ಪುತ್ತೂರು: ಪಾಣಾಜೆ ಗ್ರಾಮದ ಅರ್ಲಪದವು ಅಂಗನವಾಡಿಯಲ್ಲಿ ಸುಮಾರು 33 ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸರಸ್ವತಿ ಜಿ ಇವರಿಗೆ ಬೀಳ್ಕೊಡುಗೆ ಸಮಾರಂಭವು ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಆಶಾರವರ ಅಧ್ಯಕ್ಷತೆಯಲ್ಲಿ ಜರಗಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಾಣಾಜೆ ವಲಯ ಮೇಲ್ವಿಚಾರಕಿ ನಾಗರತ್ನ, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ.ಹಾಜಿ.ಯಸ್.ಅಬೂಬಕ್ಕರ್ ಆರ್ಲಪದವು,ಕಾವ್ಯ ಮತ್ತು ಮಂಜುಶ್ರೀ ಮಾತನಾಡಿ ಶುಭಹಾರೈಸಿದರು .ಸ್ತ್ರೀಶಕ್ತಿ ಗುಂಪಿನ ಪರವಾಗಿ ಶಾಲು ಹೊದಿಸಿ ಹೂವಿನ ಹಾರ ಸ್ಮರಣಿಕೆಯೊಂದಿಗೆ ಚಿನ್ನದ ಉಂಗುರ ನೀಡಿ ಗೌರವಿಸಿದರು.
ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ.ಹಾಜಿ ಎಸ್ ಅಬೂಬಕರ್ ಆರ್ಲಪದವು ಕನ್ನಡ ಪೇಟ ಧರಿಸಿ ಶಾಲು ಹಾಕಿ ಸ್ಮರಣಿಕೆ , ಪಾಣಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಜನಪ್ರಿಯ ಸ್ಮರಣಿಕೆ ನೀಡಿ ಹಾಗೂ ಪೌಲಿನ್ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಹಾಯಕಿ ರೇವತಿ ಮತ್ತು ಮಾಜಿ ಸಹಾಯಕಿ ಸರಸ್ವತಿಯವರನ್ನು ಗೌರವಿಸಲಾಯಿತು.ಪಂಚಾಯತ್ ಸದಸ್ಯೆ ಸುಲೋಚನಾ, ಮಾಜಿ ಸದಸ್ಯರಾದ ಮಾಧವ ಮಣಿಯಾಣಿ, ಎಂಬಿಕೆ ನಮಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಶಾ ಕಾರ್ಯಕರ್ತೆ ಉಷಾ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಗ್ರೇಸಿ ಡಿ ಸೋಜ ವಂದಿಸಿದರು.ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.