ಬೆಳ್ತಂಗಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ ಆಚರಣೆ ಫೆಬ್ರವರಿ 11ರ ಆದಿತ್ಯವಾರ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪರವಾಗಿ ಪುತ್ತೂರಿನ ಶಾಸಕರಾದ ಅಶೋಕ್ ರೈ ಅವರಿಗೆ ಆಮಂತ್ರಣ ಪತ್ರಿಕೆಯನ್ನು ಕೊಟ್ಟು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅತಿ ವಂದನೀಯ ಜೋಸ್ ವಲಿಯಪರಂಭಿಲ, ಕೆ ಎಸ್ ಎಂ ಸಿ ಎ ಮಾಜಿ ಅಧ್ಯಕ್ಷರು ಹಾಗೂ ಕ್ರೈಸ್ತ ಅಭಿವೃದ್ಧಿ ಸಮಿತಿ ಮಾಜಿ ಸದಸ್ಯರಾದ ಸೇಬಾಷ್ಟಿಯನ್ ಕೆ.ಕೆ, ವಂದನೀಯ ಫಾ. ರೋಷನ್ ಪುದುಶೇರಿ, ಕೆ ಎಸ್ ಎಂ ಸಿ ಎ ನಿರ್ದೇಶಕರು ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂದನೀಯ ಫಾ. ಶಾಜಿ ಮಾತ್ಯು ಜೊತೆಯಲ್ಲಿದ್ದರು.