ಫೆ.11:ಡೊನ್ ಬೊಸ್ಕೊ ಕ್ಲಬ್‌ನಿಂದ ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ‘ಸಿಪಿಎಲ್ 2024, ಸೀಸನ್ 3 ಕ್ರಿಕೆಟ್-ಕ್ಷಣಗಣನೆ ಆರಂಭ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್‌ನ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯ ವತಿಯಿಂದ ಪುತ್ತೂರು ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ ‘ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) 2024-ಸೀಸನ್ 3’ ಫೆ.11 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಲಿದ್ದು, ಕ್ರಿಕೆಟ್ ಪಂದ್ಯಾಟಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ.


ಡೊನ್ ಬೊಸ್ಕೊ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ಆಂಟನಿ ಒಲಿವೆರಾರವರು ಬೆಳಿಗ್ಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಬನ್ನೂರು ಸಂತ ಅಂತೋನಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೋನ್ ಮಸ್ಕರೇನ್ಹಸ್, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯ ಆಂಬ್ರೋಸ್ ಡಿ’ಸೋಜರವರು ಭಾಗವಹಿಸಲಿದ್ದಾರೆ.
ಸಂಜೆ ನಡೆಯುವ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಲೋಹಿತ್ ಅಜಯ್ ಮಸ್ಕರೇನ್ಹಸ್, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಡೊನಾಲ್ಡ್ ನೀಲೇಶ್ ಕ್ರಾಸ್ತಾ, ಬನ್ನೂರು ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋ, ಉದ್ಯಮಿ ಹಾಗೂ ಡೊನ್ ಬೊಸ್ಕೊ ಕ್ಲಬ್ ಹಿರಿಯ ಸದಸ್ಯ ಜೋನ್ ಕುಟಿನ್ಹಾ, ದರ್ಬೆ ಸೈಂಟ್ ಲಾರೆನ್ಸ್ ಸಾ ಮಿಲ್ ಮಾಲಕ ಸಿಲ್ವೆಸ್ಟರ್ ಡಿ’ಸೋಜ, ಸೋಜಾ ಮೆಟಲ್ ಮಾರ್ಟ್ ಮಾಲಕ ದೀಪಕ್ ಮಿನೇಜಸ್, ಮಂಗಳೂರು ರೋವ್ ಎಂಟರ್‌ಪ್ರೈಸಸ್‌ನ ರೋಹನ್ ಡಾಯಸ್, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟರವರು ಭಾಗವಹಿಸಲಿರುವರು.


17 ಪಂದ್ಯಗಳು:
ಲೀಗ್, ಶೆಮಿಫೈನಲ್, ಫೈನಲ್ ಹೀಗೆ ಒಟ್ಟು 17 ಪಂದ್ಯಗಳು ಜರಗಲಿದ್ದು, ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಗ್ರೌಂಡ್ ‘ಎ’ ಹಾಗೂ ಗ್ರೌಂಡ್ ‘ಬಿ’ ಎಂಬಂತೆ ಪಿಚ್ ಅನ್ನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋರವರ ನೇತೃತ್ವದಲ್ಲಿ ನಿರ್ಮಿಸಲಾಗುತ್ತಿದ್ದು, ಕ್ರಿಕೆಟ್ ಪ್ರಿಯರಿಗೆ ಏಕಕಾಲದಲ್ಲಿ ಎರಡು ಪಂದ್ಯಗಳನ್ನು ವೀಕ್ಷಣೆ ಮಾಡುವ ಸುವರ್ಣಾವಕಾಶವನ್ನು ಸಂಘಟಕರು ಒದಗಿಸಿಕೊಟ್ಟಿದ್ದಾರೆ.


