ಪುತ್ತೂರು:ಸಂಟ್ಯಾರು ಅಪಾಯಕಾರಿ ರಸ್ತೆ ದುರಸ್ತಿ ಕಾರ್ಯ ಫೆ.3ರಿಂದ ಆರಂಭಗೊಳ್ಳಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಸಂಟ್ಯಾರ್ ನಿಂದ ಪಾಣಾಜೆಗೆ ತೆರಳುವ ರಸ್ತೆಯ ಬಳಕ್ಕ ಎಂಬಲ್ಲಿರುವ ಸೇತುವೆಯ ಬಳಿ ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದೆ. ರಸ್ತೆ ನಿರ್ಮಾಣದ ವೇಳೆ ಅಪಾಯಕಾರಿ ಉಬ್ಬುಗಳನ್ನು ತೆರವು ಮಾಡದೆ ಇರುವ ಕಾರಣ ಈ ಭಾಗದಲ್ಲಿ ಸಂಚರಿಸುವ ವಾಹನಗಳು ರಸ್ತೆಯ ಪಕ್ಕಕ್ಕೆ ತೆರಳಿ ಪಲ್ಟಿಯಾಗುತ್ತಿವೆ. ಇದೇ ಸ್ಥಳದಲ್ಲಿ ವಾಹನ ಅಪಘಾತದಿಂದ ಮೂರು ಜೀವಗಳು ಬಲಿಯಾಗಿದೆ. ಮೂರುದಿನಗಳ ಹಿಂದೆ ರಿಕ್ಷಾವೊಂದು ಪಲ್ಟಿಯಾಗಿ ವ್ಯಕ್ತಿ ಮೃತಪಟ್ಟಿದ್ದು, ಕಳೆದ ವರ್ಷ ನಿಡ್ಪಳ್ಳಿ ಗ್ರಾಪಂ ಸದಸ್ಯರ ಕಾರೊಂದು ಪಲ್ಟಿಯಾಗಿ ಮೃತಪಟ್ಟಿದ್ದರು.
ಅಪಾಯಕಾರಿ ರಸ್ತೆಯನ್ನು ದುರಸ್ಥಿ ಮಾಡಿಸುವಂತೆ ಸಾರ್ವಜನಿಕರು ಶಾಸಕ ಅಶೋಕ್ ರೈಯವರಿಗೆ ಮನವಿ ಮಾಡಿದ್ದರು.ಈ ಕುರಿತು ತಮ್ಮ ಮನವಿಗೆ ಇಲಾಖೆ ಸ್ಪಂದಿಸಿದ್ದು ಫೆ.3ರಂದು ದುರಸ್ಥಿ ಕಾರ್ಯ ನಡೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ.