ಪುತ್ತೂರು: ಪುತ್ತೂರು ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟ್ ವತಿಯಿಂದ 19ನೇ ಕಾರ್ಯಕ್ರಮವಾಗಿ ಬಡ ರೋಗಿಗಳಿಗೆ, ಅಶಕ್ತರಿಗೆ, ಕ್ಯಾನ್ಸರ್ ಪೀಡಿತ ಹಾಗೂ ಆಯ್ದ ಬಡ ಕುಟುಂಬಗಳಿಗೆ, ದಾನಿಗಳ ಸಹಕಾರದಿಂದ ದಿನಸಿ ಸಾಮಾಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಫೆ.4ರಂದು ಪುತ್ತೂರಿನ ಲಯನ್ಸ್ ಕ್ಲಬ್ ಹಾಲ್ ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಶಿಕ್ಷಕಿ ವೇದಾವತಿ, ಸುಧಾ ಮೂರ್ತಿಯವರ ಹಿತನುಡಿಯನ್ನು ಉಲ್ಲೇಖಿಸಿ ಮಾತನಾಡಿ, ಗುರಿ ಇದ್ದು ಪ್ರಯತ್ನಿಸದೆ ಇದ್ದರೆ ಅದು ಬರಿ ಕನಸು, ಗುರಿ ಇಲ್ಲದೆ ಪ್ರಯತ್ನಿಸುವುದು ಬರಿ ಟೈಮ್ ಪಾಸ್, ಗುರಿ ಮತ್ತು ಪ್ರಯತ್ನ ಇದ್ದರೆ ನೀವು ಜಗತ್ತನ್ನೇ ಗೆದ್ದಂತೆ ಎಂದು ಹೇಳಿ ಸಂಸ್ಥೆಯ ಕಾರ್ಯಕ್ಕೆ ಶುಭಹಾರೈಸಿದರು. ಇನ್ನೋರ್ವ ಅತಿಥಿಯಾಗಿ ಆರ್ಯಾಪು ಗ್ರಾಮ ಕೃಷಿ ಪತ್ತಿನ ಸಹಕಾರಿ ಸಂಘದ ವ್ಯವಸ್ಥಾಪಕ ಅಜಿತ್ ರೈ ಭಾಗವಹಿಸಿದ್ದರು.
ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟಿನ ಅಧ್ಯಕ್ಷೆ ಸುಮಿತ್ರ.ಎಸ್ ನಿರಂತರವಾಗಿ ನೆರವು ನೀಡುತ್ತಿರುವ ದಾನಿಗಳಿಗೆ ಕೃತಜ್ಙತೆ ಅರ್ಪಿಸಿದರು. ಸಂಚಾಲಕರಾದ ಅವಿನಾಶ್, ಕೋಶಾಧಿಕಾರಿ ಕಾವ್ಯ, ಸದಸ್ಯರಾದ ಶಾಂತಿ, ಚೈತ್ರ ಉಪಸ್ಥಿತರಿದ್ದರು. ಗೌರವ ಸಲಹೆಗಾರ ಶಿವಶಂಕರ್ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.