





ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯತ್‌ನ ಶೇ.25ರ ನಿಧಿಯಿಂದ ಗ್ರಾಮ ಪಂಚಾಯತ್‌ನ ನೆಲ್ಯಾಡಿ 2ನೇ ವಾರ್ಡ್‌ನ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಕ್ಕೆ ಸೇರಿದ ಸುಮಾರು 30 ಕುಟುಂಬಗಳಿಗೆ ಟೇಬಲ್ ಹಾಗೂ ಚಯರ್ ವಿತರಣೆ ಕಾರ್ಯಕ್ರಮ ಫೆ.6ರಂದು ನೆಲ್ಯಾಡಿ ಗಾಂಧಿಮೈದಾನದ ಗೆಳೆಯರ ಬಳಗದ ರಂಗ ವೇದಿಕೆಯಲ್ಲಿ ನಡೆಯಿತು.



2ನೇ ವಾರ್ಡ್‌ನ ಸದಸ್ಯರಾದ ಮಹಮ್ಮದ್ ಇಕ್ಬಾಲ್ ಅಧ್ಯಕ್ಷತೆ ವಹಿಸಿದ್ದರು. 2ನೇ ವಾರ್ಡ್‌ನ ಸದಸ್ಯರು, ಗ್ರಾ.ಪಂ.ಉಪಾಧ್ಯಕ್ಷರೂ ಆದ ರೇಶ್ಮಾ ಶಶಿ, ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಅರಣ್ಯ ಇಲಾಖೆಯ ರವಿಚಂದ್ರ ಪಡುಬೆಟ್ಟು, ಉದ್ಯಮಿ ಕೆ.ಪಿ. ತೋಮಸ್, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ನೆಲ್ಯಾಡಿ ಗ್ರಾ.ಪಂ.ಕಾರ್ಯದರ್ಶಿ ಅಂಗು, ಪಡುಬೆಟ್ಟು ಸರಕಾರಿ ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ರಸಾದ್ ಬೀದಿಮಜಲು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.














