ಬೆಟ್ಟಂಪಾಡಿ: ವಿಕಸಿತ ಭಾರತ ಸಂಕಲ್ಪ ಯಾತ್ರೆ ಸಮಾರೋಪ

0

ಬೆಟ್ಟಂಪಾಡಿ: ದ.ಕ. ಜಿಲ್ಲೆಯಲ್ಲಿ ನಡೆದ ಕೇಂದ್ರ ಸರಕಾರದ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಸಮಾರೋಪವು ಬೆಟ್ಟಂಪಾಡಿ ಗ್ರಾಮ ಪಂಚಾಯತ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ ಬೆಟ್ಟಂಪಾಡಿ ಶಾಖೆಯ ವತಿಯಿಂದ ಪಂಚಾಯತ್‌ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ ಅಧ್ಯಕ್ಷತೆ ವಹಿಸಿದರು. ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಂಗನಾಥ ರೈ ಗುತ್ತು, ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷ ವೆಂಕಟ್ರಮಣ ಬೋರ್ಕರ್‌, ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಜಿಲ್ಲಾ ಸಂಯೋಜಕ ಆರ್‌.ಸಿ. ನಾರಾಯಣ ರೆಂಜ, ಬ್ಯಾಂಕ್‌ ಆಫ್‌ ಬರೋಡಾದ ಎಫ್‌ಎಲ್‌ಸಿ ಗೀತಾ, ಬ್ಯಾಂಕ್‌ ಆಫ್‌ ಬರೋಡಾ ಬೆಟ್ಟಂಪಾಡಿ ಶಾಖಾ ಪ್ರಬಂಧಕಿ ಭಾವನಾ, ಗ್ರಾ.ಪಂ. ಉಪಾಧ್ಯಕ್ಷ ಮಹೇಶ್‌ ಕೋರ್ಮಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌, ಆಯುಷ್ಮಾನ್‌ ಕಾರ್ಡ್‌, ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ, ಜೀವನ್‌ ಜ್ಯೋತಿ ಭಿಮಾ ಯೋಜನೆ, ಉಜ್ವಲ ಗ್ಯಾಸ್‌ ಯೋಜನೆ ಹಾಗೂ ಇನ್ನಿತರ ಕೇಂದ್ರ ಸರಕಾರದ ಯೋಜನೆಗಳಖ ಮಾಹಿತಿ ಮತ್ತು ನೋಂದಾವಣಿ ಪ್ರಕ್ರಿಯೆ ನಡೆಸಲಾಯಿತು.

ಸನ್ಮಾನ
ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ  ಯೋಜನೆ ಪಡೆದುಕೊಂಡು ಸಾಧನೆಗೈದ ಕೃಷಿಕರಾದ ಸಂಜೀವ ರೈ ಅರಂಬ್ಯ, ಅನಿತಾ ಕೂವೆಂಜ, ಹಿರಿಯ ನಾಗರಿಕ ಬಿ. ವೆಂಕಟ್ರಾವ್‌, ರುಚಿ ಫುಡ್‌ನ ಮ್ಹಾಲಕ ಸದಾಶಿವ, ಕ್ರೀಡಾ ಕ್ಷೇತ್ರದ ಸಾಧಕರಾದ ಕವನ್‌ ಉಪ್ಪಳಿಗೆ, ಶ್ರಾವಣಿ ಪಿ. ಹಾಗೂ ಜಿ.ಎಂ. ಕೀರ್ತಿಯವರನ್ನು ಬ್ಯಾಂಕ್‌ ಆಫ್‌ ಬರೋಡಾ ವತಿಯಿಂದ ಸನ್ಮಾನಿಸಲಾಯಿತು. ಬೆಟ್ಟಂಪಾಡಿ ಗ್ರಾ.ಪಂ. ವತಿಯಿಂದ ಕೃಷಿ ಪಂಡಿತ ಪುರಸ್ಕೃತರಾದ ತ್ಯಾಂಪ ನಾಯ್ಕ ಕಜೆಯವರ ಪತ್ನಿ ರೇವತಿ ಕಜೆ, ಹಿರಿಯ ನಾಗರಿಕ ರಾಮ ನಾಯ್ಕ್‌ ದೆಯ್ಯರಡ್ಕ, ದ್ವಿತೀಯ ಪಿಯುಸಿಯಲ್ಲಿ ಡಿಸ್ಟ್ರಿಂಕ್ಷನ್‌ ಉತ್ತೀರ್ಣಗೊಂಡ ಅಲ್ಪಸಂಖ್ಯಾತ ವಿದ್ಯಾರ್ಥಿ ಅಬ್ದುಲ್‌ ಅಫ್ರಿದ್‌ರವರನ್ನು ಸನ್ಮಾನಿಸಲಾಯಿತು.
ಬ್ಯಾಂಕ್‌ ಆಫ್‌ ಬರೋಡಾ ಸಂಪನ್ಮೂಲ ವ್ಯಕ್ತಿ ಗೀತಾ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಸೌಮ್ಯ ಸ್ವಾಗತಿಸಿ, ಕಾರ್ಯದರ್ಶಿ ಬಾಬು ನಾಯ್ಕ್‌ ವಂದಿಸಿದರು.
ಬ್ಯಾಂಕ್‌ ಆಫ್‌ ಬರೋಡಾ ಬೆಟ್ಟಂಪಾಡಿ ಶಾಖೆಯ ರಮೇಶ್‌, ಕೇಶವ ಆಚಾರ್ಯ, ಕುಶಾಲಪ್ಪ, ಬ್ಯಾಂಕ್‌ ಮಿತ್ರ ಪ್ರಭಾಕರ ರೈ ಬಾಜುವಳ್ಳಿ, ಗ್ರಾ.ಪಂ. ಸದಸ್ಯರಾದ ಪ್ರಕಾಶ್‌ ರೈ, ವಿನೋದ್‌ ರೈ ಅತಿಥಿಗಳನ್ನು ಗೌರವಿಸಿದರು. ಚಂದ್ರಶೇಖರ ರೈ, ಉಮಾವತಿ, ಮೀನಾಕ್ಷಿ ಮಂಜುನಾಥ್‌, ಸದಾಶಿವ, ಅನಿತಾ ಕೂವೆಂಜರವರು ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here