ಪುತ್ತೂರಿನ ನೂತನ ತಹಶೀಲ್ದಾರ್ ಆಗಿ ಪುರಂದರ ಅಧಿಕಾರ ಸ್ವೀಕಾರ – ಲಂಚ, ಭ್ರಷ್ಠಾಚಾರ ವಿರುದ್ಧದ ಫಲಕ ನೀಡಿ ಸುದ್ದಿಯಿಂದ ಸ್ವಾಗತ

0

ಪುತ್ತೂರು: ಪುತ್ತೂರಿನ ನೂತನ ತಹಶೀಲ್ದಾರ್ ಆಗಿ ಉತ್ತರ ಕನ್ನಡ ಜಿಲ್ಲೆಯ ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ತಹಶೀಲ್ದಾರ್ ಆಗಿದ್ದ ಪುರಂದರರವರು ವರ್ಗಾವಣೆಗೊಂಡು ಜ.31ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಮೂಲತ: ಬೆಳ್ತಂಗಡಿ ನಿವಾಸಿಯಾಗಿರುವ ಪುರಂದರರವರು ಕಾರ್ಕಳ, ಬೈಂದೂರು, ಕುಂದಾಪುರ, ಬಂಟ್ವಾಳ, ಕಡಬ, ಮಂಗಳೂರು, ಬಾಗಲಕೋಟೆ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಬೆಳ್ತಂಗಡಿಯಲ್ಲಿ ಉಪ ತಹಶೀಲ್ದಾರ್ ಆಗಿ, ಮಂಗಳೂರು ಜಿಲ್ಲಾ ಪಂಚಾಯತ್, ಉಡುಪಿ ತಾಲೂಕು ಪಂಚಾಯತ್ ಹಾಗೂ ಮಂಗಳೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿಯೂ ಕರ್ತವ್ಯ ನಿರ್ವಹಿಸಿರುತ್ತಾರೆ.
ಬಂಟ್ವಾಳದಲ್ಲಿ ತಹಶೀಲ್ದಾರ್ ಆಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು 22,೦೦೦ 94 ಸಿ ಹಕ್ಕುಪತ್ರ ವಿತರಿಸುವ ಮೂಲಕ ರಾಜ್ಯದಲ್ಲಿ ಪ್ರಥಮ ಸ್ಥಾನ ಹಾಗೂ ಕಾರ್ಕಳದಲ್ಲಿ ತಹಶೀಲ್ದಾರ್ ಆಗಿರುವ ಅವಧಿಯಲ್ಲಿ ಭೂಮಿ ನಿರ್ವಹಣೆಯಲ್ಲಿ ರಾಜ್ಯದಲ್ಲಿ 3 ಬಾರಿ ಪ್ರಥಮ ಹಾಗೂ 2 ಬಾರಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಲಂಚ, ಭ್ರಷ್ಠಾಚಾರ ವಿರುದ್ಧದ ಫಲಕ ನೀಡಿ ಸುದ್ದಿಯಿಂದ ಸ್ವಾಗತ:
ನೂತನ ತಹಶೀಲ್ದಾರ್ ಪುರಂದರರವರನ್ನು ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಜನಾಂದೋಲ ವೇದಿಕೆಯಿಂದ ನಡೆಸುತ್ತಿರುವ ಲಂಚ, ಭ್ರಷ್ಟಾಚಾರ ವಿರುದ್ಧ ಜಾಗೃತಿಯ ಫಲಕ ನೀಡಿ ಸ್ವಾಗತಿಸಲಾಯಿತು. ವರದಿಗಾರರಾದ ಯತೀಶ್ ಉಪ್ಪಳಿಗೆ ಹಾಗೂ ವಸಂತ ಸಾಮೆತ್ತಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here