





ಪುತ್ತೂರು: ಪುತ್ತೂರು ಬಸ್ ನಿಲ್ದಾಣ ಸಮೀಪದ ಪ್ಲವರ್ ಮಾರ್ಕೆಟ್ ಎದುರು ಎರಡು ತಂಡಗಳು ಹೊಡೆದಾಟ ನಡೆಸಿದ ಘಟನೆ ಫೆ.1 ರಾತ್ರಿ ನಡೆದಿದೆ.



ಪುತ್ತೂರು ಬಸ್ ನಿಲ್ದಾಣ ಸಮೀಪದ ಗಾಂಧಿಕಟ್ಟೆ ಸಮೀಪ ಹಣ್ಣು ಹಂಪಲು ವಿತರಣೆಯ ಪಿಕಪ್ ವಾಹನದವರು ಮತ್ತು ಮಾರುತಿ 800 ಕಾರಿನಲ್ಲಿದ್ದವರ ನಡುವೆ ಪ್ಲವರ್ ಮಾರ್ಕೆಟ್ ಎದುರು ನಡುರಸ್ತೆಯಲ್ಲೇ ಹೊಡೆದಾಟ ನಡೆದಿದೆ. ಹೊಡೆದಾಟದ ವಿಡಿಯೋ ವೈರಲ್ ಆಗಿದ್ದು, ಯಾವ ಕಾರಣಕ್ಕೆ ಈ ಹೊಡೆದಾಟ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಹೊಡೆದಾಟ ನಡುರಸ್ತೆಯವರೆಗೂ ತಲುಪಿದಾಗ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಆಗಿದೆ. ನಂತರ ಸ್ಥಳೀಯ ಅಂಗಡಿಯವರು ಬಂದು ಎಚ್ಚರಿಕೆ ಕೊಟ್ಟ ನಂತರ ಎರಡು ತಂಡಗಳು ಜಾಗ ಖಾಲಿ ಮಾಡಿವೆ.













