ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶ ಇತಿಹಾಸ ಸೃಷ್ಟಿಸಲಿದೆ-ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು : ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವವು ಇತಿಹಾಸವನ್ನು ಸೃಷ್ಟಿಸಲಿದೆ.ಕ್ಷೇತ್ರದ ಎಲ್ಲಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಯುವ ಸಮೂಹ ಹಾಗೂ ಭಕ್ತ ಸಮೂಹದ ನಿರಂತರ ಶ್ರಮ ಇಲ್ಲಿ ಎದ್ದು ಕಾಣುತ್ತಿದೆ ಎಂದು ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ,ಪುತ್ತೂರು ಶಾಸಕ ಅಶೋಕ್ ಕುಮಾರ್ರೈ ಹೇಳಿದರು.
ಅವರು ಮಾಡಾವು-ಬೆಳ್ಳಾರೆ ರಸ್ತೆಯ ಅಂಕತಡ್ಕದಿಂದ ಸ್ವಲ್ಪ ಮುಂದಕ್ಕೆ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ನಿರ್ಮಾಣಗೊಂಡ ನೂತನ ಮಹಾದ್ವಾರ ಹಾಗೂ ದೇವಸ್ಥಾನದ ಸಂಪರ್ಕ ರಸ್ತೆಯನ್ನು ಉದ್ಘಾಟಿಸಿ ಬಳಿಕ ದೇವಸ್ಥಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ನಳೀಲು ಕ್ಷೇತ್ರದ ಬ್ರಹ್ಮಕಲಶೋತ್ಸವದ ಆಮಂತ್ರಣವನ್ನು ಆರು ಸಾವಿರ ಮನೆಗಳಿಗೆ ಹೋಗಿ ವಿತರಣೆ ಮಾಡಿದ್ದಾರೆ ಎಂದರೆ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಇದು ಮುನ್ನುಡಿಯಾಗಿದೆ.ದೇವಸ್ಥಾನದಲ್ಲಿ ಅಭಿವೃದ್ದಿ ಕಾರ್ಯಗಳು ವೇಗವಾಗಿ ನಡೆದಿದೆ ಇದಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕೃಪಾಕಟಾಕ್ಷವೇ ಕಾರಣ ಎಂದರು.
ದೇವಸ್ಥಾನದ ಬ್ರಹ್ಮಕಲಶೋತ್ಸವ ಯಶಸ್ವಿ ನಿಟ್ಟಿನಲ್ಲಿ ಊರಿನ 200 ಜನರ ತಂಡ ಸಿದ್ದವಾಗಿರಬೇಕು.ಬೆಳಗ್ಗಿನ ಕಾರ್ಯಕ್ರಮದಲ್ಲಿ ಪರವೂರಿನ ಭಕ್ತಾದಿಗಳಿಗೆ ಕರ ಸೇವೆ ಮಾಡಲು ಅವಕಾಶ ನೀಡಿದರೆ ಊರಿನ ಭಕ್ತಾದಿಗಳು ರಾತ್ರಿಯ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ಪಾಲ್ಗೊಳ್ಳುವ ವ್ಯವಸ್ಥೆ ಮಾಡಿದರೆ ಉತ್ತಮ.ದೇವಸ್ಥಾನಗಳಿಗೆ ಬರುವ ಭಕ್ತಾದಿಗಳನ್ನು ಆದರ ಪೂರ್ವಕವಾಗಿ ಸತ್ಕರಿಸಬೇಕು.ಎಲ್ಲರನ್ನೂ ನಗುಮುಖದಿಂದ ಸತ್ಕರಿಸಬೇಕು.ವಾಹನ ಪಾರ್ಕಿಂಗ್,ದೇವತಾ ಕಾರ್ಯ,ಅನ್ನಸಂತರ್ಪಣೆ, ಸ್ವಚ್ಚತೆ ,ಸಾಂಸ್ಕೃತಿಕ ,ಸಭಾ ಕಾರ್ಯಕ್ರಮಗಳು ವ್ಯವಸ್ಥಿತ ರೀತಿಯಲ್ಲಿ ನಡೆಯುವ ನಿಟ್ಟಿನಲ್ಲಿ ಆಯಾ ಸಮಿತಿಯ ಪದಾಧಿಕಾರಿಗಳು ಶ್ರಮಿಸಬೇಕು ಎಂದರು.
