ಪುತ್ತೂರು: ಭಾರತ ಸಂಸ್ಕೃತಿ ಪ್ರತಿಷ್ಠಾ ಬೆಂಗಳೂರು ಇವರು ನಡೆಸಿದ ರಾಮಾಯಣ ಪರೀಕ್ಷೆ-2023ರಲ್ಲಿ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಚಿನ್ನದ ಪದಕ, ಪ್ರಶಸ್ತಿ ಪಡೆದು ಕೊಂಡಿದ್ದಾರೆ. ವಿದ್ಯಾರ್ಥಿಗಳ ಪರೀಕ್ಷೆಗೆ ದ್ವಾರಕಾ ಪ್ರತಿಷ್ಠಾನ ಪುತ್ತೂರು ಪ್ರಾಯೋಜಕತ್ವ ಮಾಡಿದ್ದರು.
ಕೊಂಬೆಟ್ಟು ಶಾಲೆಯ 253 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಲತಾ ಎಂ.ಕೆ (76 ಪ್ರ), ರಿತಿಕಾ ಬಿ.ಕೆ (72 ದ್ವಿ), ಸಿಂಚನಾ ಪಿ.ಜಿ (70 ತೃ), ಸ್ಥಾನವನ್ನು ಪಡೆದು ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಗಳಿಸಿದ್ದಾರೆ. ಸಂಸ್ಥೆಯ ಉಪಪ್ರಾಂಶಪಾಲ ವಸಂತ ಮೂಲ್ಯ ಪಿ ಅವರು ಪ್ರಶಸ್ತಿ ಪತ್ರ ವಿತರಿಸಿದರು. ಸಂಸ್ಕೃತ ಶಿಕ್ಷಕ ನಾಗರಾಜ ರಾಮಾಯಣ ಪರೀಕ್ಷೆಯ ಮಾರ್ಗದರ್ಶಕರಾಗಿದ್ದರು.