ಕುಟಿನೋಪ್ಪಿನಡ್ಕ – ಖಂಡಿಗ- ಇಡಿಂಜಿಲ ರಸ್ತೆ ಕಾಂಕ್ರೀಟ್‌ಗೆ ಶಾಸಕರಿಂದ ಶಿಲಾನ್ಯಾಸ

0

5 ವರ್ಷಗಳಲ್ಲಿ ಗ್ರಾಮೀಣ ರಸ್ತೆಗಳು ಬಹುತೇಕ ಅಭಿವೃದ್ದಿ : ಅಶೋಕ್ ರೈ

ಪುತ್ತೂರು: ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಿದ್ದು ಮುಂದಿನ 5 ವರ್ಷದೊಳಗೆ ಬಹುತೇಕ ಗ್ರಾಮೀಣ ರಸ್ತೆಗಳು ಅಭಿವೃದ್ದಿ ಮಾಡುವ ಪಣತೊಟ್ಟಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ಒಳಮೊಗ್ರು ಗ್ರಾಮದ ಕುಟ್ಟಿನೋಪ್ಪಿನಡ್ಕ-ಖಂಡಿಗ-ಇಡಿಂಜಿಲ ರಸ್ತೆ ಕಾಂಕ್ರೀಟ್‌ಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಈ ರಸ್ತೆಯನ್ನು ಕಾಂಕ್ರೀಟ್ ಮಾಡಿಸಿಕೊಡುವುದಾಗಿ ಚುನಾವಣಾ ಸಮಯದಲ್ಲಿ ಭರವಸೆ ನೀಡಿದ್ದೆ. ಗ್ರಾಮಸ್ಥರ ಬೇಡಿಕೆಯಂತೆ 20 ಲಕ್ಷ ಅನುದಾನವನ್ನು ನೀಡಿದ್ದೇನೆ. ಗ್ರಾಮಸ್ಥರು ತೆರಳುವ ಒಳರಸ್ತೆಗಳು ಅಭಿವೃದ್ದಿಯಾಗಬೇಕು, ಗ್ರಾಮದ ಬಡವರ ಮನೆಗೆ ತೆರಳುವ ರಸ್ತೆಗಳು ಕೂಡಾ ಸಂಚಾರಕ್ಕೆ ಯೋಗ್ಯವಾಗಿರಬೇಕು ಹಾಗಿದ್ದಲ್ಲಿ ಮಾತ್ರ ಹಳ್ಳಿಗಳ ಉದ್ದಾರವಾಗುತ್ತದೆ. ಗ್ರಾಮಗಳ ಅಭಿವೃದ್ದಿಯಾದರೆ ಮಾತ್ರ ದೇಶ ಅಭಿವೃದ್ದಿ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇಲ್ಲಿನ ರಸ್ತೆಯನ್ನು ಪೂರ್ತಿಯಾಗಿ ಕಾಂಕ್ರೀಟ್ ಮಾಡಲಾಗುವುದು ಗ್ರಾಮದ ಜನತೆ ಅಭಿವೃದ್ದಿಗಾಗಿ ಕಾಂಗ್ರೆಸ್ ಬೆಂಬಲಿಸುವಂತೆ ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಮಾತನಾಡಿ ಒಳಮೊಗ್ರು ಗ್ರಾಮದ ಇಡಿಂಜಿಲ ರಸ್ತೆ ಬಹುಕಾಲದ ಬೇಡಿಕೆಯಾಗಿದ್ದು ಈ ಬರಿ ಯೋಗ ಕೂಡಿ ಬಂದಿದೆ. ರಾಜಕೀಯ ದುರುದ್ದೇಶದಿಂದ ಇಲ್ಲಿನ ರಸ್ತೆಯನ್ನು ಅಭಿವೃದ್ದಿ ಮಾಡಿರಲಿಲ್ಲ ಎಂಬ ವಿಚಾರವನ್ನು ಗ್ರಾಮಸ್ಥರು ತಿಳಿಸಿದ್ದಾರೆ. ಅಭಿವೃದ್ದಿಯಲ್ಲಿ ರಾಜಕೀಯ ಮಾಡಿದರೆ ಗ್ರಾಮಗಳ ಅಭಿವೃದ್ದಿ ಸಾಧ್ಯವೇ ಇಲ್ಲ ಎಂದು ಹೇಳಿದರು.