ಪೂರ್ಣ ರೀತಿಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂಬ ನೋವಿದೆ
ಅಧಿವೇಶನ ನಡೆಯುವ ಕಾರಣ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಪೂರ್ಣ ರೀತಿಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂಬ ನೋವಿದೆ.ಆದರೂ ಮೂರು ದಿನಗಳಾದರೂ ಪಾಲ್ಗೊಳ್ಳಬೇಕೆಂದು ನಿರ್ಧರಿಸಿದ್ದೇನೆ.ತನ್ನಿಂದ ಆಗುವ ಎಲ್ಲಾ ಸೇವೆಗಳನ್ನು ಕ್ಷೇತ್ರದಲ್ಲಿ ಮಾಡಲಾಗುವುದು ಎಂದರು.
ದೇವಸ್ಥಾನದ ಸಂಪರ್ಕರಸ್ತೆಯ ಕಾಮಗಾರಿ ನಿರ್ವಹಣೆ ಮಾಡಿದ ಗುತ್ತಿಗೆದಾರ ರಾಜೇಂದ್ರ ಪ್ರಸಾದ್ಶೆಟ್ಟಿ ಎಣ್ಮೂರುಗುತ್ತು ಅವರನ್ನು ದೇವಸ್ಥಾನದ ವತಿಯಿಂದ ಸಮ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ, ರಾಜೇಂದ್ರ ಪ್ರಸಾದ್ಶೆಟ್ಟಿ ಎಣ್ಮೂರುಗುತ್ತು ಅವರು ,ಶಾಸಕರಾದ ಅಶೋಕ್ಕುಮಾರ್ರೈ ಅವರ 20 ಲಕ್ಷ ರೂ.ಗಳಲ್ಲಿ ದೇವಸ್ಥಾನದ ರಸ್ತೆಯನ್ನು ಅಭಿವೃದ್ದಿ ಮಾಡಲಾಗಿದೆ.ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ್ಕುಮಾರ್ರೈ ಅವರ ಕೋರಿಕೆಯಂತೆ ಕ್ಲಪ್ತಸಮಯದಲ್ಲಿ ರಸ್ತೆ ಕಾಂಕ್ರೀಟಿಕರಣ ಮಾಡಲಾಗಿದೆ.ಇದೊಂದು ದೇವರ ಸೇವೆಯೆಂದು ಅರಿತು ಕೆಲಸ ನಿರ್ವಹಿಸಿದ್ದೇನೆ ಎಂದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ಕುಮಾರ್ರೈ ಅವರು ಮಾತನಾಡಿ, ದೇವಸ್ಥಾನದಲ್ಲಿ ಎಲ್ಲಾ ಕಾರ್ಯಗಳು ದೇವರ ಸಂಕಲ್ಪದಂತೆ ನಡೆಯುತ್ತಿದೆ.ನಂಬಿದ ಭಕ್ತರನ್ನು ನಳೀಲು ಶ್ರೀ ಸುಬ್ರಹ್ಮಣ್ಯ ದೇವರು ಎಂದಿಗೂ ಕೈ ಬಿಡುವುದಿಲ್ಲ.ಕ್ಷೇತ್ರದ ಬೆಳವಣಿಗೆಯಲ್ಲಿ ಭಕ್ತಾದಿಗಳೂ ನಿರಂತರವಾಗಿ ಸಹಕಾರ ನೀಡುತ್ತಿದ್ದಾರೆ.20 ವರ್ಷಗಳ ಬಳಿಕ ಮತ್ತೆ ಶ್ರೀಕ್ಷೇತ್ರವು ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗಿದೆ.ಫೆ.6 ರಂದು ಚಪ್ಪರ ಮುಹೂರ್ತ ನಡೆಯಲಿದೆ.ಎಲ್ಲಾ ಭಕ್ತಾದಿಗಳು ಫೆ.17ರಿಂದ ಫೆ.24ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.
