟ್ಟಣಿಗೆ ಮುಡ್ನೂರು ಕರ್ನೂರು ಶಾಲೆಯ ಪ್ರತಿಭಾ ದಿನಾಚರಣೆ ನಡೆಯಿತು. ಶ್ರೀ ಮಣಿಕಂಠ ಸೇವಾ ಸಮಿತಿ ವಸಾಯಿ ಬಾಂಬೆಯ ಅಧ್ಯಕ್ಷ ಶಂಕರ ಆಳ್ವ ದೀಪ ಬೆಳಗಿಸಿ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಉತ್ತಮ ಕ್ರೀಡಾ ಪ್ರತಿಭೆಯನ್ನು ರಾಷ್ಟ್ರದಲ್ಲೆಡೆ ಹಬ್ಬಿಸಿದ ವಿದ್ಯಾರ್ಥಿಗಳನ್ನು ಸ್ಮರಿಸಿ ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಕುರಿತಾಗಿ ಪಠ್ಯ ಹಾಗೂ ಪಠ್ಯೇತರ ವಿಷಯದ ಕುರಿತಾಗಿ ಪ್ರಶಂಸೆಯ ಮಾತುಗಳನ್ನು ಆಡಿದರು.
ಪಂಚಾಯತ್ ಸದಸ್ಯ ರಾಮ್ ಪಕ್ಕಳ ಅಧ್ಯಕ್ಷತೆ ವಹಿಸಿ ಕರ್ನೂರು ಶಾಲೆಯಲ್ಲಿ ನಡೆಯುವ ವಿವಿಧ ವಿನೂತನ ಕಾರ್ಯಕ್ರಮಗಳ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿ ಗ್ರಾಮ ಪಂಚಾಯಿತಿ ಸದಸ್ಯ ಕುಮಾರನಾಥ ಪೂಜಾರಿ ,ಪ್ರಗತಿಪರ ಕೃಷಿಕ ಮೂಸಾನ್ ನೇರೊಳ್ತಡ್ಕ ,ಮುಂಡೂರು ಸಹಶಿಕ್ಷಕ ಶ್ರೀರಾಮಚಂದ್ರ ಬಿ . ಶ್ರೀಮತಿ ಶಾಂಭಲತಾ ರೈ ಕರ್ನೂರು ಮೇಗಿನಮನೆ, ಹಿರಿಯ ವಿದ್ಯಾರ್ಥಿ ಹರಿಶ್ಚಂದ್ರ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜನಾಬ್ ಡಾಕ್ಟರ್ ಎಂ ಎಸ್ ಎಂ ಅಬ್ದುಲ್ ರಶೀದ್ ಸಖಾಫಿ ಝೈನಿ ಸರಕಾರಿ ಶಾಲೆಯಲ್ಲಿ ಪೋಷಕರ ಪಾತ್ರ ಎಂಬ ವಿಷಯದ ಕುರಿತಾಗಿ ಉಪನ್ಯಾಸವನ್ನು ನೀಡಿದರು. ನಿವೃತ್ತ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣ ಭಟ್ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಉಪನ್ಯಾಸ ನೀಡಿದರು.
ಶಾಲೆಗೆ ಕೊಡುಗೆ ನೀಡಿದ ಹನೀಫ್ ಗಾಳಿಮುಖ, ಚರಣ್ ರಾಜ್ ರಿನಿತ್ ರೈ ಮೈರೋಳು, ತೇಜಸ್ವಿನಿ ನವೀನ್ ಗೌಡ ಕುಕ್ಕುಡೆಲು ಎಸ್ಟೇಟ್,ಅಬ್ದುಲ್ ಬಶೀರ್ ಅಡ್ಕ, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ಕರ್ನೂರು ಶಾಲೆಯ ಹಿರಿಯ ವಿದ್ಯಾರ್ಥಿನಿ ಕೃತಿಕಾ ಇವರಿಗೆ ಗೌರವಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವರ್ಷದ ಸಮಗ್ರ ತಂಡ ಪ್ರಜ್ವಲ ತಂಡ ಪ್ರಥಮ ಸ್ಥಾನವನ್ನು, ಉಜ್ವಲ ತಂಡವು ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿ ಕೊಂಡಿತು .SDMC ಅದ್ಯಕ್ಷರು B.H ಸೂಫಿ ಸ್ವಾಗತಿಸಿ,ಮುಖ್ಯಗುರು ರಮೇಶ್ ಶಿರ್ಲಾಲ್ ಇವರು ಶಾಲೆಯ ವಾರ್ಷಿಕ ವರದಿ ಮಂಡಿಸಿದರು. ಪ್ರವೀಣ ಕುಮಾರಿ ವಂದಿಸಿ ಹಲೀಮ ನಜುಮುನ್ನಿಸಾ , ಲತಾ ರಮೇಶ್ ನಿರೂಪಿಸಿದರು. ಶಿಕ್ಷಕಿಯರಾದ ವಿಜೇತ ಕೆ, ಸಾವಿತ್ರಿ ಕೆ, ಆಶಾಲತಾ ,ದಿವ್ಯ,ಕುಮಾರಿ ಸುಶ್ಮಿತಾ , ಕುಮಾರಿ ಶಕೀಲಾ ಸಹಕರಿಸಿದರು.