ಒಳಮೊಗ್ರು ವಲಯ ಅಧ್ಯಕ್ಷ ಅಶೋಕ್ ಪೂಜಾರಿ, ಉಪಾಧ್ಯಕ್ಷರಾದ ಮಹಮ್ಮದ್, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಹಿರಿಯ ಕಾಂಗ್ರೆಸ್ ಮುಖಂಡ ಪಂಜಿಗುಡ್ಡೆ ಈಶ್ವರಭಟ್, ಗ್ರಾಪಂ ಮಾಜಿ ಉಪಾಧ್ಯಕ್ಷ ಇಸುಬು ಕೆ, ಒಳಮೊಗ್ರು ಗ್ರಾಪಂ ಸದಸ್ಯರುಗಳಾದ ಸುಂದರಿ, ಶಾರದಾ, ಬಿ ಸಿ ಚಿತ್ರಾ, ಶೀನನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಕಾಂಗ್ರೆಸ್ ಮುಖಂಡರುಗಳಾದ ಕೆ ಮಹಮ್ಮದ್ , ಕೆ ಪಿ ಮಹಮ್ಮದ್, ಚಂದ್ರಾವತಿ ಅಡ್ಕ, ಗೋವಿಂದ ನಾಯ್ಕ ಅಡ್ಕ, ನಾರಾಯಣ ನಾಯ್ಕ ಖಂಡಿಗ, ರವಿನಾಯ್ಕ ಖಂಡಿಗ, ಹರಿಣಾಕ್ಷಿ ಖಂಡಿಗ, ಮಹಾಬಲ ನಾಯ್ಕ ಖಂಡಿಗ, ಅಶ್ವಥ್, ಮುಸ್ತಫಾ ಕೆ ಪಿ, ಬೂತ್ ಅಧ್ಯಕ್ಷರುಗಳಾದ ಅಝೀಝ್ ನೀರ್ಪಾಡಿ, ಮುನೀರ್ ಉಜಿರೋಡಿ, ಕೆ ಪಿ ಹಸನ್, ಅಸ್ಸಿ ಇಡಿಂಜಿಲ, ಮಹಮ್ಮದ್ ಕುಂಞಿ ಇಡಿಂಜಿಲ, ಅಬೂಬಕ್ಕರ್ ನೀರ್ಪಾಡಿ, ಉಸ್ಮಾನ್ ನೀರ್ಪಾಡಿ, ಇಸುಬು ಹಾಜಿ ಕೈಕಾರ, ಎಂ ಎಂ ಹಸೈನಾರ್, ಅಬ್ದುಲ್ಲ ಮುಸ್ಲಿಯಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಬದ್ರುನ್ನಿಸಾ,ಇಬ್ರಾಹಿಂ ಬಾಳಯ, ಕಮಲ ನಾಣಿಲ್ತಡ್ಕ, ಎಸ್‌ಡಿಎಂಸಿ ಅಧ್ಯಕ್ಷ ಹಂಝ ಉಜಿರೋಡಿ, ಮೊದಲಾದವರು ಉಪಸ್ಥಿತರಿದ್ದರು. ಶಶಿಕಿರಣ್ ರೈ ಸ್ವಾಗತಿಸಿದರು. ಒಳಮೊಗ್ರು ಗ್ರಾ.ಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ವಂದಿಸಿದರು.

LEAVE A REPLY

Please enter your comment!
Please enter your name here