ವೇದಿಕೆಯಲ್ಲಿ ಕೊಳ್ತಿಗೆ ಗ್ರಾ.ಪಂ.ಸದಸ್ಯೆ ಶುಭಲತಾ ಜೆ. ರೈ , ಪೆರುವೋಡಿ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ಬಿ.ದಯಾಕರ ಆಳ್ವ, ಮಣಿಕ್ಕಾರ-ಪಾಲ್ತಾಡು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಪಾಲ್ತಾಡು ವಿನೋದ್ರೈ ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸ್ಮರಣ ಸಂಚಿಕೆಯ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಅರುಣ್ಕುಮಾರ್ರೈ ನಳೀಲು ಉಪಸ್ಥಿತರಿದ್ದರು.ದೇವಸ್ಥಾನದ ಮೊಕ್ತೇಸರರಾದ ಎಸ್.ನಾರಾಯಣ ರೈ ಮೊದೆಲ್ಕಾಡಿ,ಎನ್.ಚಂದ್ರಶೇಖರ್ರೈ ನಳೀಲು,ಮೋಹನ್ದಾಸ್ರೈ ನಳೀಲು,ಕಿಶೋರ್ಕುಮಾರ್ರೈ ನಳೀಲು,ಸತೀಶ್ರೈ ನಳೀಲು,ಪ್ರವೀಣ್ಕುಮಾರ್ರೈ ನಳೀಲು,ಹರಿಕೃಷ್ಣ ಭಟ್ಬರೆಮೇಲು,ಡಾ.ವೀಣಾ ಸಂತೋಷ್ರೈ ಅತಿಥಿಗಳನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ವಿಲಾಸ್ರೈ ಪಾಲ್ತಾಡು, ಸಂಜೀವ ಗೌಡ ಪಾಲ್ತಾಡಿ,ರಘುನಾಥ ರೈ ನಡುಕೂಟೇಲು,ಪ್ರಧಾನ ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ,ಜತೆ ಕಾರ್ಯದರ್ಶಿ ಡಾ.ಶುಭ್ದೀಪ್ರೈ ಕೋಲ್ಪೆಗುತ್ತು ,ಕೋಶಾಧಿಕಾರಿ ಡಾ.ಸುಚೇತಾ ಜೆ.ಶೆಟ್ಟಿ ,ಸ್ವಾಗತ ಸಮಿತಿ ಸಂಚಾಲಕ ಸುನಿಲ್ರೈ ಪಾಲ್ತಾಡು,ಸಹಸಂಚಾಲಕರಾದ ಗಿರಿಶಂಕರ ಸುಲಾಯ,ರವಿಪ್ರಸಾದ್ಆಳ್ವ,ಆಮಂತ್ರಣಾ ವಿತರಣಾ ಸಮಿತಿ ಸಂಚಾಲಕ ಸುಂದರ ಪೂಜಾರಿ ಮಣಿಕ್ಕರ,ಅತಿಥಿ ಸತ್ಕಾರ ಸಮಿತಿಯ ರಾಮಣ್ಣ ರೈ ಬಾಕಿಜಾಲು,ಶ್ರೀಧರ ಘವಡ ಅಂಗಡಿಹಿತ್ಲು,ಹೊರೆಕಾಣಿಕೆ ಸಮಿತಿಯ ತಾರನಾಥ ಬೊಳಿಯಾಲ,ಜಗನ್ನಾಥ ರೈ ಮಣಿಕ್ಕರ,ಗಣೇಶ್ಅಮೆಚ್ಚೋಡು,ಪ್ರಚಾರ ಸಮಿತಿಯ ಸುಧಾಕರ ರೈ ಹೊಸಮನೆ,ಅಲಂಕಾರ ಸಮಿತಿಯ ದೇವದಾಸ್ರೈ,ಜಯರಾಮ ರೈ ಬರೆಮನೆ,ಭಜನಾ ಸೇವಾ ಸಮಿತಿಯ ಧನಂಜಯ ಕಾಯರಗುರಿ,ಉಗ್ರಾಣ ಸಮಿತಿ ಸಂಚಾಲಕ ಜಗನ್ನಾಥ ರೈ ಮಣಿಕ್ಕರ,ಉಮೇಶ್ನಾಯ್ಕ ಮರುವೇಲು,ರಮಾನಾಥ ಬೊಳಿಯಾಲ,ಕಾರ್ಯಾಲಯ ಸಮಿತಿಯ ಸುರೇಶ್ರೈ ವಿಟ್ಲ,ಕೊಲ್ಯ,ಅಶಿತ್ಶೆಟ್ಟಿ ಉಬರಡ್ಕ,ಬಾಲಕೃಷ್ಣ ಗೌಡ ಬಾರ್ತಿಕುಮೇರು, ಹರೀಶ್ನಾಯ್ಕ್ಅಜೇಯ ನಗರ,ಸಭಾ ಕಾರ್ಯಕ್ರಮ ನಿರ್ವಹಣೆಯ ಗುರುಕಿರಣ್ಬೊಳಿಯಾಲ,ಸ್ವಚತಾ ಸಮಿತಿ ಉದಯ ಗೌಡ,ಲೀಲಾ ಮಾಧವ,ಸ್ವಯಂ ಸೇವಕ ಸಮಿತಿಯ ವಿದ್ಯಾಧರ ಗೌಡ,ಅಮರನಾಥ ರೈ ಬಾಕಿಜಾಲು,ಮಹಿಳಾ ಸ್ವಯಂ ಸೇವಾ ಸಮಿತಿಯ ಇಂದಿರಾ ಅರುಣ್ರೈ ,ಕವಿತಾ ಪ್ರವೀಣ್ರೈ,ಪುಷ್ಪಲತಾ ಸತೀಶ್ರೈ ಹಾಗೂ ವಿವಿಧ ಸಮಿತಿ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ಕುಮಾರ್ರೈ ನಳೀಲು ಸ್ವಾಗತಿಸಿ, ಪ್ರವೀಣ್ರೈ ನಡುಕೂಟೇಲು ವಂದಿಸಿದರು.ಪ್ರವೀಣ್ಚೆನ್ನಾವರ ಕಾರ್ಯಕ್ರಮ ನಿರೂಪಿಸಿದರು.