ಬಹುಮಾನಗಳ ಆಗರ:
ಈ ಟೂರ್ನಿಯಲ್ಲಿ ಚಾಂಪಿಯನ್ ತಂಡಕ್ಕೆ ರೂ.25000/-ಹಾಗೂ ಸಿಪಿಎಲ್ ಟ್ರೋಫಿ, ರನ್ನರ‍್ಸ್ ವಿಜೇತ ತಂಡಕ್ಕೆ ರೂ.20000/-ಹಾಗೂ ಸಿಪಿಎಲ್ ಟ್ರೋಫಿ ಜೊತೆಗೆ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟರ್, ಬೆಸ್ಟ್ ಅಲೌರೌಂಡರ್, ಸರಣಿಶ್ರೇಷ್ಟ, ಗೇಮ್ ಚೇಂಜರ್, ಬೆಸ್ಟ್ ಕೀಪರ್, ಬೆಸ್ಟ್ ಫೀಲ್ಡರ್, ಬೆಸ್ಟ್ ಸ್ಟ್ಯಾಂಡಿಂಗ್ ಪ್ಲೇಯರ್, ಪಿಂಚ್ ಹಿಟ್ಟರ್, ವ್ಯಾಲ್ಯುವೇಬಲ್ ಪ್ಲೇಯರ್ ಪ್ರಶಸ್ತಿ ಜೊತೆಗೆ ಪ್ರತಿ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಕ್ಲಬ್ ಅಧ್ಯಕ್ಷ ಆಂಟನಿ ಒಲಿವೆರಾ, ಕಾರ್ಯದರ್ಶಿ ಜ್ಯೋ ಡಿ’ಸೋಜ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ್ ಡಿ’ಸೋಜ, ಸಂಯೋಜಕರಾದ ರಾಕೇಶ್ ಜೆ.ಮಸ್ಕರೇನ್ಹಸ್, ಆಲನ್ ಮಿನೇಜಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಯಾರ ಪಾಲಾಗಲಿದೆ ಸಿಪಿಎಲ್-3 ಟ್ರೋಫಿ?.
ಪಂದ್ಯಾಕೂಟದಲ್ಲಿ ಕಲ್ಲಾರೆ ರೋಶನ್ ರೆಬೆಲ್ಲೋ ಮಾಲಕತ್ವದ ಸಿಝ್ಲರ್ ಸ್ಟ್ರೈಕರ‍್ಸ್, ದರ್ಬೆ ದೀಪಕ್ ಮಿನೇಜಸ್ ಮಾಲಕತ್ವದ ಸೋಜಾ ಸೂಪರ್ ಕಿಂಗ್ಸ್, ಕಿರಣ್ ಡಿ’ಸೋಜ ನೀರ್ಪಾಜೆ ಹಾಗೂ ಮೆಲ್ವಿನ್ ಪಾಸ್ ನೂಜಿ ಮಾಲಕತ್ವದ ಕ್ರಿಶಲ್ ವಾರಿಯರ‍್ಸ್, ಪ್ರದೀಪ್ ವೇಗಸ್(ಬಾಬಾ) ಶಿಂಗಾಣಿ ಮಾಲಕತ್ವದ ಫ್ಲೈ ಝೋನ್ ಅಟ್ಯಾಕರ‍್ಸ್, ಕೂರ್ನಡ್ಕ ಸಿಲ್ವೆಸ್ತರ್ ಡಿ’ಸೋಜ ಮಾಲಕತ್ವದ ಎಸ್.ಎಲ್ ಗ್ಲ್ಯಾಡಿಯೇಟರ‍್ಸ್, ಓಸ್ವಾಲ್ಡ್ ಲೂವಿಸ್ ಹಾಗೂ ಲೆಸ್ಟರ್ ಲೂವಿಸ್ ಮಾಲಕತ್ವದ ಲೂವಿಸ್ ಕ್ರಿಕೆಟರ‍್ಸ್ ತಂಡಗಳ ನಡುವೆ ತೃತೀಯ ಆವೃತ್ತಿಯ ಪಂದ್ಯಾಕೂಟದ ಟ್ರೋಫಿಯನ್ನು ಮುತ್ತಿಕ್ಕಲು ಜಿದ್ದಾಜಿದ್ದಿನ ಹೋರಾಟ ನಡೆಯಲಿದ್ದು ಯಾರ ಪಾಲಾಗಲಿದೆ ಸಿಪಿಎಲ್-3 ಟ್ರೋಫಿ ಎಂದು ಕ್ರಿಕೆಟ್ ಪ್ರಿಯರು ತುದಿಗಾಲಲ್ಲಿ ಸಂಜೆ ಹೊತ್ತು ಕಾದು ನೋಡಬೇಕಾಗಿದೆ. ಚೊಚ್ಚಲ ಆವೃತ್ತಿಯಲ್ಲಿ ಸಿಝ್ಲರ್ ಸ್ಟ್ರೈಕರ‍್ಸ್ ಚಾಂಪಿಯನ್ ಆಗಿ, ಸೋಜಾ ಸೂಪರ್ ಕಿಂಗ್ಸ್ ರನ್ನರ್ಸ್ ಆಗಿ, ದ್ವಿತೀಯ ಆವೃತ್ತಿಯಲ್ಲಿ ಲೂವಿಸ್ ಕ್ರಿಕೆಟರ‍್ಸ್ ಚಾಂಪಿಯನ್ ಆಗಿ, ಸಿಝ್ಲರ್ ಸ್ಟ್ರೈಕರ‍್ಸ್ ರನ್ನರ‍್ಸ್ ಆಗಿ ಹೊರ ಹೊಮ್ಮಿತ್ತು.

ಟೇಬಲ್ ಟಾಪ್ ನೇರ ಫೈನಲಿಗೆ..
ಲೀಗ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾಕೂಟದಲ್ಲಿ ಅಂಕಪಟ್ಟಿ(ಟೇಬಲ್ ಟಾಪ್)ಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವು ನೇರವಾಗಿ ಫೈನಲಿಗೆ ಅರ್ಹತೆ ಪಡೆಯಲಿದೆ. ಬಳಿಕದ ಎರಡನೇ ಹಾಗೂ ಮೂರನೇ ಸ್ಥಾನ ಪಡೆದ ತಂಡಗಳ ಮಧ್ಯೆ ಸೆಮಿಫೈನಲ್ ನಡೆಯಲಿದ್ದು, ಇದರಲ್ಲಿ ವಿಜೇತವಾದ ತಂಡವು ಫೈನಲಿಗೆ ನೆಗೆಯಲಿದೆ.

LEAVE A REPLY

Please enter your comment!
Please enter your name here