ಅರಿಯಡ್ಕ: ನಿಟ್ಟೆ ಯುನಿವರ್ಸಿಟಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಪ್ರೊ.ರಮಾ ಅಡಿಗ ಮಾರ್ಗದರ್ಶನದಲ್ಲಿ ಸಲ್ಲಿಸಿದ ಮೊಲೆಕ್ಯುಲರ್ ಕ್ಯಾರೆಕ್ಟರೈಸೇಶನ್ ಆಫ್ ಪ್ಲಾಸ್ಮೋಡಿಯಂ ಸ್ಪೀಶಿಸ್ ಫ್ರಮ್ ಮಲೇರಿಯಾ ಪೇಷಂಟ್ಸ್ ಫ್ರಮ್ ತರ್ಷರಿ ಹಾಸ್ಪಿಟಲ್ ಆಂಡ್ ರೂರಲ್ ಹೆಲ್ತ್ ಕೇರ್ ಸೆಂಟರ್ಸ್ ಇನ್ ಆಂಡ್ ಅರೌಂಡ್ ಮಂಗಳೂರು.(Molecular Characterization of plasmodium species from malaria patients from tertiary hospitals and rural health care centres in and around Mangaluru.) ಎಂಬ ವಿಷಯದ ಕುರಿತು ಅನೂಪ್ ಕೃಷ್ಣ ರೈ ಕುತ್ಯಾಡಿ ಅವರು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ನಿಟ್ಟೆ ವಿಶ್ವ ವಿದ್ಯಾನಿಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ಇವರು ಅರಿಯಡ್ಕ ಗ್ರಾಮದ ಕುತ್ಯಾಡಿ ವಿಶ್ವನಾಥ ರೈ ಮತ್ತು ಲತಾ ವಿ.ರೈ ದಂಪತಿಗಳ ಸುಪುತ್ರ.ಪ್ರಸ್ತುತ ಡಿಎಸ್ಟಿ ಟೆಕ್ನಾಲಜಿ ಎನ್ಬಲಿಂಗ್ ಸೆಂಟರ್ ನಲ್ಲಿ ಪ್ರೊಜೆಕ್ಟ್ ಎಸೊಸೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.