ಮಹಾದ್ವಾರವನ್ನು ಸೇವಾ ರೂಪದಲ್ಲಿ ಸಮರ್ಪಿಸಿದ ಮಂಗಳೂರು ಸಾಗರ್ಕನ್ ಸ್ಟ್ರಕ್ಷನ್ನ ಗಿರಿಧರ ಶೆಟ್ಟಿ
ದೇವಸ್ಥಾನಕ್ಕೆ ನೂತನ ಮಹಾದ್ವಾರ ನಿರ್ಮಾಣವಾಗಬೇಕೇಂಬ ಆಡಳಿತ ಮಂಡಳಿಯ ಕನಸಿಗೆ ಕೈ ಜೋಡಿಸಿದ್ದು ಮಂಗಳೂರು ಸಾಗರ್ಕನ್ ಸ್ಟ್ರಕ್ಷನ್ನ ಗಿರಿಧರ ಶೆಟ್ಟಿ ಅವರು.ಸಾಮಾಜಿಕ ಹಾಗೂ ಧಾರ್ಮಿಕ ,ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಚತುರತೆಯಿಂದ ಕಾರ್ಯ ನಿರ್ವಹಿಸುತ್ತಿರುವ ಮಂಗಳೂರು ಸಾಗರ್ಕನ್ ಸ್ಟ್ರಕ್ಷನ್ನ ಗಿರಿಧರ ಶೆಟ್ಟಿ ಅವರು ಶ್ರೀಕ್ಷೇತ್ರಕ್ಕೆ ಮಹಾದ್ವಾರವನ್ನು ಸೇವಾ ರೂಪದಲ್ಲಿ ನಿರ್ಮಿಸಿಕೊಟ್ಟಿದ್ದಾರೆ.ಇದರ ನಿರ್ಮಾಣ ಕಾಮಗಾರಿಯನ್ನು ಪುತ್ತೂರಿನ ಕುಂಕುಮ್ಅಸೋಸಿಯೇಟ್ಸ್ನವರು ಕ್ಲಪ್ತ ಸಮಯದಲ್ಲಿ ನಿರ್ವಹಿಸಿದ್ದಾರೆ.
ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯಲ್ಲಿ ನೀಡಿದ ಭರವಸೆಯಂತೆ ಶಾಸಕ ಆಶೋಕ್ಕುಮಾರ್ರೈ ಅವರು ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಂಪರ್ಕ ರಸ್ತೆಯ ಅಭಿವೃದ್ದಿಗೆ 20 ಲಕ್ಷ ರೂ.ಅನುದಾನ ನೀಡಿದರು.ಗುತ್ತಿಗೆದಾರರಾದ ರಾಜೇಂದ್ರ ಪ್ರಸಾದ್ಶೆಟ್ಟಿ ಎಣ್ಮೂರು ಗುತ್ತು ಅವರು ಕ್ಲಪ್ತ ಸಮಯದಲ್ಲಿ ರಸ್ತೆಯ ಕಾಮಗಾರಿ ಪೂರ್ಣಗೊಳಿಸಿದ್ದಾರೆ.
ಫೆ.6ರಂದು ಚಪ್ಪರ ಮುಹೂರ್ತ
ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನಲೆಯಲ್ಲಿ ಫೆ.6ರಂದು ಬೆಳಿಗ್ಗೆ 10 ಗಂಟೆಗೆ ಚಪ್ಪರ ಮುಹೂರ್ತ ನಡೆಯಲಿದೆ.ಭಕ್ತಾದಿಗಳು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ.